ಸಮಾಜ ಸೇವೆ ಸ್ಪರ್ಧೆ ರಹಿತವಾಗಿರಲಿ-ಪ್ರಕಾಶ್ ಬಿ.ಭಂಡಾರಿ
ಮುಂಬಯಿ : ಶ್ರೀ ರಜತ ಸಂಘಇದರ ನವಿ ಮುಂಬಯಿಯ ಶಾಖೆಯ ನೂತನ ಕಾರ್ಯಾಲಯದ ಉದ್ಘಾಟನೆ ಕಳೆದ ರವಿವಾರ ಗಣಹೋಮ, ಭಜನೆ ಹಾಗೂ ಇತ್ಯಾದಿ ಧಾರ್ಮಿಕ ಪೂಜೆಗಳೊಂದಿಗೆ ನವಿ ಮುಂಬಯಿ ಸಂಘದ ಅಧ್ಯಕ್ಷ ಸತೀಶ್ ಸಾಲಿಯಾನ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೊಲೀಸ್ ಅಧಿಕಾರಿ ಪ್ರಕಾಶ್ ಬಿ.ಭಂಡಾರಿ ರಿಬ್ಬನ್ ಕತ್ತರಿಸಿ ಹಾಗೂ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಧಾರ್ಮಿಕ ಮುಂದಾಳು ಅಣ್ಣಿ ಸಿ.ಶೆಟ್ಟಿದೀಪ ನವಿ ಮುಂಬಯಿ ಶಾಖೆಯ ನೂತನ ಕಾರ್ಯಾಲವನ್ನು ಪ್ರಜ್ವಲಿಸಿ ಉದ್ಘಾಟಿಸಿದರು.
ಶ್ರೀ ರಜಕ ಸಂಘದ ಕಾರ್ಯ ವೈಖರಿ ಹಾಗೂ ಇತ್ತೀಚೆಗೆ ಕಂಡು ಬರುತ್ತಿರುವ ಬೆಳವಣಿಗೆಯನ್ನು ಶ್ಲಾಘಿಸುತ್ತಾ, ಸತೀಶ್ ಸಾಲಿಯಾನ್‍ರವರ ಅಧ್ಯಕ್ಷತೆಯಲ್ಲಿ ಇನ್ನಷ್ಟೂ ಅಭಿವೃಧ್ದಿಯಾಗುತ್ತಿರಲಿ.ವ್ಯವಹಾರದಲ್ಲಿ ವ್ಯಾಪರದಲ್ಲಿ ನಾವುಇತರರೊಡನೆ ಸ್ಪರ್ಧಿಸಬಹುದು ಆದರೆ ಸಾಮಾಜಿಕ ಕಾರ್ಯದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಅಗತ್ಯವಿದೆ. ಸಂಘದ ಏಳಿಗೆಗೆ ಯು ಪೀಳಿಗೆಯನ್ನು ಉತ್ತೇಜಿಸಬೇಕು, ಅವರನ್ನು ಪ್ರೋತ್ಸಾಹಿಸಬೇಕು ಶೀಘ್ರವೇ ರಜಕ ಸಂಘದ ತನ್ನದೇ ಆದ ಭವನದ ಕನಸು ನನಸಾಗುವಂತೆಪ್ರಕಾಶ್ ಭಂಡಾರಿ ಹಾರೈಸಿದರು. ಧಾರ್ಮಿಕ ಕಾರ್ಯಗಳಾಗಲಿ, ಸಂಸ್ಕಾರಯುಕ್ತ ವಿಧಿಗಳಾಗಲಿ, ರಜಕರ ಸ್ಥಾನ ಅತೀ ಪ್ರಾಮುಖ್ಯವಾದದ್ದು ಎಂದು ವಿವರಿಸುತ್ತಾ ಸಮಾಜದ ಋಣ ತೀರಿಸಬೇಕಾದರೆ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಲೇ ಬೇಕು ಎಂದು ಅಣ್ಣಿಶೆಟ್ಟಿತಿಳಿಸಿದರು. ನನಿ ಮುಂಬಯಿಯ ಗೌರವಾಧ್ಯಕ್ಷನಾರಾಯಣ ಕುಂದರ್, ಅಧ್ಯಕ್ಷಕಿರಣ್ ಕುಂದರ್, ಉಪಾಧ್ಯಕ್ಷರವಿ ಸಾಲಿಯನ್, ಕಾರ್ಯದರ್ಶಿ ಮುಕೆಶ್ ಕುಂದರ್, ಮಾಜಿ ಪದಾಧಿಕಾರಿಗಳಾದ ಜಯ ಮಡಿವಾಳ, ಸುದೇಶ್ ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆನ್ಯಾಯವಾದಿ ಶ್ರೀಮತಿ ಗೀತಾ ಕುಂದರ್ ಹಾಗೂ ಯುವ ವಿಭಾಗಧ್ಯಕ್ಷತರುಣ್ ಕುಂದರ್ ಅವರ ಶ್ರಮವನ್ನು ಪರಿಗಣಿಸಲಾಯಿತು. ಸಂಘದ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಜೊತೆ ಕಾರ್ಯದರ್ಶಿ ಶ್ರೀಮತಿ ಸರೋಜಿನಿ ಕುಂದರ್, ಕೋಶಾಧಿಕಾರಿಗಳಾದ ದಿನೇಶ್ ಕುಂದರ್ ಹಾಗೂ ವಿಜಯ್ ಕುಂದರ್, ಹಿರಿಯ ಸದಸ್ಯರುಗಳಾದ ಪಿ.ಎಂ ಸಾಲಿಯಾನ್, ಬಾಲಕೃಷ್ಣ ಸಾಲಿಯಾನ್, ಪಾಂಡು ಮಡಿವಾಳ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಜ್ಯೋತಿ ಸಾಲಿಯಾನ್, ಸಾಂಸ್ಕøತಿಕ ವಿಭಾಗದ ಶ್ರೀಮತಿ ಸುಮಿತ್ರಾ ಪಲಿಮಾರ್ ಮತ್ತಿತರರು ಸಂಘದ ಅಭಿವೃದ್ಧಿಯ ಬಗ್ಗೆ ಸಂತೋಷವ್ಯಕ್ತಪಡಿಸಿ ಶುಭ ಹಾರೈಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಮಡಿವಾಳ್ ದಾನಿಗಳನ್ನು ಪರಿಚಯಿಸಿದರು. ಸಂಘದ ಎಲ್ಲಾ ಪ್ರಾದೆಶಿಕ ಸಮಿತಿಗಳ ಸದಸ್ಯರು ಭಜನಾ ಕಾರ್ಯಕ್ರಮ ನೆರವೇರಿಸಿದರು. ವಸಾಯಿ ಶಾಖೆಯ ಕಾರ್ಯಾಧ್ಯಕ್ಷದೇವೆಂದ್ರ ಬುನಾನ್, ಪಶ್ಚಿಮ ವಲಯದ ಕಾರ್ಯಾಧ್ಯಕ್ಷ ಅಶೋಕ್ ಕುಂದರ್, ಡೊಂಬಿವಲಿ ಕಾರ್ಯಾಧ್ಯಕ್ಷಸಂಜೀವ ಎಕ್ಕಾರು, ಉಪಾಧ್ಯಕ್ಷಸುಹಾಸ್ ಸಾಲಿಯಾನ್ ಉಪಸ್ಥಿತರಿದ್ದರು.







