ಬಂಟ್ವಾಳ : ನೇರಳಕಟ್ಟೆ ಅಂಗನವಾಡಿ ಕೇಂದ್ರದ ಉಸ್ತುವಾರಿ ಹಾಗೂ ಬೆಂಬಲ ಸಮಿತಿ ಅಧ್ಯಕ್ಷರಾಗಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮ ಅವರು ಆಯ್ಕೆಯಾಗಿದ್ದಾರೆ.
14 Aug Prema
ಬಂಟ್ವಾಳ ಶಿಶು ಅಭಿವೃದ್ದಿ ಇಲಾಖಾ ಮೇಲ್ವಿಚಾರಕಿ ಸೋಮಕ್ಕ ಅವರ ಅದ್ಯಕ್ಷತೆಯಲ್ಲಿ ಬುಧವಾರ ನೇರಳಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ನೆಟ್ಲಮುಡ್ನೂರು ಗ್ರಾ.ಪಂ. ಉಪಾಧ್ಯಕ್ಷೆ ರೇವತಿ, ಸದಸ್ಯರುಗಳಾದ ಅಬ್ದುಲ್ ಲತೀಫ್, ಶ್ರೀಧರ್ ರೈ, ನಿವೃತ್ತ ಶಿಕ್ಷಕ ರಾಮಚಂದ್ರ ಮಾಸ್ಟರ್, ರೊ. ಹಾಜಿ ಮುಹಮ್ಮದ್ ರಫೀಕ್, ಪ್ರಶಾಂತ್ ಗಣೇಶ್ ನಗರ, ಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಆರೋಗ್ಯ ಇಲಾಖೆಯ ಕಸ್ತೂರಿ, ಪದ್ಮನಾಭ ರಾವ್, ಸ್ತ್ರೀ ಶಕ್ತಿ ಗುಂಪಿನ ಸುಧಾ, ರೇಖಾ ಹಾಗೂ ಅಂಗನವಾಡಿ ಶಿಕ್ಷಕಿ ವಸಂತಿ ಎಂ.ಆರ್. ಅವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು.

By Suddi9

Leave a Reply

Your email address will not be published. Required fields are marked *