ಸುಮಂಗಲಾ ಕ್ರೆಡಿಟ್ ಸೊಸೈಟಿ ರೂ 100.39ಕೋಟಿ ವ್ಯವಹಾರ, ರೂ 77.26ಲಕ್ಷ ಲಾಭ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಕಳೆದ 22ವರ್ಷಗಳ ಹಿಂದೆ ಪಾಣೆಮಂಗಳೂರಿನಲ್ಲಿ ಆರಂಭಗೊಂಡ ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು ಕಳೆದ ಸಾಲಿನಲ್ಲಿ ಒಟ್ಟು ರೂ 100.39ಕೋಟಿಗೂ ಮಿಕ್ಕಿ ಮೊತ್ತದ ವ್ಯವಹಾರ ನಡೆಸಿ, ರೂ 77.26ಲಕ್ಷ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಎಂ.ನಾರಾಯಣ ಸಪಲ್ಯ ಕಡೇಶಿವಾಲಯ ಹೇಳಿದ್ದಾರೆ.
30btl-Sumangala
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೊಸೈಟಿಯು ಈಗಾಗಲೇ ಪಾಣೆಮಂಗಳೂರು ಮಾತ್ರವಲ್ಲದೆ ಚೇಳೂರು, ತುಂಬೆ, ಕಲ್ಲಡ್ಕ, ಸಜಿಪನಡುವಿನಲ್ಲಿ ಶಾಖೆ ಹೊಂದಿದ್ದು, ರೂ 30.58ಕೋಟಿಗೂ ಮಿಕ್ಕಿ ಮೊತ್ತದ ಸಾಲ ವಿತರಿಸಿ, ಶೇ.90ರಷ್ಟು ಸಾಲ ವಸೂಲಾತಿಯಾಗಿದೆ. ಇದರಿಂದಾಗಿ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ನೀಡಲಾಗುತ್ತದೆ ಎಂದು ಅವರು ವಿವರಿಸಿದರು. ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಪಿ.ವಸಂತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಮಾಜಿ ನಿರ್ದೇಶಕರಾದ ವಿಶ್ವನಾಥ ಎಸ್.ಎ., ಪದ್ಮನಾಭ ಪಜೀರು, ಪದ್ಮನಾಭ ಇಡ್ಕಿದು, ಮೋಹನ್ ಕೆ.ಶ್ರೀಯಾನ್ ರಾಯಿ, ಕೃಷ್ಣಪ್ಪ ಕೆಮ್ಮನಾಜೆ, ನಾಗೇಶ್, ಗಾಣಿಗ ಸಂಘದ ಪ್ರಮುಖರಾದ ಉಮೇಶ ಬೋಳಂತೂರು, ಎಂ.ಎನ್.ಕುಮಾರ್, ಈಶ್ವರ ಮೆಲ್ಕಾರ್ ಮತ್ತಿತರರು ವಿವಿಧ ಸಲಹೆ ನೀಡಿದರು.
ನಿರ್ದೇಶಕರಾದ ಲಿಂಗಪ್ಪ ಕರ್ಕೇರ ಕಲ್ಲಡ್ಕ, ದಿನೇಶ ಬಂಗೇರ ಬೋಳಂತೂರು, ಗಣೇಶ ಪಜೀರು, ಪುರುಷೋತ್ತಮ ಎಸ್.ಮಾಣಿಮಜಲು, ತಾರನಾಥ ನರಿಕೊಂಬು, ಅಚ್ಚುತ ಎಸ್.ಕೋಳ್ನಾಡು, ವೀಣಾ ವಿಶ್ವನಾಥ ಬಿ.ಸಿ.ರೋಡ್, ಸುನಿತಾ ಪದ್ಮನಾಭ ನರಿಕೊಂಬು ಮತ್ತಿತರರು ಉಪ್ಥಿತರಿದ್ದರು.
ಸೊಸೈಟಿ ಅಧ್ಯಕ್ಷ ನಾರಾಯಣ ಸಪಲ್ಯ ಸ್ವಾಗತಿಸಿ, ಉಪಾಧ್ಯಕ್ಷ ಜನಾರ್ಧನ ಜಕ್ರಿಬೆಟ್ಟು ವಂದಿಸಿದರು.

By Suddi9

Leave a Reply

Your email address will not be published. Required fields are marked *