ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಜ 22 ಸಾವಿರ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಸ್ವಾತಂತ್ರ್ಯೋತ್ಸವ ಬೃಹತ್ ದಿನಾಚರಣೆಯ ಸಂಭ್ರಮ ಶನಿವಾರ ವಿದ್ಯಾಗಿರಿಯ ಕೆ.ವಿ ಸುಬ್ಬನ ಬಯಲು ರಂಗಮಂದಿರದಲ್ಲಿ ನಡೆಯಿತು.
ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗೌರವ ರಕ್ಷೆ ಸ್ವೀಕಾರ ಸ್ವೀಕರಿಸಿದರು. ವಂದೇ ಮಾತರಂ ದೇಶಭಕ್ತಿಗೀತೆಯ ಬಳಿಕ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಂದೇಶ ನೀಡಿ, ಗತ ದಿವಸಗಳನ್ನು ನೆನಪಿಸುವ ಹಾಗೂ ಭವಿಷ್ಯದ ಕನಸನ್ನು ನೆನಪಿಸಬೇಕಾಗಿದೆ. ನಮ್ಮ ಹಿರಿಯರ ಸಾಹಸ,ತ್ಯಾಗದಿಂದಾಗಿ ಸ್ವಾತಂತ್ರ್ಯ ಲಭಿಸಿದೆ. ಇದಕ್ಕೆ ಪೂರಕವಾಗಿ ದೇಶವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ದೇಶಕ್ಕೋಸ್ಕರ ಕನಸು ಕಂಡು ಅದನ್ನು ಮುನ್ನಡೆಸಬೇಕಾಗಿದೆ ಎಂದರು.
ಮಿಜಾರುಗುತ್ತು ಆನಂದ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ವಿವೇಕ್ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ದೀಪಾ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
22 ಸಾವಿರ ವಿದ್ಯಾರ್ಥಿಗಳ ಸುತ್ತಲೂ ತ್ರಿವರ್ಣದ ಧಿರಿಸುಗಳನ್ನು ಧರಿಸಿದ ವಿದ್ಯಾರ್ಥಿಗಳು, ತ್ರಿವರ್ಣದ ಹುಲಿವೇಷ, ತ್ರಿವರ್ಣ ಬಲೂನು, ವಿದ್ಯಾರ್ಥಿ ಸಮೂಹದ ಮಧ್ಯೆ ತ್ರಿವರ್ಣದಲ್ಲೇ ಬರೆದ ಅಕ್ಷರ `ಆಳ್ವಾಸ್’ ಸಂಭ್ರಮಕ್ಕೊಂದು ವಿಶೇಷ ಮೆರಗು ನೀಡಿತು.
ಆಳ್ವಾಸ್ ಸಂಸ್ಥೆಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ, ಆಯುರ್ವೇದ, ನರ್ಸಿಂಗ್, ಇಂಜಿನಿಯರಿಂಗ್ ಸಹಿತ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎನ್ಸಿಸಿ, ಎನ್ಎಸ್ಎಸ್, ಸೌಟ್, ಗೈಡ್ಸ್ ಮೊದಲಾದ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಗಾಯಕರ ಕೂಡುವಿಕೆಯಲ್ಲಿ ಸಂಗೀತ ಮಧುರ ಸಂಗಮ, ಇಂಡಿಯಾ ಗಾಟ್ ಟ್ಯಾಲೆಂಟ್ ಖ್ಯಾತಿಯ ಎಕ್ಸ್ ವನ್ ಎಕ್ಸ್ ಕ್ರ್ಯೂ ಥಾಣೆ ಇವರ ವೈವಿಧ್ಯಮಯ ನೃತ್ಯ. ನುಡಿಸಿರಿ ವೇದಿಕೆಯಲ್ಲಿ ಮಲ್ಲ ಕಂಭ ಪ್ರದರ್ಶನ ನಡೆಯಿತು.
