ಬಂಟ್ವಾಳ; ತಾಲೂಕಿನ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಂದಿನ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬುಧವಾರ ತಾಲೂಕಿನ ವಿವಿಧೆಡೆಗೆ ಬೇಟಿ ನೀಡಿದ ಅವರು ಕರೋಪಾಡಿ ಹಾಗೂ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳ ನ್ನು ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
6

3 (1)

5
ಸಂಗಬೆಟ್ಟುವಿನಲ್ಲಿ ಸುಮಾರು 36 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ಪುಚ್ಚೇರಿಯಲ್ಲಿ ಜಾಕ್ ವೆಲ್ ಹಾಗೂ ಹತ್ತಿರದ ಎತ್ತರದ ಪ್ರದೇಶದಲ್ಲಿ ನೀರಿನ ಶುದ್ದೀಕರಣ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದರು. ಪಲ್ಘುಣಿ ನದಿಯಿಂದ ನೀರು ಒದಗಿಸುವ ಕಾಮಗಾರಿ ಇದಾಗಿದ್ದು 16 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು. 26 ಕೋಟಿ ರೂ ವೆಚ್ಚದ ಕರೋಪಾಡಿ ಬ.ಗ್ರಾ.ಕು.ನೀರಿನ ಯೋಜನೆಯ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಸಜೀಪಮುನ್ನೂರು ಗ್ರಾಮದ ಆಲಾಡಿಯಲ್ಲಿ ನಿಮರ್ಾಣಹಂತದಲ್ಲಿರುವ ಜಾಕ್ವೆಲ್, ಕಂಚಿನಡ್ಕಪದವಿನಲ್ಲಿ ಶುದ್ಧೀಕರಣ ಘಟಕ, ಮಂಚಿಗ್ರಾಮದಲ್ಲಿನ ನೀರಿನ ಟ್ಯಾಂಕ್ ಅನ್ನು ಅಧಿಕಾರಿಗಳ ಸಹಿತರಾಗಿ ವೀಕ್ಷಿಸಿದ ಸಚಿವರು, ಕಾಮಗಾರಿ ಹಂತದಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ವಿದ್ಯುತ್ ಗಾಗಿ ಪ್ರತ್ಯೇಕ ಫೀಡರ್

ದಿನದ 24 ಗಂಟೆ ಕಾಲ ಕುಡಿಯುವ ನೀರು ಒದಗಿಸಲು ನಿರಂತರ ವಿದ್ಯುತ್ ಅಗತ್ಯವಿರುವ ಹಿನ್ನೆಲೆಯಲ್ಲಿ ಪ್ರತೇಕ ಎಕ್ಸ್ಪ್ರೆಸ್ ಫೀಡರ್ ಅಳವಡಿಸಲಾಗುವುದು ಎಂದ ಅವರು, ಇದಕ್ಕಾಗಿ ಇಲಾಖೆಯಿಂದ ಅನುಮತಿಪಡೆಯಲಾಗಿದೆ ಎಂದು ಸಚಿವ ರೈ ತಿಳಿಸಿದರು.
ಮಾಣಿ ಬಹುಗ್ರಾಮ ಯೋಜನೆಗೆ ಶೀಘ್ರ ಶಂಕುಸ್ಥಾಪನೆ

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾಣಿ ಆಸುಪಾಸಿನ ಗ್ರಾಮಗಳಿಗೆ ನೀರು ಒದಗಿಸಲು 16.5 ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಬಳಿಕ ರಾಯಿ ಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೀರಿನ ಟ್ಯಾಂಕ್, ಪಂಜಿಕಲ್ಲು ವಿನಲ್ಲಿ ಪೈಪ್ಲೈನ್ ಹಾಗೂ ಟ್ಯಾಂಕ್ ಹಾಗೂ ಚೆನ್ನೈತ್ತೋಡಿ ಗ್ರಾಮದಲ್ಲಿ ಬ.ಗ್ರಾ.ಕು.ನೀರಿನ ಯೋಜನೆಯ ಪೈಪ್ಲೈನ್ ವೀಕ್ಷಣೆ ನಡೆಸಿ, ಕಾಮಗಾಋಇಗೆ ಚುರುಕುಮುಟ್ಟಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ಮಮತಾಗಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಅಬ್ಬಾಸ್ ಆಲಿ, ಕೆ.ಮಾಯಿಲಪ್ಪ ಸಾಲಿಯಾನ್, ತಾ.ಪಂ.ಸದಸ್ಯರಾಧ ಬಿ.ಪದ್ಮಶೇಖರ ಜೈನ್, ಮಾಧವಮಾವೆ, ದೇವಿಕಾ ರೈ, ಗುತ್ತಿಗೆದಾರ ಸುಧಾಕರ ಶೆಟ್ಟಿ , ಕೊಳ್ನಾಡು ಗ್ರಾ.ಪಂ.ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸಾಲೆತ್ತೂರು ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಮಾಧವ ಮಾವೆ, ಸಂಗಬೆಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಪ್ರಭಾಕರ ಪ್ರಭು, ಶಿವಾನಂದ ರೈ , ಸದಸ್ಯರಾದ ದೇವಪ್ಪ ಕರ್ಕೇರ, ಮೈಯ್ಯದ್ದಿ , ಶೇಖರ ನಾಯ್ಕ , ಪ್ರಮುಖರಾದ ಸೀತಾರಾಮ ಶೆಟ್ಟಿ , ಕ್ಸೇವಿಯರ್ ಡಿಸೋಜ, ಕಾರ್ಯ ನಿರ್ವಾಹಕ ಅಭಿಯಂತರ ಜಯಪ್ರಕಾಶ್, ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಗಿರೀಶ್ ಕೆ.ಪಿ., ಕಿರಿಯ ಅಭಿಯಂತರ ಜಗದೀಶ್ ನಿಂಬಾಳ್ಕರ್, ಕಂಪೆನಿ ಅಭಿಯಂತರ ಅಭಿನಂದನ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *