ಬಂಟ್ವಾಳ: ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ, ಲಯನ್ಸ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಹಾಗೂ ಪ್ರಜ್ಞಾ ಸಲಹಾ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಪ್ರತೀ ತಿಂಗಳ ಎರಡನೇ ಮಂಗಳವಾರ ನಡೆಯುವ “ಆರೋಗ್ಯ ಮಾಹಿತಿ” ಕಾರ್ಯಕ್ರಮವನ್ನು ಟ್ರಸ್ಟ್‍ನ ಅಧ್ಯಕ್ಷರಾದ ಲಯನ್ ಡಾ| ಬಿ. ವಸಂತ ಬಾಳಿಗಾರವರು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜಯಂತ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಜ್ಞಾ ಸಲಹಾ ಕೇಂದ್ರದ ಸಂಯೋಜನಾಧಿಕಾರಿ ದೇವದಾಸ್ ಉಚ್ಚಿಲ್, ಪ್ರಾಂತೀಯ ಅಧ್ಯಕ್ಷರಾದ ಲಯನ್ ದಾಮೋದರ ಬಿ. ಎಂ., ಲಯನೆಸ್ ಅಧ್ಯಕ್ಷೆ ಗೀತಾ ಜೆ. ಶೆಟ್ಟಿ, ಕೋಶಾಧಿಕಾರಿಗಳಾದ ಫ್ರಾನ್ಸಿಸ್ ಸಲ್ದಾನ್ಹ, ಜ್ಯೋತಿ ಮಧ್ವರಾಜ್ ಭಾಗವಹಿಸಿದ್ದರು. ಸಮಾರಂಭದಲ್ಲಿ ಕ್ಯಾಬಿನೆಟ್ ಪದಾಧಿಕಾರಿಗಳಾದ ವಸಂತ ಕುಮಾರ್ ಶೆಟ್ಟಿ, ಸುಧಾಕರ ಆಚಾರ್ಯ, ಪುಷ್ಪರಾಜ ಶೆಟ್ಟಿ ಉಪಸ್ಥಿತರಿದ್ದರು. ಪ್ರಜ್ಞಾ ಸಲಹಾ ಕೇಂದ್ರದ ಶ್ರೀಮತಿ ಧನಲಕ್ಷ್ಮೀ ಪ್ರಸ್ತಾವನೆ ಗೈದರು. ಲಯನೆಸ್ ಕಾರ್ಯದರ್ಶಿ ಚಿತ್ರಾ ಯಡಪಡಿತ್ತಾಯ ವಂದನಾರ್ಪಣೆ ಗೈದರು.
