ಮೂಡುಬಿದಿರೆ : ಭಾರತ್ ಬ್ಯಾಂಕ್ ಸ್ಥಾಪನೆಯಾಗಿ 38 ವರ್ಷಗಳ ನೆನಪಿಗೆ ಬ್ಯಾಂಕ್ ಸ್ಥಾಪನಾ ದಿನಾಚರಣೆಯು ಮೂಡುಬಿದಿರೆ ಶಾಖಾ ಕಛೇರಿಯಲ್ಲಿ ಶುಕ್ರವಾರ ಜರುಗಿತು.

mdb_aug24_3

ಉದ್ಯಮಿ ಎಂ.ಶೀನಪ್ಪ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ವಿದ್ಯಾಗಿರಿಯ ಭಾರತ್ ಚಿಕನ್ ಸೆಂಟರ್ನ ಮಾಲಕ ಎಂ.ಎಸ್ ಝೈನುದ್ದೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಶಾಖಾ ಪ್ರಬಂಧಕ ಸುಧೀರ್ ಹಟ್ಟಂಗಡಿ ಸ್ವಾಗತಿಸಿ ಬ್ಯಾಂಕ್ನ ಅಭಿವೃದ್ಧಿ, ಗ್ರಾಹಕ ಸೇವೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಾಯಕ ಪ್ರಬಂಧಕ ಶಿವರಾಮ ಪೂಜಾರಿ, ಶಾಖಾಧಿಕಾರಿ ಸ್ಮಿತಾ ಎಸ್. ಸಿಬಂದಿಗಳಾದ ಶ್ವೇತಾ, ಪ್ರಜ್ಞಾ, ಶಿಲ್ಪಾ, ರಾಜೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *