ಸುದ್ದಿ ಕೈಕಂಬ
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀಮಾನ್ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಏ.14 ಗುರುಪುರ-ಕೈಕಂಬ ಪೇಟೆಯ ಗಣೇಶ್ ಕಟ್ಟೆ ಬಳಿ ವಿಜಯ ಸಂಕಲ್ಪ ಸಭೆ ನಡೆಯಿತು.
ಚಿತ್ರ ಕ್ಲಾಸಿಕ್ ಕೈಕಂಬ

ಮೋದಿಗೆ ಒಂದು ಛಾನ್ಸ್ ಕೊಡಿ:
ವಿಜಯ ಸಂಕಲ್ಪ ಸಭೆಯಲ್ಲಿ ಶ್ರೀಕೃಷ್ಣ ಉಪಾಧ್ಯಾಯ ಕರೆ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಒಂದೇ ಒಂದು ಛಾನ್ಸ್ ಕೊಡಿ, ಭಾರತ 2020ರ ವೇಳೆಗೆ ಸುಪರ್ ಪವರ್ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅದಕ್ಕೆ ಗುಜರಾತ್ ಅಭಿವೃದ್ಧಿಯೇ ಸಾಕ್ಷಿ. ಗುಜರಾತ್ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಹೊಂದಿದ್ದು ಅದನ್ನು ಇಡೀ ಭಾರತದಲ್ಲಿ ನೋಡಬೇಕಾದರೆ ಮೋದಿ ಆಯ್ಕೆಯೇ ಪರಿಹಾರವಾಗಿದೆ ಎಂದು ಸಂಸ್ಕಾರ ಭಾರತ ಇದರ ದ.ಕ. ಜಿಲ್ಲಾ ಪ್ರಭಾರಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದ್ದಾರೆ.
ಅವರು ಗುರುಪುರ ಕೈಕಂಬದಲ್ಲಿ ನಮೋ ಬ್ರಿಗೇಡ್ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಭೆಯಲ್ಲಿ ಮಂಗಳೂರು ಲೋಕಸಭಾ ಅಭ್ಯಥರ್ಿ ನಳಿನ್ ಕುಮಾರ್ ಕಟೀಲ್ ಇವರನ್ನು ಗೆಲ್ಲಿಸುವ ಸಲುವಾಗಿ ಮಾತಾಡುತ್ತಾ ಈ ಮಾತನ್ನು ಹೇಳಿದರು.
ಅತ್ತ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಬೇಕು. ಇತ್ತ ನಮ್ಮ ನಳಿನ್ ಕುಮಾರ್ ಕಟೀಲ್ರನ್ನು ಕೇಂದ್ರ ಸಚಿವರನ್ನಾಗಿ ಕಳಿಸಲು ಮನಸ್ಸು ಮಾಡಬೇಕು. ಅದಕ್ಕಾಗಿ ನಳಿನ್ ಕುಮಾರ್ ಕುಮಾರ್ ಕಟೀಲ್ರನ್ನು ಬೆಂಬಲಿಸಿ ಎಂದು ಉಪಾಧ್ಯಾಯ ಕರೆ ನೀಡಿದ್ದಾರೆ.
ಸಿದ್ದು ಮೋದಿಯನ್ನು ಬೆಂಬಲಿಸಲಿ:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ವಿರುದ್ಧ ಹಾಗೂ ನರೇಂದ್ರ ಮೋದಿ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುತ್ತಾ ಕಾಲ ಕಳೆಯುವ ಬದಲು ಈ ಬಾರಿ ಅವರು ಬಿಜೆಪಿಯನ್ನು ಬೆಂಬಲಿಸಿ ದೇಶದ ಅಭಿವೃದ್ಧಿಗೆ ಸಹಕರಿಸಲಿ ಎಂದು ಕೃಷ್ಣ ಉಪಾಧ್ಯಾಯ ಕರೆ ನೀಡಿದ್ದಾರೆ.
ಬಾಂಬೆಯ ಉದ್ಯಮಿಯೋರ್ವರು ತನ್ನ ಸ್ವಂತ ಖಚರ್ಿನಲ್ಲಿ ಬಜ್ಪೆಯಿಂದ ಕಾರ್ಕಳದವರೆಗೆ ಕಾಂಗ್ರೆಸ್ ಪರವಾಗಿ ಬ್ಯಾನರ್ ಹಾಕಿದ್ದರು. ಆದರೆ ಇದರ ಬಗ್ಗೆ ಯಾವುದೇ ತಗಾದೆ ಎತ್ತದವರು ಮೋದಿ ಬ್ಯಾನರ್ ಅಳವಡಿಸಿದರೆ ಮಾತ್ರ ಅದು ಮೋದಿಯಿಂದ ಹಣ ಬರುತ್ತದೆ ಎಂದು ಆರೋಪಿಸಲಾಗುತ್ತದೆ. ನಿಜವಾಗಿ ನೋಡಿದರೆ ಮೋದಿ ಬ್ಯಾನರನ್ನು ಬಡ ರಿಕ್ಷಾ ಚಾಲಕರು, ಕೂಲಿಕಾಮರ್ಿಕರು ತನ್ನ ಸ್ವಂತ ಖಚರ್ಿನಿಂದ ಹಾಕಿದ್ದಾರೆ ಎಂದು ವಕೀಲ ಎಂಕೆ ಸುವೈತ್ ಕುಮಾರ್ ಹೇಳಿದ್ದಾರೆ
ಕೇಸರಿ ಮುಂಡು ಕಾಣಿಸುವುದಿಲ್ಲವೇ?
ಇತ್ತೀಗೆ ಕಾರ್ಯಕ್ರಮವೊಂದರಲ್ಲಿ ಜನಾರ್ದನ ಪೂಜಾರಿಯವರು ಕೇಸರಿ ಮುಂಡು ಹಾಕಿದವರನ್ನು ಸಂಘಪರಿವಾರದವರೆಂದು ತಿಳಿದು ಅಂಥವರು ತನ್ನ ಕಾರ್ಯಕ್ರಮಕ್ಕೆ ಬರಬಾರದೆಂದು ಹೇಳಿದ್ದರು. ಆದರೆ ಆ ಪಕ್ಷದ ಉದ್ಯಮಿಯೋರ್ವರು ಅದೇ ಕೇಸರಿ ಮುಂಡು ಧರಿಸುತ್ತಾರೆ. ಇದು ಅವರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪೂಜಾರಿಯನ್ನು ವಕೀಲ ಸುವೈತ್ ಕುಮಾರ್ ಜರೆದಿದ್ದಾರೆ.
ವೇದಿಕೆಯಲ್ಲಿ ಜಗದೀಶ ಶೇಣವ, ವಿಜಯ ಗೌಡ, ವಿನೋದ್ ಮಾಡ ,ಗಣೇಶ್ ಕೋಟ್ಯಾನ್, ಮುರಳೀದರ ಶೆಟ್ಟಿ, ರಾಜೇಶ್ ಕೈಕಂಬ ಉಪಸ್ಥಿತರಿದ್ದರು. ಕೃಷ್ಣ ಕೊಂಪದವು ಸ್ವಾಗತಿಸಿದರು. ವಿದ್ಯಾ ವಿಜಯಗೌಡ ಶಿಬ್ರಿಕೆರೆ ನಿರೂಪಿಸಿದರು.











