ಉಳ್ಳಾಳ: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಿಡ್ನಿ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ 24ರ ಹರೆಯದ ಯುವಕನೋರ್ವ ನಿನ್ನೆ ಮೃತಪಟ್ಟ ಘಟನೆ ದೇರಳಕಟ್ಟೆಯ ಯೆನೆಪೋಯದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ತಂಡವೊಂದು ದಾಂಧಲೆ ನಡೆಸಿ ಇಬ್ಬರು ವೈದ್ಯರು, ಇಬ್ಬರು ಬ್ರದರ್ಸ್ ಹಾಗೂ ಇಬ್ಬರು ದಾದಿಯರಿಗೆ ಹಲ್ಲೆ ನಡೆಸಿರುವ ಘಟನೆ ನಡೆದರೆ, ಇನ್ನೊಂದೆಡೆ ವೈದ್ಯರು ಯುವಕನ ಹೆತ್ತವರಿಗೆ ಹಲ್ಲೆ ನಡೆಸಿದ್ದಾರೆಂದು ತಂಡ ಆರೋಪಿಸಿದೆ.
ymc 2

ymc4

ymc9

yenepoya
ಕೋಟೆಕಾರು ಬೀರಿಯ ಮ್ಯಾರೇಜ್ ಹಾಲ್ ಬಳಯ ನಿವಾಸಿ ಮಹಮ್ಮದ್ ಫೈಝಲ್ (24) ಮೃತ ಯುವಕ. ಎಂಟು ತಿಂಗಳ ಹಿಂದೆ ಗಲ್ಫ್ ರಾಷ್ಟ್ರಕ್ಕೆ ತೆರಳಿದ್ದ ಈತ ಕಿಡ್ನಿ ಸಂಬಂಧಿ ಕಾಯಿಲೆಗೆ ತೊಂದರೆಗೀಡಾದ ನಂತರ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ಬಳಿಕ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಫೈಝಲ್ಗೆ ಡಯಾಲಿಸಿಸ್ಗೆ ಸೂಚಿಸಿದ್ದರು. ಅದರಂತೆ ನಿರಂತರ ಡಯಾಲಿಸಿಸ್ ನಡೆಸುತ್ತಾ ಬಂದಿದ್ದ ಫೈಝಲ್ ನ ಆರೋಗ್ಯ ನಿನ್ನೆ ಗಂಭೀರ ಸ್ಥಿತಿಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರಾದ ಡಾ.ರೋಷನ್ ಎಂಬವರ ಸಲಹೆಯಂತೆ ರಕ್ತ ತರಲು ಸಂಬಂಧಿಕರಲ್ಲಿ ಸೂಚಿಸಿದ್ದರು. ಸಂಜೆ ವೇಳೆ ನಾಲ್ಕು ಬಾಟಲಿ ರಕ್ತವನ್ನು ಸಂಬಂಧಿಕರು ನೀಡಿದ್ದು, ರಾತ್ರಿ ಸುಮಾರು 9ಕ್ಕೆ ಫೈಝಲ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ವೈದ್ಯರು ಹೆತ್ತವರಿಗೆ ದೂರವಾಣಿ ಮೂಲಕ ಮಾಹಿತಿಯನ್ನು ನೀಡಿದ್ದರು. ಅವರು ಆಸ್ಪತ್ರೆಗೆ ಬಂದು ತೀವ್ರ ನಿಗಾ ಘಟಕಕ್ಕೆ ತೆರಳುವಾಗ ವೈದ್ಯ ಡಾ. ರೋಷನ್ ಇರಲಿಲ್ಲ. ಅವರ ಅಸಿಸ್ಟೆಂಟ್ ಆಗಿದ್ದ ಡಾ. ಪ್ರಶಾಂತ್ ಮಾತ್ರ ಇದ್ದರು. ಡಾ.ರೋಷನ್ ಅವರು ಬಂದ ಬಳಿಕವೇ ಮಾಹಿತಿ ಪಡೆದುಕೊಳ್ಳಿ ಎಂದು ಹೆತ್ತವರಲ್ಲಿ ಪ್ರಶಾಂತ್ ತಿಳಿಸಿದ್ದರು. ಆದರೆ ಕೂಡಲೇ ಮಗನನ್ನು ನೋಡಬೇಕೆಂದು ಹೆತ್ತವರೂ ಕೇಳಿಕೊಂಡರೂ ಬಿಟ್ಟಿರಲಿಲ್ಲ ಎನ್ನಲಾಗಿದೆ. ಇದರಿಂದ ಕೆರಳಿದ ತಂಡ ವೈದ್ಯರ ಸಹಿತ ಅಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆ ಸೊತ್ತುಗಳಿಗೆ ಹಾನಿ ನಡೆಸಿದೆ ಎನ್ನಲಾಗಿದೆ. ಈ ನಡುವೆ ವೈದ್ಯರು ಯುವಕನ ಹೆತ್ತವರ ಮೇಲೆ ಕೈ ಮಾಡಿದೆ ಎಂದು ತಂಡ ಆರೋಪಿಸಿದೆ. ಘಟನೆಯಿಂದ ಆಸ್ಪತ್ರೆ ವಠಾರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ತಂಡವನ್ನು ಚದುರಿಸಿ , ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.
ರೋಗಿಯ ಡಯಾಲಿಸಿಸ್ ನಿರಂತರವಾಗಿ ನಡೆಯುತಿತ್ತು. ಆದರೆ ನಿನ್ನೆ ಸ್ಥಿತಿ ಚಿಂತಾಜನಕ ಹಂತವನ್ನು ತಲುಪಿತ್ತು. ಅದಕ್ಕಾಗಿ ಸಂಬಂಧಿಕರಿಂದ ರಕ್ತವನ್ನು ಪಡೆದು ಎರಡು ಬಾಟಲಿಯಷ್ಟು ನೀಡಲಾಗಿತ್ತು. ಇಂತಿಷ್ಟು ಸಮಯದ ನಡುವೆ ರಕ್ತ ಕೊಡಬೇಕು. ಆದ್ದರಿಂದ ಎರಡು ಬಾಟಲಿಗಳು ಉಳಿದಿತ್ತು. ಇದನ್ನೇ ತಪ್ಪಾಗಿ ಪರಿಗಣಿಸಿ ರೋಗಿಯ ಸಂಬಂಧಿಕರು ಹಲ್ಲೆ ನಡೆಸಿದ್ದಾರೆಂದು ವೈದ್ಯರು ಪತ್ರಿಕೆಗೆ ತಿಳಿಸಿದ್ದಾರೆ.

ಡಾ. ಪ್ರಶಾಂತ್ , ಡಾ.ರೋಷನ

By suddi9

Leave a Reply

Your email address will not be published. Required fields are marked *