ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.9ರಂದು ಬುಧವಾರ ತೆನೆ ಹಬ್ಬವನ್ನು ಆಚರಿಸಲಾಗುವುದು. ಆಂದು ಬೆಳಗ್ಗೆ ಸಾವಿರ ಸೀಮೆಯ ಭಕ್ತಾದಿಗಳು ಇದರಲ್ಲಿ ಪಾಲ್ಗೊಳ್ಳುವರು. ಅಖಿಲೇಶ್ವರ ದೇವಸ್ತಾನದ ಹತ್ತಿರದ ಗದ್ದೆಯಲ್ಲಿ ನಾಟಿಮಾಡಿದ ಕೊರಳುಗಳನ್ನು ಅಲ್ಲಿಂದ ದೇವಸ್ಥಾನಕ್ಕೆ ತಂದು ದ್ವಜಸ್ಥಂಭದ ಬುಡದಲ್ಲಿ ಇಟ್ಟು ದೇವಳದ ಅರ್ಚಕರು ಹಾಗೂ ತಂತ್ರಿಯವರು ಬಂದು ಅದನ್ನು ದೇವರ ಹತ್ತಿರ ಇಟ್ಟು ಪೂಜೆ ನೆರವೇರಿಸುತ್ತಾರೆ . ನಂತರ ಸಾವಿರ ಸೀಮೆಯ ಭಕ್ತಾಧಿಗಳು ದೇವಳದ ಸುತ್ತಲು ಸಾಲಾಗಿ ಬಾಳೆಎಲೆಯಲ್ಲಿ ಕಾದಿರುತ್ತಾರೆ ಆವಾಗ ಅರ್ಚಕರು ಬಂದು ಕುಂಕುಮ ಕೊರಳುಗಳನ್ನು ಭಕ್ತಾಧಿಗಳಿಗೆ ನೀಡುತ್ತಾರೆ.ಎಲ್ಲರ ದೇವರ ಪ್ರಸಾದ ಸ್ವೀಕರಿಸಿ ಕೊರಳನ್ನು ಮನೆಯಲ್ಲಿ ಕೊಂಡುಹೋಗಿ ಮನೆಮನೆಗಳಲ್ಲಿ ತೆನೆ ಹಬ್ಬ ಆಚರಿಸುತ್ತಾರೆ. ಪೊಳಲಿ ಭಾಗದ ಜನರು ದೇವರ ನೈವೇದ್ಯವನ್ನು ಕೊಂಡೋಗಿ ಮನೆಯಲ್ಲಿ ಹೊಸಕ್ಕಿ (ಪುದ್ದರು) ಊಟವನ್ನು ಮಾಡುತ್ತಾರೆ

By Suddi9

Leave a Reply

Your email address will not be published. Required fields are marked *