ಬಂಟ್ವಾಳ: ಕಲ್ಲಡ್ಕದಲ್ಲಿ ಕೋಮು ಹಿಂಸಾಚಾರ ಶುಕ್ರವಾರ ಮಧ್ಯಾಹ್ನದ ವೇಳೆಗೆ ಮತ್ತೆ ಮರುಕಳಿದೆ. ಗುರುವಾರ ರಾತ್ರಿಯ ವೇಳೆ ಕ್ಷುಲ್ಲಕ ವಿಚಾರಕ್ಕಾಗಿ ಉಭಯ ಕೋಮಿನ ಮಧ್ಯೆ ಉಂಟಾದ ಘರ್ಷಣೆಯ ಮುಂದುವರೆದ ಭಾಗವೆಂಬಂತೆ ಗುಂಪು ಘರ್ಷಣೆ ಹಾಗೂ ಕಲ್ಲುತೂರಾಟ ನಡೆದಿದೆ. ಆದರೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲಿಸರು ಪರಿಸ್ಥಿಯನ್ನು ನಿಯಂತ್ರಿಸಿದ್ದಾರೆ. ಈ ಘಟನೆಯಿಂದ ಭಯ ಬೀತರಾದ ಕೆಲ ಅಂಗಡಿ ವ್ಯಾಪರಸ್ಥರು ಅಂಗಡಿಗಳ ಬಾಗಿಲು ಮುಚ್ಚಿ ತೆರಳಿದರೆ, ಉಳಿದ ಅಂಗಡಿಗಳನ್ನು ಪೊಲೀಸರೇ ಬಾಗಿಲು ಮುಚ್ಚಿಸಿದ ದೃಶ್ಯ ಕಂಡು ಬಂದಿದೆ. ಅಹಿತಕರ ಘಟನೆಗೆ ಸಂಬಂದಿಸಿ ಬಂಟ್ವಾಳ ನಗರ ಪೊಲಿಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲುಗೊಂಡಿದ್ದು ಮುನ್ನೆಚ್ಚರಿಕೆಯ ಕ್ರಮವಾಗಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

kaladka
kaladka

5 (4)

8 (3)

9 (1)

11
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಹಿತೇಂದ್ರ, ಎಸ್ಪಿ ಡಾ.ಶರಣಪ್ಪ. ಹೆಚ್ಚುವರಿ ಎಸ್ಪಿ ಟಿ. ಶಿವಕುಮಾರ್ ಭೇಟಿ ನೀಡಿ ಅಹಿತಕರ ಘಟನೆ ಮುಂದುವರೆಯಂದತೆ ಕ್ರಮ ಕೈಗೊಳ್ಳಲು ಮಾರ್ಗದರ್ಶನ ಮಾಡಿದ್ದಾರೆ. ಡಿವೈಎಸ್ಪಿ ರಶ್ಮಿ ಪರಡಿ, ವೃತ್ತ ನಿರೀಕ್ಷಕ ರಾಜಶೇಖರ ಮೇಸ್ತ್ರಿ, ಎಸೈ ಸಂಜಯ್ ಕಲ್ಲೂರ ಕಲ್ಲಡ್ಕದ್ಲಲೆ ಮೊಕ್ಕಾಂ ಹೂಡಿದ್ದಾರೆ. ಹೆಚ್ಚುವರಿ ಪೊಲೀಸರು ಹಾಗೂ ಶಸ್ತ್ರ ಸಜ್ಜಿತ ಬಿಎಸ್ಎಫ್ ಯೋದರನ್ನು ಕರೆಸಿಕೊಳ್ಳಲಾಗಿದ್ದು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ.
ಗಲಭೆ ಹಿನ್ನಲೆ: ಕೇಸರಿ ಶಾಲು ಧರಿಸಿದ್ದ ಅಮಿತ್ ಎಂಬಾತ ದುರುಗುಟ್ಟಿ ನೋಡಿದ ಎಂದು ಖಲೀಲ್ ಎಂಬಾತ ಪ್ರಶ್ನಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಇದರಿಂದ ಉಭಯ ಕೋಮಿನ ಮಧ್ಯೆ ಆರಂಭಗೊಂಡ ಮಾತಿನ ಚಕಮಕಿ, ತಳ್ಳಾಟ ಕಲ್ಲು, ಸೋಡಾ ಬಾಟ್ಲಿ ತೂರಾಟದವರೆಗೂ ಮಂದುವರೆದು ಹಲವರು ಗಾಯಗೊಳ್ಳುವಂತಾಯಿತು. ಗಾಯಾಳುಗಳಾದ ಅಮಿತ್ ಪೂಜಾರಿ, ರಾಜೇಶ್ ಪೂಜಾರಿ, ಪುಷ್ಪರಾಜ್ ಪೂಜಾರಿ, ರಮೇಶ್ ನಾಯಕ್, ಹರೀಶ್, ತೌಫೀಕ್ ಹಾಗು ಖಲೀಲ್ ಎಂಬವರನ್ನು ಮಂಗಳೂರು, ತುಂಬೆ ಹಾಗೂ ಪುತ್ತೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಂಗಡಿ, ಮನೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಕಲ್ಲು ತೂರಾಟದಿಂದ ಹಾನಿಗೀಡಾಗಿವೆ. ಶುಕ್ರವಾರ ಬೆಳಿಗ್ಗೆ ಅರೆ ಸೇನಾ ಪಡೆಯ ಸಿಬ್ಬಂದಿಗಳು ಮುಂಜಾಗೃತ ಕ್ರಮದ ಹಿನ್ನಲೆಯಲ್ಲಿ ಕಲ್ಲಡ್ಕ ಪರಿಸರದಲ್ಲಿ ಪಥ ಸಂಚಲನ ನಡೆಸಿದ್ದರು. ಆದರೂ ಮಧ್ಯಾಹ್ನದ ವೇಳೆಗೆ ಉದ್ವಿಘ್ನ ಸ್ಥಿತಿ ಮರುಕಳಿಸಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ.
`
ಬಿಕೋ ಎನ್ನುತ್ತಿರುವ ಕಲ್ಲಡ್ಕ:

By suddi9

Leave a Reply

Your email address will not be published. Required fields are marked *