ಬಂಟ್ವಾಳ : ತಾಲೂಕು ಇರ್ವತ್ತೂರು ಗ್ರಾಮದ ಕಲ್ಲಡ್ಕ ಅಂಗನವಾಡಿ ಮೇಲುಸ್ತುವಾರಿ ಸಮಿತಿ ಮತ್ತು ಯುವಕರ ಬಳಗ ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ ಕಲ್ಲಡ್ಕ ಅಂಗನವಾಡಿ ಕೇಂದ್ರದಲ್ಲಿ ಆ.15ರಂದು ಜರಗಲಿದೆ.
ಹಾಪ್ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಲಕ್ಷ್ಮಿನಾರಾಯಣ ಉಡುಪ ಅವರು ಧ್ವಜಾರೋಹಣ ಗೈಯ್ಯಲಿರುವರು. ಉದ್ಯಮಿ ಕೆ.ಅವನೀಶ್ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿರುವರು. ನಿವೃತ್ತ ಶಿಕ್ಷಕ ಸುಂದರ ಶೆಟ್ಟಿ ಬಜೆ ಸಮ್ಮಾನಿಸಲಿರುವರುವರು. ಸಮಾಜಸೇವಕ „ೀರಜ್ ಕುಮಾರ್,ಯುವ ವೈದ್ಯ ಡಾ| ರಾಮಕೃಷ್ಣ ಎಸ್. ಅವರನ್ನು ಸಮ್ಮಾನಿಸಲಾಗುವುದು.
