ಬಂಟ್ವಾಳ, ಸೆ. 6: ದ.ಕ.ಜಿಲ್ಲೆಯಲ್ಲಿ ಅತ್ಯಂತ ಅದ್ದೂರಿ ಮೊಸರು ಕುಡಿಕೆ ಎಂದು ಪ್ರಸಿದ್ದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರ ಆಶ್ರಯದ 83ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ಅತ್ಯಂತ ವೈಭವಯುತವಾಗಿ ಸಹಸ್ರಾರು ಸಂಖ್ಯೆಯ ಭಕ್ತರ, ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಸೆ. 6ರಂದು ಸಂಜೆ ನಡೆಯಿತು.


ಮಂದಿರದಲ್ಲಿ ಮಂಗಳಾರತಿ ಬಳಿಕ ಶ್ರೀಕೃಷ್ಣ ಪಲ್ಲಕಿಯನ್ನು ಹೊರಡಿಸಲಾಯಿತು. ಪಲ್ಲಕಿಗೆ ರಾ.ಸ್ವ. ಸಂಘದ ಡಾ| ಪ್ರಭಾಕರ ಭಟ್ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕಲ್ಲಡ್ಕ ಮೇಲಿನ ಪೇಟೆಯಿಂದ ಕೆ.ಸಿ.ರೋಡ್ ತನಕ ನಡೆದ ಮೆರವಣಿಗೆಯಲ್ಲಿ ದಾರಿನಡುವೆ ಅಲ್ಲಲ್ಲಿ ಎತ್ತರದ ಅಟ್ಟಳಿಗೆಯಲ್ಲಿ ಕಟ್ಟಿದ ಮೊಸರ ಕುಡಿಕೆಯನ್ನು ಒಡೆಯುತ್ತಿದ್ದ ಯುವಕರ ಸಾಹಸ ಪ್ರದರ್ಶನ ನಡೆಯಿತು.ಪ್ರೇಕ್ಷಕ ವರ್ಗದಿಂದ ಜಯಕಾರ, ಶ್ರೀಕೃಷ್ಣ ಉದ್ಘೋಶದ ಪ್ರೋತ್ಸಾಹ ದೊರೆತ್ತಿತ್ತು. ಕೆ.ಸಿ.ರೋಡಿನಿಂದ ತಿರುಗಿ ಬಂದ ಮೆರವಣಿಗೆ ಇಲ್ಲಿನ ಹಿ.ಪ್ರಾ. ಶಾಲೆಯಲ್ಲಿ ಸಮಾಪನಗೊಂಡು ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು.
ಸುಮಾರು ಐದು ನೂರು ಪುಟಾಣಿಗಳ ಸಾಲು ಸಾಲು ಶ್ರೀ ಕೃಷ್ಣ ವೇಷ, ಹತ್ತುಕ್ಕೂ ಅಕ ಸ್ತಬ್ದ ಚಿತ್ರಗಳು. ಮೋದಿ ವೇಷದ ಕಟೌಟ್, 30ಕ್ಕೂ ಅಕ ಚೆಂಡೆವಾದಕರ ನೃತ್ಯ ವೈವಿಧ್ಯ ಕಣ್ಮನ ಸೆಳೆದಿತ್ತು.
ಮೆರವಣಿಗೆಯಲ್ಲಿ ಮಂದಿರದ ದ್ದಾರ ಸಮಿತಿ ಕಾರ್ಯಾಧ್ಯಕ್ಷ ಜಿತೇಂದ್ರ ಎಸ್. ಕೊಟ್ಟಾರಿ, ಮಂದಿರದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಎ. ರುಕ್ಮಯ ಪೂಜಾರಿ, ಜಿ. ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ, ಪ್ರಮುಖರಾದ ಕ. ಕೃಷ್ಣಪ್ಪ, ಮೋನಪ್ಪ ದೇವಸ್ಯ, ರಾಜೇಶ್ ಕೊಟ್ಟಾರಿ ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.
ಚಿತ್ರ: ಕಿಶೋರ್ ಪೆರಾಜೆ,








