ಮಂಗಳೂರು: ಶ್ರೀ ಮಂಗಳಾದೇವಿ ಕ್ರಿಯೇಶನ್ಸ್ ಕುಡ್ಲ ಲಾಂಛನದಲ್ಲಿ ನಿರ್ಮಿಸುತ್ತಿರುವ ಶರತ್ಚಂದ್ರ ಕುಮಾರ್ ಕದ್ರಿ ನಿರ್ದೇಶನದ `ಬೊಳ್ಳಿಲು’ ತುಳು ಚಿತ್ರದ ಮುಹೂರ್ತ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಆಗೋಸ್ಟ್ 23ರಂದು ಜರಗಿತು.


ಚಿತ್ರಕ್ಕೆ ಶಾಸಕ ಮೊಯ್ದೀನ್ ಬಾವ ಕ್ಲಾಪ್ ಮಾಡಿದರು. ನ್ಯಾಯವಾದಿ ಉಮೇಶ್ ಶೆಟ್ಟಿ ಮೂಡುಶೆಡ್ಡೆ ಕ್ಯಾಮರಾ ಚಾಲನೆಗೈದರು. ಸಮಾರಂಭದಲ್ಲಿ ವಿಶ್ವನಾಥ ಶೆಟ್ಟಿ ಮೂಡುಶೆಡ್ಡೆ, ನಿರ್ಮಾಪಕರಾದ ಮಿತ್ರ ಹೇರಾಜೆ, ಪಿತಾಂಬರ ಹೇರಾಜೆ, ಶಕಿಲಾ ಶರತ್, ಶಶಿಕಲಾ ರಾಜಶೇಖರ್, ಮೆಕ್ಸಿಮ್ ಲೋಬೋ, ಮೆಲ್ಕಾನ್ ಮೆಲ್ವಿನ್ ಡಿಸೋಜ, ಪ್ರವೀಣ್ ಕುಮಾರ್ ಕೊಂಚಾಡಿ, ಸುರೇಶ್ ಮಂಗಳೂರು, ಸುರೇಶ್ ರೈ, ಫ್ರಾನ್ಸಿಸ್ಪಿಂಟೋ, ಜಗನ್ನಾಥ ಶೆಟ್ಟಿ ಬಾಳ, ಜಿ.ಕೆ.ಪುರುಷೋತ್ತಮ, ಸತೀಶ್ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.
ಬೊಳ್ಳಿಲು ತುಳು ಸಿನಿಮಾ ಶಶಿಕಲಾ ರಾಜಶೇಖರ್ ಅವರ `ದುರಂತ ಪ್ರೀತಿ’ ಕಿರು ಕಾದಂಬರಿ ಆಧರಿಸಿದ ಕಥೆಯನ್ನೊಳಗೊಂಡಿದೆ. ಮಿತ್ರ ಹೇರಾಜೆ, ಪಿತಾಂಬರ ಹೆರಾಜೆ, ಶಕಿಲಾ ಶರತ್ ಹಾಗೂ ಶಶಿಕಲಾ ರಾಜಶೇಖರ್ ಅವರ ಪಾಲುದಾರಿಕೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. 25 ದಿನಗಳ ಕಾಲ ಒಂದೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಸಿನಿಮಾಕ್ಕೆ ಚಿತ್ರೀಕರಣ ನಡೆಯಲಿದೆ. ತಾರಾಗಣದಲ್ಲಿ ಶ್ರವಣ ಕುಮಾರ್, ಪ್ರತೀಕ್ಷಾ ಪೂಜಾರಿ, ಸುರೇಶ್ ರೈ, ಸೌಜನ್ಯಹೆಗಡೆ, ನಿತಿನ್ ಹೇರಾಜೆ, ದೀಪಕ್ ರೈ, ಸೋಮನಾಥ ಶೆಟ್ಟಿ, ದಯಾನಂದ ಕುಲಾಲ್ ಮೊದಲಾದವರಿದ್ದಾರೆ. ಸಂಗೀತ ಡಾ.ನಿತೀನ್ ಆಚಾರ್ಯ, ಛಾಯಾಗ್ರಹಣ ರೇಣುಕುಮಾರ್, ಸಲಹೆ ಸಹಕಾರ; ಜಿ.ಕೆ.ಪುರುಷೋತ್ತಮ, ಚಿತ್ರಕತೆ, ಸಂಭಾಷಣೆ ಸಾಹಿತ್ಯ, ನಿರ್ದೇಶನ ಶರತ್ ಚಂದ್ರಕುಮಾರ್ ಕದ್ರಿ ನೀಡಲಿದ್ದಾರೆ.



