ಮೂಡುಬಿದರೆ: ವರ್ಧಮಾನ ಪ್ರಶಸ್ತಿ ಪೀಠದ ನೂತನ ಅಧ್ಯಕ್ಷರಾಗಿ ಶಿರ್ತಾಡಿ ಶಿಮುಂಜೆಗುತ್ತಿನ ಎಸ್. ಡಿ. ಸಂಪತ್ ಸಾಮ್ರಾಜ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪೀಠದ ಮಹಾಸಭೆಯಲ್ಲಿ 2015-2020 ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಅವರು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆರಿಸಲ್ಪಟ್ಟಿದ್ದಾರೆ.
ಕೃಷಿ ವಿಜ್ಞಾನದಲ್ಲಿ ಪದವೀಧರರಾಗಿ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುವ ಶಿರ್ತಾಡಿಯ ಎಸ್. ಡಿ. ಸಂಪತ್ ಸಾಮ್ರಾಜ್ಯ ಅವರು ಶಿರ್ತಾಡಿಯ ಮಾಜಿ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಶಾಸಕ ಶಿರ್ತಾಡಿ ಧರ್ಮ ಸಾಮ್ರಾಜ್ಯರ ಸುಪುತ್ರರಾಗಿರುವ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಮಾಜಿ ಸದಸ್ಯರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿರುವ ಅವರು ಮೂಡುಬಿದಿರೆಯ ಸಮಾಜ ಮಂದಿರ ಸಭಾ, ಶ್ರೀ ಮಹಾವೀರ ಕಾಲೇಜು, ಎಸ್. ಎನ್. ಎಂ. ಪಾಲಿಟೆಕ್ನಿಕ್, ಜಿ.ವಿ.ಪೈ ಚ್ಯಾರಿಟೇಬಲ್ ಟ್ರಸ್ಟ್‍ನ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿದ್ದಾರೆ.

mbd_aug17_5( Sampath Samrajya)ಪದಾಧಿಕಾರಿಗಳು
ಪೀಠದ ಉಪಾಧ್ಯಕ್ಷರಾಗಿ ರಾಜ್ಯ ಸಚಿವ ಕೆ. ಅಭಯಚಂದ್ರ ಜೈನ್, ಡಾ. ಬಿ. ಯಶೋವವರ್i ಉಜಿರೆ, ಡಾ.ಪುಂಡಿಕಾೈ ಗಣಪಯ್ಯ ಭಟ್, ಗೋವರ್ಧನ ಹೊಸಮನಿ, ಯಶೋಧರ ಪಿ.ಕರ್ಕೇರಾ ಮಂಗಳೂರು, ಬಿ.ಪ್ರತಾಪ್ ಕುಮಾರ್, ಆರಿಸಲ್ಪಟ್ಟಿದ್ದಾರೆ. ಕೋಶಾಧ್ಯಕ್ಷರಾಗಿ ಶ್ರೀಪಾಲ್ ಎಸ್. ಪ್ರಧಾನ ನಿರ್ದೇಶಕರಾಗಿ ಡಾ. ನಾ, ಮೊಗಸಾಲೆ, ಸಹನಿರ್ದೇಶಕರಾಗಿ ನೇಮಿರಾಜ ಶೆಟ್ಟಿ, ಮುನಿರಾಜ ರೆಂಜಾಳ, ನಿರಂಜನ ಕುಮಾರ್ ಶೆಟ್ಟಿ ಆರಿಸಲ್ಪಟ್ಟಿದ್ದಾರೆ.

By suddi9

Leave a Reply

Your email address will not be published. Required fields are marked *