ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ಗಳೂ ಕಳೆದ ಭಾನುವಾರ ಸಯಾನ್‍ನ ಗೋಕುಲದಲ್ಲಿ ಸಂಪ್ರದಾಯಿಕವಾಗಿ ಸಂಭ್ರಮಿಸಿದ ಶ್ರೀಕೃಷ್ಣಷ್ಟಮಿಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಗೋಕುಲವಾಣಿ ಮಾಸಿಕದ `ಗೋಕುಲಾಷ್ಟಮಿ ವಿಶೇಷಾಂಕ’ ಬಿಡುಗಡೆಗೊಳಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಆಡಳಿತ ನಿರ್ದೇಶಕ ಪ್ರದೀಪ್ ಕುಮಾರ್, ಸಮಾಜ ಸೇವಕ ಎಂ.ಹೆಚ್ ಮುರಳೀಧರ್, ಬಿಎಸ್‍ಕೆಬಿ ಅಸೋಸಿ ಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಗೌ| ಪ್ರ| ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಕಾರ್ಯದರ್ಶಿ ಎ.ಎಸ್ ರಾವ್, ಗೋಕುಲವಾಣಿ ಮಾಸಿಕದ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ಪ್ರೇಮಾ ಎಸ್.ರಾವ್ ಎ.ಪಿ.ಕೆ ಪೆÇೀತಿ ಉಪಸ್ಥಿತರಿದ್ದರು.
ಕಥಾ ಸ್ಪರ್ಧೆ-2015 ಫಲಿತಾಂಶ: `ಗೋಕುಲವಾಣಿ’ ವಿಶೇಷಾಂಕಕ್ಕಾಗಿ ಆಯೋಜಿಸಿದ ಶ್ರೀಕೃಷ್ಣ ಜನ್ಮಾಷ್ಟಮಿ ಅಖಿಲ ಭಾರತ ಕನ್ನಡ ಕಥಾ ಸ್ಪರ್ಧೆ-2015 ರಲ್ಲಿ `ದುರ್ಗವ್ವ’ (ಲೇಖಕರು: ವಿದ್ಯಾಧರ ಮುತಾಲಿಕ ದೇಸಾಯಿ), `ಪಂಜಣ್ಣ ಕುಕ್ಕಿನ ಚರಿತ್ರೆ’ (ಲೇ: ಡಾ| ಬಿ.ಜನಾರ್ದನ್ ಭಟ್) ಹಾಗೂ `ನೆನಿಸ್ಕೊಂಡು ನೆನಿಸ್ಕೊಂಡು’ (ಲೇ: ಪ್ರವೀಣ್ ಕುಮಾರ್ ಜೆ) ಅನುಕ್ರಮವಾಗಿ ಮೊದಲನೇ, ಎರಡನೇ, ಹಾಗೂ ಮೂರನೇ ಬಹುಮಾನಗಳಿಗೆ ಪಾತ್ರವಾಗಿದ್ದಾರೆ. ಲೇಖಕರು
ಬಹುಮಾನವಾಗಿ ನಗದು ರೂಪಾಯಿ 7000/-, ರೂ. 5000/-, ಹಾಗೂ ರೂ.,3000/- ಕ್ರಮವಾಗಿ ಪಡೆದಿರುತ್ತಾರೆ. `ದಳ್ಳುರಿ’ (ಲೇ: ಟಿ. ಎ. ಎನ್. ಖಂಡಿಗೆ) ಪೆÇ್ರೀತ್ಸಾಹಕ ಬಹುಮಾನ ರೂಪಾಯಿ1000/- ಕ್ಕೆ ಪಾತ್ರವಾಗಿದೆ.
ಇವರೆಲ್ಲರಿಗೂ ಬಹುಮಾನದ ಮೊತ್ತ ಹಾಗೂ ಪ್ರಮಾಣ ಪತ್ರಗಳನ್ನು ಸದ್ಯದಲ್ಲೆ ತಲಪಿಸಲಾಗುವುದು ಎಂದು ಬಿಎಸ್‍ಕೆಬಿ ಅಸೋಸಿಯೇಶನ್‍ನ ಗೋಕುಲವಾಣಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

