ಬಂಟ್ವಾಳ : ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ಆಶ್ರಯದಲ್ಲಿ ಬಡ್ಡಿ ಮಾಫಿಯಾ, ದಬ್ಬಾಳಿಕೆ ವಿರುದ್ಧ ಜನ ಜಾಗೃತಿ ಸಭೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಆ.16ರಂದು ಭಾನುವಾರ ಜರಗಿತು.
ಪುಂಜಾಲಕಟ್ಟೆ ಠಾಣಾ ಉಪನಿರೀಕ್ಷಕ ಲತೇಶ್ ಕುಮಾರ್ ಡಿ. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪರಿಣಾಮವಾಗಿ ಅ„ಕ ಬಡ್ಡಿ ವಸೂಲಿದಾರರ ವಿರುದ್ಧ ಪೆÇಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದು ಈಗಾಗಲೇ ವಿವಿಧ ರೀತಿಯಲ್ಲಿ ಮಾಹಿತಿ ನೀಡಲಾಗಿದೆ. ನೊಂದಾಯಿತ ಖಾಸಗಿ ಫೈನಾನ್ಸ್ ಮಾಲಕರು ನಿಯಮ ಮೀರಿ ಅ„ಕ ಬಡ್ಡಿ ವಸೂಲಿ ಮಾಡಿದರೆ ಮತ್ತು ಕೈ ಸಾಲ ನೀಡಿದವರು ಅ„ಕ ಬಡ್ಡಿಗಾಗಿ ಪೀಡಿಸಿದರೆ ಹಾಗೂ ಬಡ್ಡಿ ಮಾಫಿಯಾದವರ ದಬ್ಬಾಳಿಕೆಯಿಂದ ಸಮಸ್ಯೆ ಉಂಟಾದಲ್ಲಿ ಕೂಡಲೇ ಪೆÇಲೀಸ್ ಠಾಣೆಗೆ ದೂರು ನೀಡಬೇಕು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ವಾಹನ ಮೊದಲಾದ ಕೃಷಿಯೇತರ ಚಟುವಟಿಕೆಗಳಿಗೆ ಖಾಸಗಿ ಫೈನಾನ್ಸ್ಗಳಿಂದ ಸಾಲ ಮಾಡುವಾಗ ಅದರ ಯೋಜನೆ, ಯೋಚನೆಗಳ ಬಗ್ಗೆ ತಿಳಿದುಕೊಂಡು ವ್ಯವಹರಿಸಬೇಕು ಎಂದರು. ಹಾಗೂ ಸಭಿಕರ ಪ್ರಶ್ನೆಗಳಿಗೆ ಪೂರಕ ಮಾಹಿತಿ ನೀಡಿದರು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಬಡ್ಡಿ ಮಾಫಿಯಾ ವಿರುದ್ಧ ತುಳುನಾಡ ರಕ್ಷಣಾ ವೇದಿಕೆ ಜನಜಾಗೃತಿ ನಡೆಸುತ್ತಿದ್ದು ಇಂತಹ ಮಾಹಿತಿ ಶಿಬಿರಗಳಿಂದ ಜನಸಾಮಾನ್ಯರಿಗೆ ಮಾಹಿತಿ ದೊರೆಯುತ್ತದೆ. ಅಶಕ್ತರಿಗೆ ಧ್ವನಿಯಾಗುವ ನಿಟ್ಟಿನಲ್ಲಿ ರಕ್ಷಣಾವೇದಿಕೆ ಧೈರ್ಯ ತುಂಬುವ ಕಾರ್ಯ ನಡೆಸುತ್ತಿದೆ. ದೌರ್ಜನ್ಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಇದಕ್ಕೆ ಪೆÇಲೀಸ್ ಇಲಾಖೆ ಸಹಕರಿಸಬೇಕು ಎಂದು ಹೇಳಿದರು.ಯುವ ಘಟಕ ಅಧ್ಯಕ್ಷ ಮೋಹನ ದಾಸ್ ರೈ, ಕಾರ್ಮಿಕ ಘಟಕ ರಾಜ್ಯಾಧ್ಯಕ್ಷ ಕೃಷ್ಣಗಟ್ಟಿ ಸೋಮೇಶ್ವರ, ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿಕಾ ಜೈನ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮಹೇಂದ್ರನಾಥ ಸಾಲೆತ್ತೂರು, ಪುಂಜಾಲಕಟ್ಟೆ ಘಟಕ ಅಧ್ಯಕ್ಷ ರಮೇಶ್ ಶೆಟ್ಟಿ , ಎಡ್ತೂರುಪದವು ಘಟಕ ಅಧ್ಯಕ್ಷ ಗಣೇಶ್ ಶೆಟ್ಟಿ , ವಾಮದಪದವು ಘಟಕ ಕಾರ್ಯಾಧ್ಯಕ್ಷ ಶಿವಾನಂದ ಪೂಜಾರಿ ಕೆಂತಲೆ, ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಯಮಿ ಟಿ.ವರದರಾಜ ಪೈ ಅವರ ವತಿಯಿಂದ ಉಚಿತ ಕೊಡುಗೆಯಾಗಿ ನೀಡಿದ ಕನ್ನಡಕಗಳನ್ನು ಪೈ ಅವರು ವಿತರಿಸಿದರು.
ಸಂತೋಷ್ ಕುಮಾರ್ ಜೈನ್ ಬೊಳ್ಳಾಜೆ ಅವರು ಸ್ವಾಗತಿಸಿದರು. ಯೋಗೀಶ ಆಚಾರ್ಯ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ತುರ್ತು ಸಂದರ್ಭದಲ್ಲಿ ಮೀಟರ್ ಬಡ್ಡಿದಾರರಿಂದ ಹಣ ಪಡೆಯದಿರುವುದು ವಿವೇಕತನವಾಗಿದೆ. ರಾಜ್ಯವನ್ನು ತಂಬಾಕು ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪ್ಪನ್ನಗಳನ್ನು ಉಪಯೋಗಿಸದಂತೆ ಸೂಚನೆ ನೀಡಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 18 ವರ್ಷಗಳ ಕೆಳಗಿನ ಮಕ್ಕಳ ಲೈಂಗಿಕ ತಡೆ ಕಾಯ್ದೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸೈಬರ್ ಕ್ರೈಂ ನಿಂದ ಬ್ಯಾಂಕ್ ಖಾತೆಗಳನ್ನು ಹ್ಯಾಕಿಂಗ್ ನಡೆಸುವ ಬಗ್ಗೆ ಜಾಗರೂಕರಾಗಿರಲು ಎಚ್ಚರಿಕೆ ಸೂಚನೆ ನೀಡಲಾಗುತ್ತಿದೆ. ಸಾರ್ವಜನಿಕರು ಈ ಬಗ್ಗೆ ತಿಳಿದುಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿ ಸಹಕರಿಸಬೇಕು.
