ಬಂಟ್ವಾಳ: ಕಳೆದ 23ವರ್ಷ ಸಾರ್ಥಕ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ, ಸ.ಹಿ.ಪ್ರಾ.ಶಾಲೆ, ಕುದ್ದುಪದವಿಗೆ ವರ್ಗಾವಣೆಗೊಂಡ ಶ್ರೀಮತಿ ರೇವತಿ ಬಿ.ಇವರನ್ನು ಆ.25ರಂದು ಹಾರ್ದಿಕವಾಗಿ ಬೀಳ್ಕೊಡಲಾಯಿತು.
newz001ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ಗ್ರಾಮಪಂಚಾಯತ್ ಅಧ್ಯಕ್ಷರಾದ ರವೀಸ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಬಾಸ್ಕರ್ ಶೆಟ್ಟಿಗಾರ್, ಶ್ರೀಮತಿ ನೆಬಿಸಾ ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಬಿ.ಎಂ.ಹಸೈನಾರ್, ಉಪಾಧ್ಯಕ್ಷರಾದ ಶ್ರೀಮತಿ ಪ್ರಪುಲ್ಲಾ ಹಾಗೂ ಸದಸ್ಯರು, ಮಜಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ನಾರಾಯಣ ಪೂಜಾರಿಯವರು ಉಪಸ್ಥಿರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ರಾಮಚಂದ್ರ ನಾಯ್ಕ ಬಿ.ಸ್ವಾಗತಿಸಿದರು. ಶ್ರೀ ಹರಿಶಂಕರ್ ಭಟ್, ಶ್ರೀಮತಿ ಯಮುನಾ ಮತ್ತು ಶ್ರೀಮತಿ ಶೋಭಲತಾರವರು ಅನಿಸಿಕೆ ವ್ಯಕ್ತಪಡಿಸಿದರು. ಶ್ರೀಮತಿ ಗೀತಾ ಎಸ್. ವಂದಿಸಿದರು. ಶ್ರೀಮತಿ ರಶ್ಮಿ ಯಂ.ವಿ. ಕಾರ್ಯಕ್ರಮ ನಿರೂಪಣೆ ಮಾಡಿದರು.

By suddi9

Leave a Reply

Your email address will not be published. Required fields are marked *