ಬಂಟ್ವಾಳ:  ಮನುಷ್ಯರು ಪ್ರಕೃತಿಯನ್ನು ಹೊಂದಿಕೊಂಡಿದ್ದರೆ ಅವರು ಆರೋಗ್ಯವಂತ ಜೀವನವನ್ನು ಸಾಗಿಸಲು ಸಾಧ್ಯ. ಆನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಸಾಮಥ್ರ್ಯವು ಪ್ರಕೃತಿಗಿದೆ. ಆದುದರಿಂದ ಪ್ರಕೃತಿಯಲ್ಲಿ ಸಿಗಬಹುದಾದ ‘ ನೈಸರ್ಗಿಕದತ್ತ ’ ಸಂಪನ್ಮೂಲಗಳನ್ನು ಕಾಲಕಾಲಕ್ಕೆ ಅಗತ್ಯಕ್ಕನುಗುಣವಾಗಿ ಬಳಸುವ ವಿಧಾನಗಳನ್ನು ಎಳವೆಯಲ್ಲೇ ರೂಢಿಸಿಕೊಳ್ಳಿ ಎಂಬುದಾಗಿ ತುಂಬೆ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವ ಹೇಳಿದರು. ಅವರು ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ‘ ಆಟಿಯಲ್ಲೊಂದು ಕೂಟ ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

2

1 (1)ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿ ತುಂಬೆ ಕಾಲೇಜಿನ ಉಪನ್ಯಾಸಕರಾದ ವಿ.ಎಸ್.ಭಟ್ ಮಾತನಾಡಿ, ಆಷಾಢ ಮಾಸದಲ್ಲಿ ಅನೇಕ ಸಾಂಪ್ರದಾಯಿಕ ಆಚರಣೆಗಳಿದ್ದು, ಬಡತನದ ತಿಂಗಳು ಎಂದು ಗುರುತಿಸಲ್ಪಟ್ಟಿದೆ. ಈ ಆಟಿ ತಿಂಗಳಲ್ಲಿ ಉರಗೆ, ತಗತೆ, ಕೆಸುವು ಮುಂತಾದ ಸೊಪ್ಪುಗಳಿಂದ ಮಾಡಿದ ಪದಾರ್ಥ ಹಾಗೂ ಶೇಖರಿಸಿದ್ದ ಉಪ್ಪಿನ ಮಾವು, ಉಪ್ಪು ಸೊಳೆ, ಬೇಳೆ ಇತ್ಯಾದಿ ತಿನಿಸುಗಳನ್ನು ಮಾಡಿ ತಿನ್ನುವುದು ರೂಢಿಯಾಗಿ ಬಂದಿದೆ. ಇಂತಹ ಸೀಸನಲ್ ತಿನಿಸುಗಳನ್ನು ತಿನ್ನುವುದು ವೈಜ್ಞಾನಿಕವಾಗಿಯೂ ಆರೋಗ್ಯಕರ ಎನ್ನುವುದು ಶ್ರುತಪಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಕೆದಿಲ ಮಾತನಾಡುತ್ತಾ, ವಿದ್ಯಾರ್ಥಿಗಳು ಪ್ರಕೃತಿದತ್ತ ಎಲೆ ಮರ ಗಿಡಗಳ ಪರಿಚಯವನ್ನು ಆಟಿ ತಿಂಗಳ ಆಚರಣೆಯಿಂದ ಕಲಿತುಕೊಳ್ಳಬಹುದು ಎಂದರು.

ತುಂಬೆ ಪ್ರೌಢಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ ವಿದ್ಯಾ ಕೆ., ಕುಮಾರಿ ರೇಖಾ ಎನ್., ಶ್ರೀಮತಿ ಜ್ಯೋತಿಶೆಟ್ಟಿ, ಹಾಗೂ ಸಹ ಶಿಕ್ಷಕರಾದ ಶ್ರೀ ದೇವದಾಸ್ ಕೆ.ಕೆ., ಕಾರ್ಯಕ್ರಮವನ್ನು ಸಂಘಟಿಸಿದ್ದರು. ಸಹ ಶಿಕ್ಷಕರಾದ ಶ್ರೀ ನವೀನರಾವ್, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ನಾಯಕ್ ಉಪಸ್ಥಿತರಿದ್ದ ಸಮಾರಂಭದಲ್ಲಿ ಮೊದಲಿಗೆ ರಶ್ಮಿತ, ಸಹನ ಹಾಗೂ ರಶ್ಮಿತ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಕು. ಮೌಶಿತ ಸ್ವಾಗತಿಸಿ, ಕು. ಸುಶ್ಮಿತ ವಂದಿಸಿದರು. ಕುಮಾರಿ ವೈಶಾಲಿ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ತಯಾರಿಸಿ ತಂದ ಸುಮಾರು 35 ಬಗೆಯ ಸರಳ ತಿನಿಸುಗಳನ್ನು ಅತಿಥಿಗಳೊಂದಿಗೆ ಸುಮಾರು ನೂರೈವತ್ತು ಮಂದಿ ವಿದ್ಯಾರ್ಥಿಗಳು ನೆಲದಲ್ಲಿ ಕುಳಿತು ಬಾಳೆಎಲೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸವಿದರು.

By Suddi9

Leave a Reply

Your email address will not be published. Required fields are marked *