ಕಲ್ಲಡ್ಕ :ಕನ್ನಡ ಸಾಹಿತ್ಯ ಪರಿಷತ್‍ನ ಶತಮಾನೋತ್ಸವ ಪ್ರಯುಕ್ತ ಶತಮಾನ ಕಂಡ ಶಾಲೆಗಳಿಗೆ ಗೌರವಾರ್ಪಣೆ ಮತ್ತು ಎಸ್‍ಎಸ್‍ಎಲ್‍ಸಿಯಲ್ಲಿ ನೂರು ಶೇಕಡಾ ಫಲಿತಾಂಶ ಸಾಧನೆಗೈದ ತಾಲೂಕಿನ ಕನ್ನಡ ಶಾಲೆಗಳಿಗೆ ಅಭಿನಂದನಾ ಕಾರ್ಯಕ್ರಮ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಆ.17ರಂದು 10.30ಕ್ಕೆ ಕಸಾಪ ಜಿಲ್ಲಾ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆಯಲ್ಲಿ ಜರಗಲಿದೆ.
1702ರಲ್ಲಿ ಸ್ಥಾಪನೆಗೊಂಡ ಇನ್‍ಫ್ಯಾಂಟ್ ಜೀಸಸ್ಸ್ ಅನುದಾನಿತ ಹಿ.ಪ್ರಾ.ಶಾಲೆ ಸೇರಿದಂತೆ ಶತಮಾನ ಪೂರೈಸಿದ ಬಂಟ್ವಾಳ ತಾಲೂಕಿನ 29 ಹಿ.ಪ್ರಾ.ಶಾಲೆಗಳನ್ನು ಹಾಗೂ ಶೇಕಡಾ 100ಫಲಿತಾಂಶ ಪಡೆದ 15 ಕನ್ನಡ ಮಾಧ್ಯಮ ಶಾಲೆಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಗುವುದು.ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ಅಭಿನಂದಿಸುವರು.ನಿವೃತ್ತ ಮುಖ್ಯಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಕಲಿಕೆ ಮತ್ತು ಪುಸ್ತಕ ಪ್ರೀತಿ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಹಾಗೂ ಜಿಲ್ಲಾ ಕಸಾಪ ಪದಾಧಿಕಾರಿಗಳು , ಸ್ವರ್ಣೋಧ್ಯಮಿ ನಾಗೇಂದ್ರ ವಿ.ಬಾಳಿಗ ಬಂಟ್ವಾಳ ಉಪಸ್ಧಿತಲಿರುವರು ಎಂದು ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷಜಯಾನಂದ ಪೆರಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಶಾಲಾ ಮುಖ್ಯಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.

ಬಂಟ್ವಾಳ ತಾಲೂಕಿನ ಶತಮಾನ ಕಂಡ ಶಾಲೆಗಳು
ದ.ಕ.ಜಿಲ್ಲೆಯಲ್ಲಿ 137 ಪ್ರಾಥಮಿಕ ಶಾಲೆಗಳು ಶತ ವರ್ಷಗಳನ್ನು ಪೂರೈಸಿವೆ. ಜಿಲ್ಲೆಯಲ್ಲೆ ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳು ಬಂಟ್ವಾಳ ತಾಲೂಕಿನಲ್ಲಿ 1702ಕ್ಕೆ ಆರಂಭಗೊಂಡಿದ್ದು 29 ಶಾಲೆಗಳು ಇವೆ. ಸರಕಾರಿ ಹಿ.ಪ್ರಾ.ಶಾಲೆಗಳಾದ ವಿಟ್ಲ (1879), ಕಳ್ಳಿಗೆ (1913),ಕಲ್ಲಡ್ಕ (1893), ಬಡಗಕಜೆಕಾರು (1901), ಕೊಡಂಗಾಯಿ (1912),ಪುದು (1902), ಮಿತ್ತೂರು (1910),ಕಾವಳಮೂಡೂರು (1911),ಬೋಳಂತೂರು (1911), ಬಾಳೆಪುಣಿ (1894),ಉಳಿ (1910), ಸಾಲೆತ್ತೂರು (1903), ಕೊಯಿಲ (1912), ಕನ್ಯಾನ (1914)ಆನಂತಾಡಿ (1915),
ತಾಲೂಕಿನಲ್ಲಿ ಅನುದಾನಿತ 14ಶಾಲೆಗಳು ಖಾಸಗಿ ಅವರಿಂದ ಪ್ರಾರಂಭಗೊಂಡಿತ್ತು ಶ್ರೀ ಚಂದ್ರನಾಥೇಶ್ವರ ಹಿ.ಪ್ರಾ.ಶಾಲೆ ಅರಳ ಅರಳ (1909),ಕೈರಂಗಳ ಹಿ.ಪ್ರಾ.ಶಾಲೆ (9900), ಕುಳ ಹಿ.ಪ್ರಾ.ಶಾಲೆ (1913), ಸೈಂಟ್ ಜೋಸೆಫ್ ಹಿ.ಪ್ರಾ.ಶಾಲೆ ಬರಿಮಾರು (1893) ಸೈಂಟ್ ಲಾರೆನ್ಸ್ ಹಿ.ಪ್ರಾ.ಶಾಲೆ ವಿಜಯಡ್ಕ (1914)ಸೈಂಟ್ ಅಂತೋನಿ ಹಿ.ಪ್ರಾ.ಶಾಲೆ ಕರಿಂಗಾಣ (1890)ಅಮ್ಮುಂಜೆ ಕಿ.ಪ್ರಾ.ಶಾಲೆ (1905), ಬಂಟ್ವಾಳ ಎಸ್.ವಿ.ಎಸ್.ದೇವಳ ಕಿ.ಪ್ರಾ.ಶಾಲೆ (1892), ಮೊಡಂಕಾಪು ಇನ್‍ಫೆಂಟ್ ಜೀಸಸ್ ಹಿ.ಪ್ರಾ.ಶಾಲೆ (1702), ಚೇಳೂರು ಹಿ.ಪ್ರಾ.ಶಾಲೆ (1902), ಮಾಣಿಲ ಹಿ.ಪ್ರಾ.ಶಾಲೆ (1907), ಕೆದಿಲ ಹಿ.ಪ್ರಾ.ಶಾಲೆ(1907), ಲೊರೆಟ್ಟೊ ಹಿ.ಪ್ರಾ.ಶಾಲೆ (1911), ಫಜೀರು ಹಿ.ಪ್ರಾ.ಶಾಲೆ (1905).

2014-15ನೇ ಸಾಲಿನ ಎಸ್.ಎಸ್.ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಸಾಧನೆಗೈದು ಕನ್ನಡ ಮಾಧ್ಯಮ ಶಾಲೆಗಳು
ಮೊಡಂಕಾಪು ಕಾರ್ಮೆಲ್ ಬಾಲಕಿಯರ ಪ್ರೌಢಶಾಲೆ
ಮೊಡಂಕಾಪು ದೀಪಿಕಾಪ್ರೌಢ ಶಾಲೆ
ತುಂಬೆ ಪ.ಪೂ.ಕಾಲೇಜು
ಕೊಯಿಲ ಸರಕಾರಿ ಪ್ರೌಢ ಶಾಲೆ
ನೈನಾಡು ಸರಕಾರಿ ಪ್ರೌಢ ಶಾಲೆ
ಅಲ್ಲಿಪಾದೆ ಸೈಂಟ್ ಜೋನ್ಸ್ ಪ್ರೌಢ ಶಾಲೆ
ಒಡಿಯೂರು ಶ್ರೀ ಗುರದೇವ ಕನ್ನಡ ಮಾಧ್ಯಮ ಪ್ರೌಢ ಶಾಲೆ
ಪಂಜಿಕಲ್ಲು ಸರಕಾರಿ ಪ್ರೌಢ ಶಾಲೆ
ಪೊಳಲಿ ಸರಕಾರಿ ಪ್ರೌಢ ಶಾಲೆ
ಕಾಡುಮಠ ಸರಕಾರಿ ಪ್ರೌಢ ಶಾಲೆ
ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆ
ಬೊಳಂತಿಮೊಗರು ಸರಕಾರಿ ಪ್ರೌಢ ಶಾಲೆ
ಮಿತ್ತೂರು ದಾರುಲ್ ಇರ್ಶಾದ್ ಬಾಲಕರ ಪ್ರೌಢ ಶಾಲೆ
ವಿಜಯಡ್ಕ ಸೈಂಟ್ ಲೋರೆನ್ಸ್ ಪ್ರೌಢ ಶಾಲೆ
ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢ ಶಾಲೆ ಶಾರದಾ ವಿಹಾರ

 

By Suddi9

Leave a Reply

Your email address will not be published. Required fields are marked *