ಮುಂಬಯಿ: ಬೆಳ್ತಂಗಡಿ ನಿವಾಸಿ ಪತ್ರಕರ್ತ ಮನೋಹರ್ ಬಳಂಜ ಅವರ ಪುತ್ರಿ ದಿತಿಯ ಬಳಂಜ ಆಕೆಯ ಅನಾರೋಗ್ಯ ಕಡಿಮೆಯಾಗಲೇ ಇಲ್ಲ, ಮಂಗಳೂರಿನ ಖಾಸಾಗಿ ಆಸ್ಪತೆಯಲ್ಲಿ ದಿನಗಟ್ಟಲೆ ಚಿಕಿತ್ಸೆ ಆಯಿತು. ಆದರೂ ಏನೂ ಪ್ರಯೋಜನ ಕಾಣಲಿಲ್ಲ. ಉಜಿರೆ ಎಸ್‍ಡಿಎಂ ಆಸ್ಪತ್ರೆಯ ಮಕ್ಕಳ ವೈದ್ಯರು ಕೂಲಂಕಷ ತಪಾಸಣೆ ನಡೆಸಿದರು. ಮಗುವಿಗೆ ಪಿತ್ತಜನಕಾಂಗದ ಸಮಸ್ಯೆ ಇದೆ. ಜಾಂಡಿಸ್ ಬಂದಿದೆ. ಇದು ಉಲ್ಬಣವಾಗಿ ಲಿವರ್‍ಗೆ ಹಾನಿಯಾಗಿದೆ ಎಂದು ದಿನನಿತ್ಯ ತಜ್ಞರ ತಪಾಸಣೆಯಿಂದಲೇ ಬಳಲುತ್ತಿರುವ ಕು| ದಿತಿಯಳ ಆರೈಕೆಗಾಗಿನ ಖರ್ಚುವೆಚ್ಚಲಕ್ಷಗಟ್ಟಲೆಯಾಗಿದೆ. ತಂದೆ ಪತ್ರಕರ್ತ, ತಾಯಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ದಾದಿ. ಸುದ್ದಿಕೇಳಿ ಆಕಾಶ ಕಳಚಿ ಬಿದ್ದ ಅನುಭವ. ಕಳೆದ ಅನೇಕ ತಿಂಗಳುಗಳಿಂದ ಬಾಲೆಯ ರಕ್ಷಣೆಗಾಗಿ ಬೆಂಗಳೂರಿನ ಹಲವು ಆಸ್ಪತ್ರೆಗಳಿಗೆ ದೌಡಾಯಿಸಿದರು. ಇದೀಗ ಲಿವರ್ ಫೈಲ್ಯೂರ್ ಎಂಬುವುದಾಗಿ ತಿಳಿಯಲಾಗಿದೆ. ಮಗುವಿನ ಹೊಟ್ಟೆ ಊದಿ ಕೈ ಕಾಲು ಸಣ್ಣದಾಗಿದೆ. ಕಂಗಳ ಕಾಂತಿ ಕಳೆದು ಹಳದಿಯಾಗಿದೆ. ಮುದ್ದು ಮುಖದ ಕಂದಮ್ಮ ಬಿಳಿ ಅಂಗಿ ಕಂಡ ಕೂಡಲೇ ಚುಚ್ಚು ಮದ್ದು ಹಿಡಿದ ವೈದ್ಯರು ಬಂದರು ಎಂದೇ ಭಾವಿಸಿ ಬೊಡ್ಚಿ… ಬೊಡ್ಚಿ…ಎಂದು ಬೊಬ್ಬಿಟ್ಟು ಅರಚುತ್ತದೆ.

ಆ ಪುಟ್ಟ ಸೂಜಿಯ ಮೊನೆಯನ್ನು ಕಂಡಾಗ ಆಕೆಗೆ ಭಯಾನಕ ಅನುಭವ ಹೇಳಲಾಸಾಧ್ಯ. ಅನಾರೋಗ್ಯದ ನೋವು ಇನ್ನೂಭೀಭತ್ಸ ನಾರಾಯಣ ಹೃದಯಾಲಯದಲ್ಲಿ ತುರ್ತಾಗಿ ಪಿತ್ತಜನಕಾಂಗ ಕಸಿ (ಲಿವರ್ ಟ್ರಾನ್ಸ್‍ಫ್ಲಾಂಟೇಶನ್) ಶಸ್ತ್ರ ಚಿಕಿತ್ಸೆ ನಡೆಸಬೇಕಿದೆ. ಆಸ್ಪತ್ರೆಗೆ ದಾಖಲಿಸುವ ಮುನ್ನ 16 ಲಕ್ಷ ರೂ. ಠೇವಣಿ ಕಟ್ಟಬೇಕು. ಒಂದು ತಿಂಗಳ ಕಾಲ ಮಗುವನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಪಿತ್ತಜನಕಾಂಗ ಕಸಿ ಮಾಡಲು ಪಿತ್ಥಜನಕಾಂಗ ನೀಡುವ ದಾನಿಗಳ ಹುಡುಕಾಟ ನಡೆದಿದೆ. ಈ ತಿಂಗಳ ಕಾಲ ಶುಶ್ರೂಷೆಯಲ್ಲಿರಬೇಕು. ಇದಕ್ಕೆಲ್ಲ ಒಟ್ಟು ಕನಿಷ್ಠ 25 ಲಕ್ಷ ರೂಪಾಯಿಗಳ ಅಗತ್ಯವಿದೆ. ಪತ್ರಕರ್ತ ಸಹೋದರ ಮನೋಹರ್ ಬಳಂಜ ಅವರ ಪುತ್ರಿ ದಿತಿಯ ಕುರಿತು ನಾವೆಲ್ಲಾ ಸ್ಪಂದಿಸಬೇಕಿದೆ. ಪುಟ್ಟ ಬಾಲೆಯ ನೆರವಿಗಾಗಿ ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ಇವರ ಕೋರಿಕೆಯ ಮೇರೆಗೆ ಕು| ದಿತಿಯ ಬಳಂಜಳ ಚಿಕಿತ್ಸೆಗೆ ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಇದೀಗಲೇ ಕಾರ್ಯ ಪ್ರವೃತ್ತರಾಗಿ ಅಧ್ಯಕ್ಷ ಚಂದ್ರಶೇಖರ್ ಪಾಲೆತ್ತಾಡಿ ಅವರ ಮಾರ್ಗದರ್ಶನದಂತೆ ಆರೋಗ್ಯನಿಧಿಗಾಗಿ ಶ್ರಮಿಸುತ್ತಿದ್ದಾರೆ. ಧನ ಸಹಾಯ ನೀಡಲಿಪ್ಚಿಸುವ ಉದಾರ ದಾನಿಗಳು ಕೂಡಲೇ ರೋನ್ಸ್ ಬಂಟ್ವಾಳ್-9820292974 ಅಥವಾ ಚಂದ್ರಶೇಖರ್ ಪಾಲೆತ್ತಾಡಿ-9702476137 ಅವರನ್ನು ಸಂಪರ್ಕಿಸುವಂತೆ ಪತ್ರಕರ್ತ ಸಂಘವು ಕೋರಿದೆ.
