ಬಂಟ್ವಾಳ, ಆ. 24: ಬಿ.ಸಿ.ರೋಡ್ ಬಸ್ ನಿಲ್ದಾಣ ಬಳಿ ಶ್ರೀನಿವಾಸ ಆರ್ಕೇಡ್ ತಳ ಅಂತಸ್ತಿನಲ್ಲಿ ಡಾ| ಸಂತೋಷ್ ಬಾಬು ಬಿ.ಸಿ. ನೇತೃತ್ವದ ಆರ್ಥೋ ಮತ್ತು ಸ್ಪೈನ್ ಕ್ಲಿನಿಕ್ ಆ. 24ರಂದು ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆಯ ಹಿರಿಯ ವೈದ್ಯ ಡಾ| ರಮೇಶಾನಂದ ಸೋಮಯಾಜಿ, ಸಾಮಾಜಿಕ ನೇತಾರ ಕೆ. ಸೇಸಪ್ಪ ಕೋಟ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು.


ನಗರ ಕೇಂದ್ರದಲ್ಲಿ ಇಂತಹ ತಜ್ಞ ವೈದ್ಯರ ಅವಶ್ಯಕತೆ ಈ ಮೂಲಕ ಪೂರೈಕೆಯಾಗಿದೆ. ಸಾರ್ವಜನಿಕರಿಗೆ ಸೋಮವಾರದಿಂದ ಶನಿವಾರದ ವರೆಗೆ ಸಂಜೆ 4. 30ರಿಂದ 8ಗಂಟೆ ಅವರು ಕ್ಲಿನಿಕ್ನಲ್ಲಿ ಲಭ್ಯರಿರುತ್ತಾರೆ. ರವಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ಗಂಟೆ ತನಕ ಕರ್ತವ್ಯ ಮಾಡುವುದರಿಂದ ಸ್ಥಳೀಯವಾಗಿ ಜನ ಸಾಮಾನ್ಯರು ಅವರ ಸೇವೆಯನ್ನು ಬಳಸಿಕೊಳ್ಳಲು ಸುಲಭ ಆಗುವುದು ಎಂದರು.
ಕಟ್ಟಡ ಮಾಲಕ ರಾಮಚಂದ್ರ ನಾಯಕ್, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಬಂಟ್ವಾಳ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಯನ್.ಪ್ರಕಾಶ್ ಕಾರಂತ, ಅಧ್ಯಕ್ಷ ಕರುಣಾಕರ ರೈ, ಕಾರ್ಯದರ್ಶಿ ರಿತೇಶ್ ಬಾಳಿಗ, ಪ್ರಮುಖರಾದ ಕೆ.ಎನ್.ಹೆಗ್ಡೆ, ಜಿ.ಸದಾನಂದ ಮಲ್ಲಿ, ಬಸ್ತಿ ಮಾದವ ಶೆಣೈ, ಡಾ| ಶಶಿಕಲಾ ಸೋಮಯಾಜಿ, ರೋಟರಿ ಆ್ಯನ್ಸ್ ಕ್ಲಬ್ ಅಧ್ಯಕ್ಷೆ ವಾಣಿ ಕಾರಂತ, ಡಾ| ಪ್ರವೀಣ್ ಸೆರಾ, ಉದ್ಯಮಿಗಳಾದ ಕೆ.ಎಂ. ಮೊಯಿದ್ದೀನ್, ಮಂಜುನಾಥ ಆಚಾರ್ಯ, ವಿನಯ್ ರೈ ಗಣೇಶ್ ಮೆಡಿಕಲ್ಸ್, ವಿಶ್ವನಾಥ ಗಣೇಶ್ ಟಯರ್ಸ್, ಎಸ್.ಆರ್ ದಾಮೋದರ ರಾವ್, ಬಿಲ್ಲವ ಮಹಾ ಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ್, ಪುರಸಭಾ ಸದಸ್ಯ ಮೋಹನ್ ಬಿ.ಸಿ.ರೋಡ್, ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ಗುಡಿಯ ಅಧ್ಯಕ್ಷ ಗೋಪಾಲ ಸುವರ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ನೆಮಿರಾಜ ರೈ ಸಹಿತ ಇನ್ನಿತರ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಡಾ| ಸಂತೋಷ್ ಬಾಬು ಬಿ.ಸಿ., ಡಾ| ಸೌಮ್ಯ ಎಸ್. ಜಿ, ಬಿ.ಸಿ.ರೋಡ್ ಗುರುಕೃಪ ಪೆಟ್ರೋಲಿಯಂ ಮಾಲಕ ಕೆ. ಸಂಜೀವ ಪೂಜಾರಿ ಗುರುಕೃಪ, ಮಾಲತಿ ಎಸ್. ಪೂಜಾರಿ ಉಪಸ್ಥಿತರಿದ್ದರು.
