ಬಂಟ್ವಾಳ,ಆ.19:ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.)ಸಜೀಪಮೂಡ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆಯಲ್ಲಿ ಆ. 18ರಂದು ಸಂಘದ ವಠಾರದಲ್ಲಿ ಜರಗಿತು.
ಸಂಘವು ವರದಿ ವರ್ಷದಲ್ಲಿ 13 ಕೋಟಿ ರೂ. ವ್ಯವಹಾರ ಮಾಡಿ ಸುಮಾರು 8.5ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ. 25 ಡಿವಿಡೆಂಟ್ ನೀಡುವ ಬಗ್ಗೆ ಅಧ್ಯಕ್ಷರು ಘೋಷಿಸಿದರು.

ಸಭೆಯಲ್ಲಿ ಸುಮಾರು 15ಜನ ಮೂರ್ತೆದಾರರ ಸದಸ್ಯರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಪ್ರತಿಯೊಬ್ಬ ಸದಸ್ಯರಿಗೆ ವಿಶೇಷ ಪ್ರೋತ್ಸಾಹಗಳನ್ನು ನೀಡಲಾಯಿತು.ಸಭೆಯಲ್ಲಿ 2015-16ನೇ ಸಾಲಿಗೆ ಅಂದಾಜು 15ಲಕ್ಷ ನಿವ್ವಳ ಲಾಭದ ಬಜೆಟನ್ನು ಮಂಡಿಸಲಾಯಿತು
ಸಂಘವು 24ವರ್ಷಗಳನ್ನು ಪೂರೈಸಿ ಮುಂದಿನ ಸಾಲಿನಲ್ಲಿ ಬೆಳ್ಳಿ ಹಬ್ಬ ಆಚರಿಸಲಿದ್ದು ಈ ಪ್ರಯುಕ್ತ ಸಂಘವು ಸ್ವಂತ ಕಟ್ಟಡ ಹೊಂದುವ ಮತ್ತು ಬೆಳ್ಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಬಗ್ಗೆ ಮತ್ತು ಸಂಘದ ಎಲ್ಲಾ ಸದಸ್ಯರ ಮಕ್ಕಳಿಗೂ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಅಧ್ಯಕ್ಷರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅತಿಥಿಗಳಾದ ಎನ್.ರತ್ನಾಕರ ಪೂಜಾರಿ ನಾಡಾರು, ಮೋನಪ್ಪ ಪೂಜಾರಿ ನಾಡಾರು, ಚಂದು ನಾಯ್ಕ್ ನಗ್ರಿ, ತಮ್ಮ ಅನಿಸಿಕೆಗಳನ್ನು ನೀಡಿ ಸಂಘದ ಅಭಿವೃದ್ದಿಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರುಗಳಾದ ಟಿ.ಮುತ್ತಪ್ಪ ಪೂಜಾರಿ ಕೊಲ್ಯ, ವಾಸುದೇವ ಪೂಜಾರಿ ಪೆರ್ವ, ವಿಠಲ ಬೆಳ್ಚಾಡ ಚೇಳೂರು, ಶೀನ ಬೆಳ್ಚಡ ಚೇಳೂರು, ಶೀನ ಬೆಳ್ಚಡ ಚೇಳೂರು, ಅಶೋಕ ಕೋಮಾಲಿ, ಕೆ.ಸುಜಾತ ಎಂ.ನಗ್ರಿ, ವಾಣಿ ವಸಂತ ನಗ್ರಿ ಕಾಂಜಿಲ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಮತಾ ಜಿ.ವರದಿ ಮಂಡಿಸಿದರು.ನಿರ್ಧೇಶಕ ರಮೇಶ್ ಅನ್ನಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
.
