ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ 69ನೇ ಸ್ವಾತಂತ್ರ್ಯೋತ್ಸವವನ್ನು ಗ್ರಾ.ಪಂ. ವಠಾರದಲ್ಲಿ ಆಚರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ವಿಜಯ ಧ್ವಜಾರೋಹಣಗೈದರು. ಉಪಾಧ್ಯಕ್ಷೆ ರೇವತಿ, ಸದಸ್ಯರುಗಳಾದ ಅಬ್ದುಲ್ ಲತೀಫ್, ಡಿ. ತನಿಯಪ್ಪ ಗೌಡ, ಪ್ರೇಮನಾಥ ಶೆಟ್ಟಿ, ರಾಮಚಂದ್ರ ಶೆಟ್ಟಿ, ಶ್ರೀಧರ ರೈ, ಸಮಿತಾ ಡಿ. ಪೂಜಾರಿ, ಪ್ರೇಮ, ಶಕಿಲ, ಹಾಗೂ ಶಶಿಕಲಾ ಭಂಡಾರಿ, ಗ್ರಾ.ಪಂ. ಮಾಜಿ ಸದಸ್ಯ ಅಬ್ಬಾಸ್ ಎನ್., ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಮಾಸ್ಟರ್, ನೇರಳಕಟ್ಟೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರೋಹಿತಾಶ್ವ, ಪ್ರಮುಖರಾದ ಸತೀಶ್ ಪೂಜಾರಿ, ಎನ್.ಕೆ. ಕಾಸಿಂ, ಶರೀಫ್ ಕೆಂಪುಗುಡ್ಡೆ, ರಶೀದ್ ಪರ್ಲೊಟ್ಟು ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಜಯರಾಮ್ ಸ್ವಾಗತಿಸಿ, ವಂದಿಸಿದರು.
