ಕರಕೌಶಲ್ಯದ ಶಿಕ್ಷಣದಲ್ಲಿ ದೇಶದ ಪ್ರಗತಿ ಅಡಗಿದೆ- ಶ್ರೀಯುತ ವಿದ್ಯಾಸಾಗರ ರಾವ್
ದೇಶದಪ್ರಗತಿಯ ಸಾಧನೆಯಲ್ಲಿ ಶಿಕ್ಷಣದ ಪಾತ್ರ ಅಡಗಿದೆ. ಶಿಕ್ಷಣವನ್ನು ಧಾರೆಯೆರೆಯುವುದರ ಜೊತೆಗೆ ಸ್ವ-ಸಾಮಥ್ರ್ಯ, ಸೃಜನಶೀಲ ಕೌಶಲ್ಯದ ಶಿಕ್ಷಣವನ್ನು ಪ್ರಹಾರಗೊಳಿಸಬೇಕು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಶಿಕ್ಷಣದಲ್ಲಿ ವ್ಯತ್ಯಾಸವನ್ನು ನೋಡಿದಾಗ ಭಾರತ ದೇಶದ ಅಧ್ಯಯನದಲ್ಲಿ ಮಾನವೀಯ ಮೌಲ್ಯಗಳು, ಕರಕುಶಲದ ಕೌಲ್ಯಗಳು, ಆದರ್ಶ ಮನುಷ್ಯತ್ವದ ಭಾವನೆಗಳು, ಐಕ್ಯತೆ, ಭಾವೈಕ್ಯತೆ, ಏಕಾತ್ಮತೆಯ ಕೊರತೆಯಿದ್ದು, ಅದು ವಿವಿಧತೆಗೆ ಮತ್ತು ಭವ್ಯವಾದ ಭವಿಷ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಶಿಕ್ಷಣ ಸವರ್ಾಂಗೀಣ ಮತ್ತು ಸರ್ವತೋಮುಖದ ತತ್ವವನ್ನು ಒಳಗೊಂಡಿರಬೇಕು. ಶಿಕ್ಷಣದ ಮೂಲಕ ಸಮಾಜ ಸುಧಾರಣಾ ಕ್ರಾಂತಿಯ ಪರ್ವವನ್ನು ಪ್ರಾರಂಭಿಸಿದ ವಿದ್ಯಾ ಪ್ರಸಾರಕ ಮಂಡಳದ ಸೇವಾ ಕಾಯಕವನ್ನು ಅಭಿನಂದಿಸಿ ಶ್ಲ್ಯಾಘಿಸಿದರು. ಶಿಕ್ಷಣದ ಜೊತೆಗೆ ಸಹಾಯ-ಸಹಕಾರ, ಸಹೋದರತ್ವ, ಮಾನವೀಯತೆ, ವ್ಯಕ್ತಿತ್ವದ ವಿಕಾಸವನ್ನು ಪ್ರದಶರ್ಿಸುವ ನೈತಿಕ ಮೌಲ್ಯವನ್ನು ಪ್ರತಿಪಾದಿಸುವಂತದ್ದನ್ನು ಕಲಿಸಬೇಕಾಗಿದೆ. ಇಂತಹ ಶಿಕ್ಷಣ ಕೇವಲ ವಿದ್ಯಾಥರ್ಿಗಳಿಗಷ್ಟೆ ಅಲ್ಲದೆ ಪಾಲಕರಿಗೆ ಮತ್ತು ವಿವಿಧ ಕ್ಷೇತ್ರಗಳ ಉದ್ಯೋಗದಲ್ಲಿ ತಲ್ಲಿನರಾಗಿರುವ ಮಾನವ ಜನಾಂಗಕ್ಕೆ ತಿಳಿಸಿಕೊಡಬೇಕಾಗಿದೆ. ಸಕಾರಾತ್ಮಕ, ವಿಕಾಸಾತ್ಮಕ, ಸ್ವಾವಲಂಬನೆ, ಬಾಂಧವ್ಯ, ಪ್ರಭುತ್ವತೆಯ ಪರಿಪೂರ್ಣತೆಯ ಮೌಲ್ಯಯುತ ಶಿಕ್ಷಣಕ್ಕೆ ವಿದ್ಯಾದೇಗುಲಗಳು ಗಮನ ಹರಿಸಬೇಕೆಂದು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾದ ಶ್ರೀಯುತ ವಿದ್ಯಾಸಾಗರ ರಾವ್ರು ವಿ.ಪಿ.ಎಮ್ ಶ್ರೀಮತಿ ವನಜಾ ಸುಂದರ ಶೆಟ್ಟಿ ಮೆಮೋರಿಯಲ್ ಜ್ಯೂನಿಯರ ಕಾಲೇಜಿನ ಬೆಳ್ಳಿ ಹಬ್ಬದ ಆಚರಣೆಯಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಾ ಶುಭ ಹಾರೈಸಿದರು!
ವಿದ್ಯಾ ಪ್ರಸಾರಕ ಮಂಡಳದ ಪ್ರದಾನ ಗೌರವ ಕಾರ್ಯದಶರ್ಿ ಡಾ|| ಪಿ.ಎಮ್ ಕಾಮತ್ರು ಬೆಳ್ಳಿ ಹಬ್ಬದ ವಿಜೃಂಭಣೆಯ ಹಿಂದೆ ಶ್ರಮದ ಪ್ರತಿಫಲವಿದೆ. ಕನ್ನಡ ಮಾತೃ ಸಂಸ್ಥೆಯಾಗಿದ್ದರು ಅದರ ಜೊತೆಗೆ ಬೇರೆ ಭಾಷೆಯ ಶಿಕ್ಷಣವನ್ನು ಕೊಡಲಾಗುತ್ತದೆ. ವಿವಿಧ ಉಪನಗರಗಳಿಂದ ಮಕ್ಕಳು ಬಾಲವಾಡಿಯಲ್ಲಿ ಪ್ರವೇಶ ಪಡೆದು ಮಹಾ ವಿದ್ಯಾಲಯದವರೆಗೂ ಅಧ್ಯಯನ ಮಾಡುತ್ತಾರೆ. ಉಚಿತ ಮತ್ತು ಕಡ್ಡಾಯ ಶಿಕ್ಷಣವೆಂದು ಹೇಳುವ ಸರಕಾರ ಫೀ ಯನ್ನು ವಸೂಲಿ ಮಾಡುತ್ತದೆ. ಮಹಾನಗರ ಪಾಲಿಕೆಯಾಗಲಿ, ರಾಜ್ಯ ಮತ್ತು ಕೇಂದ್ರ ಶಿಕ್ಷಣ ಸಚಿವರಾಗಲಿ ತಮ್ಮ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲವೆಂದು ಅನಾಸಕ್ತಿಯನ್ನು ತೊರಿದ ಅವರು 1957 ರಲ್ಲಿ ಪ್ರಾರಂಬವಾದ ವಿದ್ಯ ಪ್ರಸಾರಕ ಮಂಡಳವು ನಡೆದು ಬಂದ ದಾರಿ, ಮೈಲುಗಲ್ಲಿನ ಸಾಧನೆಯನ್ನು ವಿವರಿಸುತ್ತಾ ಸಮಾಜಸೇವೆಯಲ್ಲಿ ನಿರತರಾದ ವಿದ್ಯಾ ಪ್ರಸಾರಕ ಮಂಡಳಕ್ಕೆ ಕೊಡುಗೈ ದಾನಿಗಳು ಮುಂದೆ ಬರಬೇಕೆಂದು ಹೇಳಿ ಶುಭ ಹಾರೈಸಿದರು!

ಮಂಡಳದ ಸದಸ್ಯರು ಮತ್ತು ದಾನಿಗಳಾದ ಪ್ರೋ|| ಸಿ.ಜೆ.ಫೈಯವರು ದಾನಿಗಳಿಗೆ ವಿದ್ಯಾ ದೇಗುಲದ ಹೆಬ್ಬಾಗಿಲು ಮುಕ್ತವಾಗಿದೆ. ದಾನ-ಧರ್ಮದ ಹೃದಯ ಶ್ರೀಮಂತಿಕೆಯಿದ್ದರೆ ಸದಸ್ಯರು, ಗಣ್ಯರು ಎನ್ನುವ ಪ್ರಶ್ನೆಯಿಲ್ಲ. ಕಳೆದ ಅರವತ್ತು ವರ್ಷಗಳಿಂದ ಸ್ಥಾಪನೆ, ಅಭಿವೃದ್ಧಿ, ಬೆಳವಣಿಗೆ, ದುರಸ್ತಿಯ ಕಾರ್ಯ ಉದಾರ ದಾನಿಗಳಿಂದ. ಅವಿಶ್ರಾಂತ, ಪರಿಶ್ರಮ, ಶಿಕ್ಷಣದ ಮೇಲಿನ ಪ್ರೇಮ, ಮಾನವ ಕುಲದ ಉದ್ದೇಶಗಳಿಂದ ಬೆಳೆದ ಶಶಿ ಎಂದು ವೇದಿಕೆಯ ಮೇಲಿರುವ ವಿದ್ಯಾಸಾಗರ, ಎಚ್. ಸುರೇಶ, ಡಾ|| ಕಾಮತ್, ಬಿ.ಎಚ್.ಕಟ್ಟಿ, ಸರದಾರ ತಾರಾಸಿಂಗರನ್ನು, ನಿವೃತ್ತ ಶಿಕ್ಷಕರನ್ನು, ಪ್ರಾಂಶುಪಾಲೆ ಶ್ರೀಮತಿ ನಿರುಪಾ ಜೊರಾಪುರ, ಡಾ|| ಕೆ. ಮೋಹನ್., ಪದಾದಿಕಾರಿಗಳನ್ನು, ಶಿಕ್ಷಕರನ್ನು, ವಿದ್ಯಾಥರ್ಿಗಳನ್ನು ಸ್ವಾಗತಿಸಿದರು!
ಅತಿಥಿ-ಗಣ್ಯರ ಪರಿಚಯ ಮತ್ತು ಕಾರ್ಯಕ್ರಮದ ನಿರ್ವಹಣೆಯನ್ನು ಉಪನ್ಯಾಸಕರಾದ ಶಾಮಾದೇವಿ ಯಾದವ್ ಹಾಗೂ ಸುವಿನಾ ಶೆಟ್ಟಿ ಮಾಡಿದರೆ, ಗಣ್ಯರು ಪುಷ್ಪಗುಚ್ಛವಿತ್ತು ಗೌರವಿಸಿದರು. ಧನ್ಯವಾದವನ್ನು ಸಂಸ್ಥೆಯ ಜೊತೆ ಕಾರ್ಯದಶರ್ಿ ಶ್ರೀಯುತ ಬಿ. ಎಚ್. ಕಟ್ಟಿಯವರು ಗೈದರು. ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾರಂಭವು ಸಮಾರೋಪಗೊಂಡಿತು.
