ಬಂಟ್ವಾಳ:ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರಿನಲ್ಲಿ ಹಿಂದೂ ಯುವತಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಬಂಧಿತನಾಗಿರವ ಆರೋಪಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ತೆರೆಮರೆಯ ಪ್ರಯತ್ನ ನಡೆಯುತ್ತಿದ್ದು ಈತನಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಮದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಬಂಟ್ವಾಳ ತಾಲೂಕು ಘಟಕ ಎಚ್ಚರಿಸಿದೆ.
ಸಂಘಟನೆಯ ಪ್ರಮುಖರಾದ ಶಶಿಕಿರಣ್ ಬಡಗಬೆಳ್ಳೂರು ಹಾಗೂ ಪ್ರದೀಪ್ ಅಜ್ಜಿಬೆಟ್ಟು ಗುರುವಾರ ಸಂಜೆ ಬಂಟ್ವಾಳ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅಲ್ಪಸಂಖ್ಯಾತರಿಗೆ ತೊಂದರೆಯಾದಾಗ ಬೊಬ್ಬಿಡುವ ವಿವಿಧ ಮಹಿಳಾಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ರಾಜಕಾರಣಿಗಳು ಬಡ ಕುಟುಂಬದ ಹಿಂದೂ ಯುವತಿಗೆ ಅನ್ಯಾಯವಾದಗ ಕನಿಷ್ಠ ಸಾಂತ್ವಾನ ಹೇಳದಿರುವುದು ದುರಾದೃಷ್ಟಕರ ಎಂದು ಟೀಕಿಸಿದರು.
ಸಂತ್ರಸ್ತ ಯುವತಿ ಮಾನಸಿಕವಾಗಿ ನೊಂದಿದ್ದು ಆಕೆಗೆ ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ. ಆದರೆ ಆರೋಪಿಯನ್ನು ಇದೀಗ ಬಿಡುಗಡೆಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಎರಡು ದಿನಗಳ ಹಿಂದೆ ನಡೆದ ಅತ್ತಾವರ ಘಟನೆಯ ಆರೋಪಿಯನ್ನು ಕೆಲ ಮಾಧ್ಯಮಗಳು ಬಿಂಬಿಸಿದ್ದು ಯುವತಿ ಸುದ್ದಿಗೋಷ್ಟಿ ನಡೆಸಿದರೂ ಆಕೆಯ ಪರವಾಗಿ ಯಾರೂ ಧ್ವನಿ ಎತ್ತದಿರುವುದು ವಿಷಾದನೀಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಪ್ರಮುಖರಾದ ಗುರುರಾಜ್ ಬಂಟ್ವಾಳ, ಪ್ರಕಾಶ್ ಬಡಗಬೆಳ್ಳೂರು, ಕಿಶೋರ್ ಪಲ್ಲಿಪಾಡಿ ಮೊದಲಾದವರು ಹಾಜರಿದ್ದರು.
