ಬಂಟ್ವಾಳ : ಹಿಂದುಳಿದ ವರ್ಗದ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದೇವರಾಜ ಅರಸರು ಎಂದೆಂದಿಗೂ ಸ್ಮರಣೀಯರು . ಅವರ ಯೋಚನೆ-ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ ಎಂದು ತಾಲೂಕು ಪಂ.ಅಧ್ಯಕ್ಷ ಯಶವಂತ ದೇರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಆಡಳಿತ , ತಾಲೂಕು ಪಂ. , ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಧೀಮಂತ ನಾಯಕ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಡಿ.ದೇವರಾಜ್ ಅರಸುರವರ 100ನೇ ಜನ್ಮ ದಿನಾಚರಣೆಯನ್ನು ಎಸ್.ಜಿ.ಎಸ್.ವೈ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಉದ್ಘಾಟಿಸಿದರು.
ದೇವರಾಜ್ ಅರಸುರವರು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ ಹಾಗೂ ವಿದ್ಯಾರ್ಥಿ ನಿಲಯಗಳು ಸ್ಥಾಪನೆಯಾಗದಿದ್ದಲ್ಲಿ ನಾವೆಲ್ಲಾ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ರಾಣಿ ಅಬ್ಬಕ್ಕ ತು ಳು ಅಧ್ಯಯನ ಕೇಂದ್ರದ ಪ್ರೊ/ ತುಕಾರಾಮ ಪೂಜಾರಿ ವಿಶೇಷ ಉಪನ್ಯಾಸಗೈದರು.
ವೇದಿಕೆಯಲ್ಲಿ ತಾಲೂಕು ಪಂ.ಸದಸ್ಯರಾದ ದಿನೇ ಶ್ ಅಮ್ಟೂರು, ಮಹಮ್ಮದ್ ಶರೀಫ್ , ಆನಂದ ಶಂಭೂರು , ತಹಶೀಲ್ದಾರ್ ಪುರಂದರ ಹೆಗ್ಡೆ , ಇಂಜಿನಿಯರ್ ನರೇಂದ್ರ ಬಾಬು , ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಉಪಸ್ಥಿರಿದ್ದರು.
ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಸ್ವಾತಿ , ವಾಣಿ ಡಿ. , ಧನ್ಯಶ್ರೀ , ವೆನಿಲಾ ರವರನ್ನು ಸನ್ಮಾನಿಸಲಾಯಿತು. ವಿಸ್ತರಣಾಧಿಕಾರಿ ಜಯಣ್ಣ ಪ್ರಸ್ತಾವನೆಗೈದರು. ಮೇಲ್ವಿಚಾರಕ ಶಿವಣ್ಣ ಸ್ವಾಗತಿಸಿದರು. ಮೇಲ್ವಿಚಾರಕಿ ಭವಾನಿ ವಂದಿಸಿ ರಂಗನಿರ್ದೇಶಕ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
