ಮುಂಬಯಿ: ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ನಿಮಿತ್ತ ಇಂದಿಲ್ಲಿ ಶನಿವಾರ ಸಂಜೆ ಸಯಾನ್‍ನಲ್ಲಿನ ಅಸೋಸಿಯೇಶನ್‍ನ ಗೋಕುಲ ಮಂದಿರದಲ್ಲಿ ಎರಡು ದಿನಗಳ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಲಾಯಿತು. ಶ್ರೀಕೃಷ್ಣ ದೇವರ ಪಾವಿತ್ರ್ಯ ಸಾನಿಧ್ಯದಲ್ಲಿ ಪ್ರಧಾನ ಅರ್ಚಕ ಹರಿ ಭಟ್ ವಿವಿಧ ಪೂಜೆಗಳನ್ನು ನೆರವೇರಿಸಿ ಮಹಾರತಿಗೈದು ಶ್ರೀಕೃಷ್ಣಷ್ಟಮಿ ಆಚರಣೆಗೆ ಚಾಲನೆಯಿತ್ತು ಅನುಗ್ರಹಿಸಿದರು. ಇಂದಿಲ್ಲಿ ಶನಿವಾರ ಪ್ರಾತಃಕಾಲ ಮಂದಿರದಲ್ಲಿ ನಿತ್ಯಪೂಜೆ ನೆರವೇರಿದ ಬಳಿಕ ಗೋಕುಲ ಕಲಾವೃಂದ ಭಜನಾ ಮಂಡಳಿ ಮುಂಬಯಿ ಹಾಗೂ ಉಪನಗರಗಳ ವಿವಿಧ ಭಜನಾ ಮಂಡಳಿಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ 24 ಗಂಟೆಗಳ `ಅಖಂಡ ಹರಿನಾಮ ಸಂಕೀರ್ತನೆ’ಗೆ ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಕಾರ್ಯದರ್ಶಿ ಎ.ಎಸ್ ರಾವ್ ಪದಾಧಿಕಾರಿಗಳನ್ನೊಳಗೊಂಡು ಚಾಲನೆಯನ್ನಿತ್ತರು.

BSKBA Gokula Celebrating Krishnashtami-4

BSKBA Gokula Celebrating Krishnashtami-5

BSKBA Gokula Celebrating Krishnashtami-A1

BSKBA Gokula Celebrating Krishnashtami-A2

BSKBA Gokula Celebrating Krishnashtami-B1

BSKBA Gokula Celebrating Krishnashtami-C1ಈ ಶುಭಾವಸರದಲ್ಲಿ ಬಿಎಸ್‍ಕೆಬಿಎ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಪಿ.ಉಮೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಪಿ.ಸಿ ಎನ್ ರಾವ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಶ್ರೀಮತಿ ಶೈಲಿನಿ ರಾವ್, ಮಾಜಿ ಅಧ್ಯಕ್ಷಕೆ.ಸುಬ್ಬಣ್ಣ ರಾವ್ ಮತ್ತಿತರ ಪದಾಧಿಕಾರಿಗಳು, ಭಜನಾ ಮಂಡಳಿಗಳು ಹಾಗೂ ಭಕ್ತಾದಿಗಳು, ಉಪಸ್ಥಿತರಿದ್ದು, ತಡರಾತ್ರಿ ಜನ್ಮಾಷ್ಟಮಿ ಪೂಜೆ, ಅರ್ಘ್ಯ, ತೀರ್ಥಪ್ರಸಾದ ವಿತರಣೆ
ನಡೆಯಿತು. ಸಮಾಜದ ಮುಂದಾಳುಗಳಾದ ಪ್ರೇಮಾ ಎಸ್.ರಾವ್, ವಿಜಯಲಕ್ಷ್ಮೀ ಭಟ್, ಯು.ಮೋಹನ್ ರಾವ್, ಯು.ಉಮೇಶ್ ರಾವ್, ವಾಣಿ ಭಟ್, ಎಂ.ಹೆಚ್ ಮುರಳಿಧರ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಸದಸ್ಯರುಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದು, ತುಳುನಾಡ ಸಂಪ್ರದಾಯದಂತೆ ತಳಿರು ತೋರಣಗಳಿಂದ ಶೃಂಗಾರಿಸಲ್ಪಟ್ಟ ಗೋಕುಲ ಆವರಣ ಮತ್ತು ಫಲ-ಪುಷ್ಫ, ಅಡಿಕೆ ಪಿಂಗಾರಗಳಿಂದ ಅತ್ಯಾಕರ್ಷಕವಾಗಿ ಅಲಂಕರಿಸಲ್ಪಟ್ಟ ದೇವರ ಮಂಟಪವು ಶ್ರೀಕೃಷ್ಣಷ್ಟಮಿಗೆ ವಿಶೇಷ ಕಳೆ ನೀಡಿತು.

By suddi9

Leave a Reply

Your email address will not be published. Required fields are marked *