ಸುರತ್ಕಲ್: ಜೋಕಟ್ಟೆಯಲ್ಲಿ ಸಮೀಪ ಎಂ.ಅರ್.ಪಿ.ಎಲ್ ಮೂರನೇ ಹಂತದ ಕಾಮಗಾರಿಯನ್ನು ವಿರೋಧಿಸಿ ಇಂದು ನಾಗರಿಕ ಸಮಿತಿ ಮತ್ತು ಡಿ.ವೈ.ಯಪ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸುರತ್ಕಲ್ ಸಮೀಪದ ಜೋಕಟ್ಟೆಯಲ್ಲಿ ಎಂ.ಅರ್.ಪಿ.ಎಲ್ ಮೂರನೇ ಹಂತದ ಕಾಮಗಾರಿಯನ್ನು ಪಂಚಾಯತ್ ನಿರ್ಣಯದ ವಿರುದ್ದ ಮುಂದುವರಿಸಿದ್ದು, ಇದನ್ನು ವಿರೋದಿಸಿ ಇಂದು ಜೊಕಟ್ಟೆಯಲ್ಲಿ ನಾಗರಿಕ ಸಮಿತಿ ಮತ್ತು ಡಿ.ವೈ.ಯಪ್ ಐ ಪ್ರತಿಭಟನೆ ನಡೆಸಿದೆ .
suratkal pratibhatane

suratkal pratibhatane (3)

suratkal pratibhatane (2)

suratkal pratibhatane (1)
ಸ್ಥಳಕ್ಕೆ ಬೇಟಿ ನೀಡಿದ ಸುರತ್ಕಲ್ ಪೋಲಿಸರು ೧೧ ಮಂದಿ ಮಹಿಳೆಯರನ್ನು ಸಮೇತ ಒಟ್ಟು ೩೪ ಜನ ಪ್ರತಿಭಟನಾಕಾರರನ್ನು ಬಂದಿಸಿದರು. ಇದನ್ನು ವಿರೋಧಿಸಿ ಸಂಜೆ ಸಂಘಟನೆ ಕಾರ್ಯಕರ್ತರು ಸುರತ್ಕಲ್ ಠಾಣೆಗೆ ಮುತ್ತಿಗೆ ಹಾಕಿದ್ದು, ನೂರಾರು ಮಂದಿ ಕಾರ್ಯಕರ್ತರು ಬಾಗವಹಿಸಿದರು, ಈ ಸಂದರ್ಭ ಡಿ.ವೈ.ಯಪ್ ಐ ಮುನಿರ್ ಕಾಟಿಪಳ್ಳ ಮತ್ತು ಇನ್ನಿತರ ಎರಡು ಮಂದಿಯನ್ನು ಪಣಂಬೂರು ಠಾಣೆಗೆ ರವಾನಿಸಿದ್ದು ಈ ಸಂದರ್ಭ ಪೋಲಿಸರ ಮತ್ತು ಎಂ.ಅರ್.ಪಿ.ಎಲ್ ವಿರುದ್ದ ಘೋಷಣೆ ಕೂಗಿದರು, ನಂತರ ಮಾತನಾಡಿದ ಡಿ.ವೈ.ಯಪ್.ಐ ನ ಇಮ್ತಿಯಾಜ್ , ಜೊಕಟ್ಟೆ ಪಂಚಾಯತ್ನಲ್ಲಿ ಯಾವುದೇ ಕಾಮಗಾರಿಗೆ ಅನುಮತಿ ಕೊಟ್ಟಿಲ್ಲ, ಪಂಚಾಯತ್ ನಿರ್ಣಯವನ್ನು ವಿರೋಧಿಸಿ, ಕಾಮಗಾರಿಯನ್ನು ನಡೆಸುತ್ತಿದ್ದಾರೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಳಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದ್ದೇವೆ ಇದಕ್ಕೆ ಪತ್ಯೇಕ ಸಮಿತಿ ಮಾಡಿ ಇದನ್ನು ಸರಿಪಡಿಸಲಾಗುದು ಎಂದು ಹೇಳಿದ್ದಾರೆ. ಆದರೂ ಇದರ ಮದ್ಯೆ ಕಾಮಗಾರಿ ಮುಂದುವರಿದಿದೆ, ಗುತ್ತಿಗೆದಾರ ಸುರತ್ಕಲ್ ಪೋಲಿಸರಿಗೆ ಲಂಚ ಕೊಟ್ಟು ಕಾಮಗಾರಿ ಮುಂದುವರಿಸುತ್ತಿದ್ದಾರೆ, ಗುತ್ತಿಗೆದಾರ ಕಾಮಗಾರಿಯನ್ನು ಮುಂದುವರಿಸುತ್ತೇನೆ ಎಂದು ಪ್ರತಿಭಟನಗಾರರಿಗೆ ಸವಾಲೆಸದಿದ್ದಾನೆ ಎಂದು ಆರೋಪಿಸಿದರು. ಪ್ರತಿಭಟನೆ ಅತಿರೇಕಕ್ಕೆ ಹೋಗದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು,

By suddi9

Leave a Reply

Your email address will not be published. Required fields are marked *