ಸ್ವರ್ಗಸ್ಥ ಸಂಶೋಧಕ ಡಾ| ಎಂ.ಎಂ ಕಲಬುರ್ಗಿ ಅವರಿಗೆ ಶ್ರದ್ಧಾಂಜಲಿ
ಮುಂಬಯಿ: ಹೊಸ ನಾಟಕ ಎಂಬ ಹೆಸರಿನಲ್ಲಿ ಸಂಗೀತದ ಪರಿಚಯವಿಲ್ಲದ ಯೂನಿವರ್ಸಿಟಿ ಇಂಗ್ಲೀಷ್ ಲೆಕ್ಚರ್‍ರಿಂದಾಗಿ ಸಂಗೀತ ಬಿಟ್ಟು ಡಾಯ್‍ಲಾಗ್‍ಗೆ ಮಹತ್ವವನ್ನು ನೀಡಲಾಯಿತು. ಡಾಯ್‍ಲಾಗ್ ಹಾವಳಿ ಬಂದ ನಂತರ ಕನ್ನಡ ನಾಟಕ ಸತ್ತು ಹೋಯ್ತು. ನಾಟಕಕ್ಕೆ ಶಾಸ್ತ್ರೀಯ ಸಂಗೀತದ ಅಗತ್ಯವಿಲ್ಲ. ಕವಿತೆ ಕಲಾವಿದನ ಎದೆಯೊಳಗೆ ಹಾಡಿರಬೇಕು. ವಿಚಾರವನ್ನು ಹೇಗೆ ಮುಟ್ಟಿಸಬೇಕು ಎಂಬ ವ್ಯವಹಾರ ಇರಬೇಕು, ಇಲ್ಲ ಎಂದರೆ ಬಣ ಹರಾಟೆಆಗುತ್ತದೆ. 70ರ ದಶಕದಲ್ಲಿ ಕಾರ್ನಾಡ್, ಕಾಂಬಾರ, ಕಾರಂತರು ಮತ್ತೆ ರಂಗ ಭೂಮಿಯನ್ನು ಹೊಸ ದೀಸೆಯತ್ತ ಕೊಂಡೊಯ್ದರು ಎಂದು ನಾಡಿನ ಹೆಸರಾಂತ ನಿರ್ದೇಶಕ, ನಾಟಕಕಾರ, ನಟ ಡಾ| ಮಂಜುನಾಥ ತಿಳಿಸಿದರು.

ಇಂದಿಲ್ಲಿ ಶನಿವಾರ ಸಾಂತಕ್ರೂಜ್ ಪೂರ್ವದ ಕಲೀನಾ ವಿದ್ಯಾನಗರಿಯಲ್ಲಿನ ಮುಂಬಯಿ ವಿಶ್ವ ವಿದ್ಯಾಲಯದ ಡಬ್ಲ್ಯೂಆರ್‍ಐಸಿ ಸಭಾಗೃಹದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ವಿಭಾಗಮುಂಬಯಿ ವಿಶ್ವವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಸಲ್ಪಟ್ಟ `ರಂಗ ಸಂವಾದ’ ವನ್ನುದ್ದೇಶಿಸಿ ಡಾ| ಮಂಜುನಾಥ ಮಾತನಾಡಿದರು. ಕನ್ನಡದ ಖ್ಯಾತ ಸಂಶೋಧಕ ಸಾಹಿತಿ ಡಾ| ಜಿ.ವಿ ಕುಲಕರ್ಣಿ ಅವರು ಅಧ್ಯಕ್ಷತೆಯಲ್ಲಿ ಮತ್ತು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ|ಜಿ.ಎನ್.ಉಪಾಧ್ಯ ಅವರ ಸಮನ್ವಯಕತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ರಂಗತಜ್ಞರಾದ ಡಾ| ಭರತ್ ಕುಮಾರ್ ಪೆÇಲಿಪು, ಮೋಹನ್ ಮಾರ್ನಾಡ್, ಅಹಲ್ಯಾ ಬಲ್ಲಾಳ ಮತ್ತಿತರರು ಪಾಲ್ಗೊಂಡು ತಮ್ಮ ವಿಚಾರವನ್ನು ಮಂಡಿಸಿದರು. ಸಾಹಿತ್ಯ ಅಕಾಡೆಮಿ ದೇಶದಾದ್ಯಂತದ 22 ಭಾಷೆಗಳ ಬಲವರ್ಧನೆಗೈಯುತ್ತಿದೆ. ಕನ್ನಡಕ್ಕೂ ಅದರ ನೆರವು ಅನುಪಮವಾಗಿದೆ. ವಿದ್ಯಾರ್ಥಿಗಳಿಗೆ ನಾಟಕವಾಗಿ ಪಠ್ಯವಾಗಿರಿಸಿದ ಉದ್ದೇಶ ಈ ಕಾರ್ಯಕ್ರಮದ್ದು. ರಂಗರಸಗ್ರಹಣದ ಪ್ರಯತ್ನ ಇದರ ಮುಖ್ಯ ಉದ್ದೇಶವಾಗಿದ್ದು, ರಂಗ ಭೂಮಿ ಜೀವಾಂತ ಮಾಧ್ಯಮ ಆಗಿಸಲು ನಮ್ಮ ಪ್ರಯತ್ನವಾಗಿದೆ ಎಂದು ಸಮನ್ವಯಕ ಭಾಷಣದಲ್ಲಿ ಪ್ರೊ| ಜಿ.ಎನ್.ಉಪಾಧ್ಯ ಉಲ್ಲೇಖಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳ ಹತ್ಯೆಗೆ ಒಳಗಾದ ಕನ್ನಡದ ಖ್ಯಾತ ಸಂಶೋಧಕ ಸಾಹಿತಿ ಡಾ| ಎಂ.ಎಂ ಕಲಬುರ್ಗಿ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ವಿಭಾಗದ ಅತಿಥಿs ಉಪನ್ಯಾಸಕ ಡಾ| ಜಿ.ವಿ ಕುಲಕರ್ಣಿ ಅವರು ಸ್ವರ್ಗಸ್ಥ ಕಲಬುರ್ಗಿ ಅವರಿಗೆ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಎಂ.ಎ, ಪಿಹೆಚ್.ಡಿ, ಕನ್ನಡ ಡಿಪೆÇ್ಲೀಮಾ, ಸರ್ಟಿಫಿಕೇಟ್ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾಥಿರ್sಗಳಾದ ಹೇಮಾ ಎಸ್.ಅಮೀನ್, ಗೀತಾ ಆರ್‍ಎಸ್, ಕುಮುದ ಆಳ್ವ, ಸೂರಪ್ಪ ಕುಂದರ್, ಎಸ್.ಜ್ಯೋತಿಶ್ರೀ, ಆನಿತಾ ಶೆಟ್ಟಿ, (ಎಂ.ಎ), ಶಿವರಾಜ್ ಎಂ.ಜಿ, ರಾಮ ಉಡುಪ(ಪಿಎಚ್‍ಡಿ), ಹರ್ಷ ಭಟ್, ಸಂಜಯ್ ಶೆಟ್ಟಿ, ಆಶಾ ಸುವರ್ಣ (ಡಿಪ್ಲೋಮಾ), ಐಗಾಲ್ ಅಂಬರೀಷ್, ಶಾಂತರಾಮ ಪವಾರ್, ಸೌಮ್ಯ ಎಂ.,ಸಾಟಮ್ ಪ್ರಕಾಶ್, ಸಂಭಾಪ್ರಸಾದ್ ಟಿಂಗೆ, ಶ್ರೀನಿಧಿ ಭಟ್, ಸ್ನೇಹಾ ಸೊಹಾನಿ, ಕಿಶೋರ್ ಮೋರೆ(ಸರ್ಟಿಫಿಕೇಟ್) ಅವರನ್ನು ಸುಖಾಗಮನ ಬಯಸಿ ಶುಭಾರೈಸಲಾಯಿತು. ಸುಶೀಲಾ ಎಸ್.ದೇವಾಡಿಗ ಮತ್ತು ಮಧುಸೂಧನ್ ರಾವ್ ಅವರು ರಂಗ ಗೀತೆಯನ್ನಾಡಿದರು. ವಿದುಷಿ ಶ್ಯಾಮಲ ಪ್ರಕಾಶ್ ಸಂವಾದಕರನ್ನು ಪರಿಚಯಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ|ಪೂರ್ಣಿಮಾ ಎಸ್.ಶೆಟ್ಟಿಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.



















