ವಾಮಂಜೂರು: ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿಣಿ, ದುರ್ಗಾಶಕ್ತಿ ಶಾಖೆ, ಜ್ಯೋತಿನಗರ, ದೇವರಪದವು ವಾಮಂಜೂರು ಇದರ ವತಿಯಿಂದ 2ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಜ್ಯೋತಿನಗರ ದೇವರ ಪದವು ವಾರ್ಡಿನಲ್ಲಿ ಸುಮಾರು 170 ಮನೆಗಳಿಗೆ ಅಕ್ಕಿ ವಿತರಣೆ ಸೇವಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಜರಂಗದಳ ಗುರುಪುರ ಪ್ರಖಂಡ ಸಂಚಾಲಕರಾದ ನವೀನ್ ಮೂಡುಶೆಡ್ಡೆ, ಸ್ಥಳೀಯ ಕಾರ್ಪೊರೇಟರ್‍ರಾದ ಹೇಮಲತ ರಘು ಸಾಲಿಯಾನ್, ಜೆ.ಪಿ.ಜಯಪ್ರಕಾಶ್ ಹರೀಶ್ ಮೂಡುಶೆಡ್ಡೆ, ಗೋರಕ್ಷಕ ಪ್ರಮುಖ್ ಮಹೇಂದ್ರ ವಾಮಂಜೂರು, ಸದಾನಂದ ವಾಮಂಜೂರು ಹಾಗೂ ದುರ್ಗಾಶಕ್ತಿ ಶಾಖೆ, ಬಜರಂಗದಳ ಅಧ್ಯಕ್ಷರು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.








