ಬಂಟ್ವಾಳ:  ಸೌತ್‍ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದಿಂದ ರಾಯಿ ಪೇಟೆಯಲ್ಲಿ ನೂತನ ವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರಕ್ಕೆ ನೂತನ ದ್ವಜಸ್ಥಂಭವನ್ನು ನಿರ್ಮಿಸಿಕೊಡಲಾಯಿತು.
001
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸುಮಾರು ಮೂರು ವರ್ಷದಿಂದ ಅಂಗನಾವಾಡಿ ಕೇಂದ್ರಕ್ಕೆ ನೂತನ ಧ್ವಜಸ್ಥಂಭವನ್ನು ಸಂಘವು ನಿರ್ಮಿಸಿ ಕೊಟ್ಟಿದೆ. ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಆನಂದ್ ನಿಯೋಜಿತ ಅಧ್ಯಕ್ಷ ಸುಕುಮಾರ್,ರಾಯಿ ಗ್ರಾ.ಪ.ಅಧ್ಯಕ್ಷ ದಯಾನಂದ್ ಸಪಲ್ಯ,ಸಮನ್ವಯ ಸಮಿತಿ ಅಧ್ಯಕ್ಷ ರಾಘವ ಅಮೀನ್,ಅಂಗನಾವಾಡಿ ಮೇಲ್ವಿಚಾರಕಿ ಕಾತ್ಯಾಯಿಣಿ, ಉಪಾಧ್ಯಕ್ಷೆ ಪುಷ್ಪಾಲತಾ, ಮಾಜಿಅಧ್ಯಕ್ಷರುಗಳಾದ ಹರೀಶ್ ರಾಯಿ, ಇಂದಿರಾ ಹಾಗೂ ಪಂಚಾಯತ್ ಸದಸ್ಯುರುಗಳು ಹಾಗೂ ವಲಯದ ಸದಸ್ಯರುಗಳಾದ ಟಿ.ಹರೀಶ್ ರಾವ್, ದಯಾನಂದ.ಬಿ, ರಾಜೇಂದ್ರ.ಕೆ ಜಯಂತ ನಯನಾಡು, ಹರೀಶ್ ನಾಟಿ, ಸಂತೋಷ್, ಬಾಲಕೃಷ್ಣ, ಪ್ರಶಾಂತ್, ಸುಧಾಕರ್, ಹರೀಶ್ ಕುಂದರ್, ಸಂತೋಷ್ ಮಂಚಿ, ವಿಕೇಶ್. ಧನಂಜಯ್,ಮನೋಹರ್ ರವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *