ಮೂಡುಬಿದರೆ: ಅಕ್ರಮ ಗೋ ಸಾಗಟ, ಅಕ್ರಮ ಕಸಾಯಿಖಾನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮೂಡುಬಿದಿರೆ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಎದುರು ಪ್ರತಿಭಟನೆ ಹಾಗೂ ಬೃಹತ್ ಗೋ ಜನಜಾಗೃತಿ ಸಮಾವೇಶ ಸೋಮವಾರ ನಡೆಯಿತು.

ಆರ್ಎಸ್ಎಸ್ ಕ್ಷೇತ್ರೀಯ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿ, ತನ್ನ ಜೀವಿತಾವಧಿಯ ಪ್ರತಿಹಂತದಲ್ಲಿ ಪರೋಪಕಾರಿಯಾಗಿ ಜೀವಿಸುವ ಗೋವನ್ನು ಭಾರತದಲ್ಲಿ ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಗೋವಿಗೆ ಪವಿತ್ರ ಸ್ಥಾನವಿದೆ. ಆದರೆ ಕೆಲವರ ಆಹಾರ ಪದ್ಧತಿಗೋಸ್ಕರ ಅಮಾನುಷ ರೀತಿಯಲ್ಲಿ ಗೋವನ್ನು ಬಲಿಕೊಡಲಾಗುತ್ತಿದೆ. ಕಷ್ಟ-ನಷ್ಟದಲ್ಲೂ ಇಷ್ಟಪಟ್ಟು ಸಾಕಿ ಸಲಹಿದ ದನಗಳನ್ನು ತಲವಾರಿನಂತಹ ಮಾರಕಾಯುಧಗಳಿಂದ ಹೆದರಿಸಿ ಅಕ್ರಮ ಗೋ ಸಾಗಟ ಮಾಡಲಾಗುತ್ತಿದೆ. ಯಾವುದನ್ನು ಲೆಕ್ಕಿಸದೆ ನಗರ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಖಾಸಯಿಖಾನೆಗಳೂ ಹೆಚ್ಚಾಗುತ್ತಿದೆ. ಅಪರಾಧಿಗಳನ್ನು ರಕ್ಷಿಸುವ ಕಾಂಗ್ರೆಸಿಗರ ಪ್ರಯತ್ನಗಳು ಪೊಲೀಸ್ ಇಲಾಖೆಯನ್ನು ನಿಯಂತ್ರಿಸುತ್ತಿದ್ದು, ಅಮಾನವೀಯ ಗೋಭಕ್ಷಕರನ್ನು ಹಿಡಿಯುವ ಬದಲು ಗೋವು ರಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿರುವುದು. ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿರುವರ ಮೇಲೆ ದಾಳಿ ನಡೆಸುವ ಸಂದರ್ಭ ನಾವು ದನಗಳನ್ನು ಕೃಷಿಗೋಸ್ಕರ ದನ ಸಾಕುತ್ತಿದ್ದೇವೆ ಎಂದು ಮಂಕುಬೂದಿ ಎರಚು ಪ್ರಯತ್ನ ಮಾಡುತ್ತಿದ್ದು, ಕಾನೂನು ಕ್ರಮದಿಂದ ಪಲಾಯನ ಮಾಡುತ್ತಾರೆ. ಆದರೆ ನೈಜ್ಯವಾಗಿ ಅವರು ತಮ್ಮ ತೀಟೆಗಳನ್ನು ಪೂರೈಸುವುದನ್ನು ಪೊಲೀಸ್ ಇಲಾಖೆ ಅರಿತುಕೊಳ್ಳಬೇಕಿ. ಹಿಂದೂ ಪದವನ್ನು `ಕೋಮುವಾದ’ ರೀತಿಯಲ್ಲಿ ಬಳಸುವಂತೆ ಮಾಡುವ ರಾಜಕೀಯ ಫುಡಾರಿಗಳಿಗೆ ಹಿಂದೂಗಳು ಸರಿಯಾದ ಬುದ್ಧಿ ಕಲಿಸಬೇಕು. ಹಿಂದೂ ಧರ್ಮ ಹಿಂಸಾಚಾರವನ್ನು ಪ್ರೋತ್ಸಾಹಿಸುವುದಿಲ್ಲ. ಹಿಂಸಾಚಾರ ಮಾಡುವವರ ವಿರುದ್ಧ, ಅದನ್ನು ಪ್ರೋತ್ಸಾಹಿಸುವವರ ವಿರುದ್ಧ ನಿರಂತರ ಹೋರಾಟ ಮಾಡುತ್ತಲೇ ಇರುತ್ತೇವೆ ಎಂದರು.
ವಿಶ್ವಹಿಂದೂ ಪರಿಷದ್ನ ಮುಖಂಡ ಜಗದೀಶ ಶೇಣವ ಮಾತನಾಡಿ, ಪಾಕಿಸ್ತಾನದ ಪರ ಘೋಷಣೆ ಕೂಗುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಜರಂಗದಳ ಪ್ರಾಂತ್ಯ ಸಂಯೋಜಕ ಶರಣ್ ಪಂಪ್ವೆಲ್, ಪ್ರಾಂತ್ಯ ಗೋರಕ್ಷಕ್ ಪ್ರಮುಖ್ ದಿನೇಶ್ ಪೈ, ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಜಗದೀಶ್ ಶೇನವ, ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಆರ್ಎಸ್ಎಸ್ ತಾಲೂಕು ಸಂಘ ಚಾಲಕ ವಾಸುದೇವ ಭಟ್, ಉಡುಪಿ ಜಿಲ್ಲಾ ಬಜರಂಗದಳ ಸಂಚಾಲಕ ಸುನೀಲ್ ಕೆ.ಆರ್, ವಿಶ್ವಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷ ಕೆ. ವಿಶ್ವನಾಥ ಪ್ರಭು, ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಶಾಂತಾರಾಮ ಕುಡ್ವಾ, ಪ್ರದಾನ ಸಂಚಾಲಕ ಸೋಮನಾಥ ಕೋಟ್ಯಾನ್ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಮುಂಚೆ ಸಾವಿರ ಕಂಬದ ಬಸದಿಯ ಆವರಣದಿಂದ ಹೆದ್ದಾರಿಯಲ್ಲಿ ರಾಜೀವ ಗಾಂಧಿ ವಾಣಿಜ್ಯ ಸಂಕೀರ್ಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.





