ಉಳ್ಳಾಲ: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಕಲ್ಲಾಪು ಸಮೀಪ ತಂಡವೊಂದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ರಾ.ಹೆ.66ರ ಕಲ್ಲಾಪು ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.

1

2

DSC_0161

ತೊಕ್ಕೊಟ್ಟು ಕೃಷ್ಣನಗರದ ನಿವಾಸಿ ಪ್ರೀತೇಶ್ (23), ಉಳ್ಳಾಲಬೈಲಿನ ನಿವಾಸಿ ಕವಿತ್ ಪೂಜಾರಿ ಹಲ್ಲೆಗೊಳಗಾದವರು.
ಘಟನೆ ವಿವರ: ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ರಿಟ್ಝ್ ಕಾರಿನಲ್ಲಿ ಬರುತ್ತಿದ್ದ ಗಾಯಾಳುಗಳು ಆಡಂಕುದ್ರು ಸಮೀಪ ಮೀನಿನ ಟೆಂಪೋವೊಂದನ್ನು ಓವರ್ ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿತ್ತು. ಬಳಿಕ ಎರಡು ವಾಹನದವರು ಸ್ಥಳದಿಂದ ತೆರಳಿದ್ದರು. ಆದರೆ ಕಲ್ಲಾಪು ಸಮೀಪ ಕಾರು ತಲುಪುಷ್ಟರಲ್ಲಿ
ಸುಮಾರು 100ಕ್ಕೂ ಅಧಿಕ ಮಂದಿ ಭಿನ್ನಕೋಮಿನ ತಂಡ ಜಮಾಯಿಸಿದ್ದು, ಅದರಲ್ಲಿ 10 ಮಂದಿಯ ತಂಡ ಇಬ್ಬರಿಗೆ ಕೈಗೆ ಸಿಕ್ಕ ವಸ್ತುಗಳಲ್ಲಿ ಹಲ್ಲೆ ನಡೆಸಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ರಿಕ್ತ ವಾತಾವರಣ ನಿಮರ್ಾಣವಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಿಕೊಂಡು, ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

By suddi9

Leave a Reply

Your email address will not be published. Required fields are marked *