ಬಜ್ಪೆ: ಸ್ಕೂಟರ್ಗಳ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬ ಸಾವಿಗೀಡಾದ ಘಟನೆ ಬಜ್ಪೆ ಸಮೀಪದ ಭಟ್ರಕೆರೆ- ಕತ್ತಲ್ಸಾರ್ ರಸ್ತೆಯಲ್ಲಿ ಇತ್ತೀಚೆಗೆ ಸಂಭವಿಸಿದೆ. ಮೃತರನ್ನು ಕತ್ತಲ್ಸಾರ್ ನಿವಾಸಿ ಗಂಗಾಧರ ಗೌಡ(45) ಎಂದು ಗುರುತಿಸಲಾಗಿದೆ.
13 bajpe 1 (gangadhara gowda)
ನಿನ್ನೆ ಬೆಳಿಗ್ಗೆ ಗಂಗಾಧರ ಗೌಡ ಅವರು ತನ್ನಿಬ್ಬರು ಮಕ್ಕಳನ್ನು ಕಟೀಲು ಶಾಲೆಗೆ ಬಿಟ್ಟು ಭಟ್ರಕೆರೆ ಸಮೀಪ ಬರುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಮತ್ತೊಂದು ಆ್ಯಕ್ಟಿವಾ ಸ್ಕೂಟರ್ ಇವರ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಇವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲೆತ್ನಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By Suddi9

Leave a Reply

Your email address will not be published. Required fields are marked *