ಬಂಟ್ವಾಳ: ಬೊಲ್ಪು ಕಲಾ ತಂಡ (ರಿ.) ಮಂಚಿ ಮತ್ತು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಕರ್ಣಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಆ. 8 ಶನಿವಾರದಂದು ಮಂಚಿಯ ಸರಕಾರಿ ಪ್ರೌಢಶಾಲೆಯಲ್ಲಿ ಆಟಿಡೊಂಜಿ-ಕೂಟೊ ಕಾರ್ಯಕ್ರಮ ನಡೆಯಿತು

ಬೆಳಿಗ್ಗೆ 9.30 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ (ರಿ.) ಇದರ ಸಾಲೆತ್ತೂರು ವಲಯದ ಮೇಲ್ವಿಚಾರಕ ಶ್ರೀ ನವೀನ್ ಶೆಟ್ಟಿ ಮಕ್ಕಳ ಜೊತೆ ಲಗೋರಿ ಆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅನಂತರ ಶಾಲಾ ಮಕ್ಕಳಿಗಾಗಿ ವಿವಿಧ ಗ್ರಾಮೀಣ ಅಟೋಟ ಸ್ಪರ್ಧೆಗಳು, ತುಳುನಾಡ ದುತ್ತೈತ ತೂಪರಿಕೆ (ಪ್ಯಾಶನ್ ಶೋ) ಆಟಿಕಳಂಜ ಮೊದಲಾದ ಕಾರ್ಯಕ್ರಮಗಳು ನಡೆದವು. ಸಂಜೆ ಗಂಟೆ -4.00 ಕ್ಕೆ ನಡೆದ ಸಮಾರೊಪ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಶ್ರೀ.ಡಿ.ಎಂ.ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಯಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀ,ಮಹಮ್ಮದ್ ಸಾಲೆ, ನೂಜಿಬೈಲು ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕರಾದ ಶ್ರೀಮತಿ ಶಾಂತಲಾ.ಎನ್.ಭಟ್, ಶ್ರೀ,ದಿವಾಕರ ನಾಯಕ್ ಕುಂಟೂರು ಮೊದಲಾದವರು ಆಟಿಯ ಬಗ್ಗೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಕ್ಕಳಿಗೆ ಆಟಿಯ ಮಹತ್ವವನ್ನು ವಿವರಿಸಿದರು. ತಂಡದ ಸಂಚಾಲಕ ಕೊರಗಪ್ಪ ಸಿಂಗಾರಕೋಡಿ ಪ್ರಸ್ತಾಪಿಸಿ, ಅಧ್ಯಕ್ಷ ಅಶೋಕ.ಬಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ. ವಿ.ಶ್ರೀರಾಮಮೂರ್ತಿ ವಂದಿಸಿದರು. ಯಂ.ಡಿ ಮಂಚಿ ಕಾರ್ಯಕ್ರಮ ನಿರೂಪಿಸಿದರು.
