ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳದ ವತಿಯಿಂದ ಲಯನ್ಸ್ ಸೇವಾ ಮಂದಿರದಲ್ಲಿ 69ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಲಯನ್ಸ್ ಕ್ಲಬ್ ಸದಸ್ಯರು, ಮಾಜಿ ಸೈನಿಕರಾದ ಲಯನ್ ರಾಮಯ್ಯ ಶೆಟ್ಟಿಯವರ ಸಹಕಾರದಲ್ಲಿ ಸ್ಥಾಪಕಾಧ್ಯಕ್ಷರಾದ ಲಯನ್ ಡಾ. ಬಿ. ವಸಂತ ಬಾಳಿಗಾ ನೆರವೇರಿಸಿದರು.

ಲಯನ್ ಸ್ಥಾಪಕ ಸದಸ್ಯರಾದ ಲಯನ್ ಡಾ. ಶ್ಯಾಂ ಭಟ್, ಕ್ಲಬ್ ಅಧ್ಯಕ್ಷ್ಷರುಗಳಾದ ಜಯಂತ ಶೆಟ್ಟಿ ಮತ್ತು ಗೀತಾ ಜೆ. ಶೆಟ್ಟಿ, ಪ್ರಾಂತೀಯ ಅಧ್ಯಕ್ಷರಾದ ಲಯನ್ ದಾಮೋದರ ಬಿ. ಎಂ. ಹಾಗೂ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲಯನ್ ಸೇವಾ ಟ್ರಸ್ಟ್ ಪಾಲನೆಯಲ್ಲಿರುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಾಚ್ನ್ನು ವಿತರಿಸಲಾಯಿತು.
