ಬಂಟ್ವಾಳ; ಬಿಜೆಪಿ ರಾಷ್ಟ್ರೀಯತೆಯ ಆಧಾರದಲ್ಲಿ ಮತಯಾಚಿಸುತ್ತಿದ್ದರೆ, ಕಾಂಗ್ರೇಸ್ ಪಕ್ಷ ಜಾತಿ,ಕೋಮು ಮುಂತಾದ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ, ಅವರ ಯಾವ ಹೇಳಿಕೆಗಳೂ ಪ್ರತಿಕ್ರಿಯೆಗೆ ಯೋಗ್ಯವಲ್ಲ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬಿ.ಸಿ.ರೋಡಿನ ಬಿಜೆಪಿ ಚುನಾವಣಾ ಕಾಯರ್ಾಲಯದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೇಸ್ ಗೆ ಈ ಬಾರಿಯ ಚುನಾವಣೆ ಅಳಿವು ಉಳಿವಿನ ಚುನಾವಣೆಯಾದರೆ ಬಿಜೆಪಿಗೆ ದೇಶ ಉಳಿಸುವ ಚುನಾವಣೆಯಾಗಿದೆ ಎಂದರು. ರಾಷ್ಟ್ರೀಯತೆ, ಬೆಲೆ ಏರಿಕೆ, ಭಯೋತ್ಪಾದನೆ, ದೇಶದ ಭದ್ರತೆ ಕುರಿತಾಗಿ ಚಚರ್ಿಸಬೇಕಾದ ಕಾಂಗ್ರೇಸ್ ಕೇವಲ ವಿವಾದಾತ್ಮಕ, ವ್ಯಕ್ತಿ ನಿಂದನೆಯ ಹೇಳಿಕೆಗಳನ್ನು ನೀಡಿ ಮತದಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಕಾಂಗ್ರೇಸ್ ನ ಅಸ್ಪಷ್ಟ ಹಾಗೂ ಬೇಜವಬ್ದಾರಿಯ ನಿಲುವುಗಳನ್ನು ಖಂಡಿಸುವುದಾಗಿ ಹೇಳಿದರು.
ಕಳೆದ 60 ವರ್ಷಗಳಿಂದ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇದೀಗ ಪ್ರಿಯಾಂಕಾ ಗಾಂಧಿಯ ಭಜನೆ ಮಾಡಿಕೊಂಡು ವ್ಯಕ್ತಿ ಪೂಜೆಯ ರಾಜಕಾರಣವನ್ನು ಕಾಂಗ್ರೇಸ್ ಮಾಡುತ್ತಿದ್ದು,ಇದಕ್ಕೆ ಬಿಜೆಪಿಯ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯವರನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದರು.
ಕೇಂದ್ರದ ಯುಪಿಎ ಸಕರ್ಾರದ ಕಳೆದ 10 ವರ್ಷಗಳ ಆಡಳಿತ ಸಂಪೂರ್ಣ ವೈಫಲ್ಯವನ್ನು ಕಂಡಿದೆ, ಹಾಗೆಯೇ ಕನರ್ಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸಕರ್ಾರವೂ ಸಂಪೂರ್ಣ ವಿಫಲವಾಗಿದೆ ಎಂದವರು ಆರೋಪಿಸಿದರು.
ರುಕ್ಮಯ ಪೂಜಾರಿ ಕ್ಲೀನ್ ಇಮೇಜ್ ಉಳ್ಳವರು..
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಂಟ್ವಾಳ ಎಪಿಎಂಸಿಯ ಮಾಜಿ ಅಧ್ಯಕ್ಷ ರೊನಾಲ್ಡ್ ಡಿ’ಸೋಜ ಅವರು ಮಾತನಾಡಿ,ಕಾಂಗ್ರೇಸ್ ಮುಖಂಡ ಹರಿಕೃಷ್ಣ ಬಂಟ್ವಾಳ ರವರು ಬಿಜೆಪಿಯ ಹಿರಿಯ ನಾಯಕ ರುಕ್ಮಯ ಪೂಜಾರಿಯವರ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿರುವುದನ್ನು ಆಕ್ಷೇಪಿಸಿದರು. ರುಕ್ಮಯ ಪೂಜಾರಿಯವರು ಬಿಲ್ಲವ ಸಮುದಾಯ ಮತ್ತು ರಾಜಕೀಯವಾಗಿಯೂ ಓರ್ವ “ಕ್ಲೀನ್ ಇಮೇಜ್” ವುಳ್ಳ ವ್ಯಕ್ತಿಯಾಗಿದ್ದಾರೆ ಎಂದು ತಿರುಗೇಟು ನೀಡಿದರು. ಹರಿಕೃಷ್ಣ ಬಂಟ್ವಾಳ ರವರು ಈ ಹಿಂದೆ ಆರ್ಎಸ್ಎಸ್- ಬಿಜೆಪಿಯಲ್ಲಿದ್ದು ಈಗ ತನ್ನ ಸ್ವಂತ ಲಾಭಕ್ಕಾಗಿ ಕಾಂಗ್ರೇಸ್ ನಲ್ಲಿದ್ದಾರೆ. ಅವರು ಬಿಜೆಪಿಯಲ್ಲೇ ಇರುತ್ತಿದ್ದರೆ ಇಷ್ಟೊತ್ತಿಗಾಗಲೇ ಅವರೊಬ್ಬ ಜನಪ್ರತಿನಿಧಿಯಾಗಿರುತ್ತಿದ್ದರು, ಆದರೆ ಅವರಿಗೆ ಕಾಂಗ್ರೇಸ್ ನಲ್ಲಿ ಸರಿಯಾದ ನೆಲೆಯೇ ಇಲ್ಲ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪ್ರಧಾನ ಕಾರ್ಯದಶರ್ಿಗಳಾದ ರಾಮದಾಸ್ , ದೇವಪ್ಪ ಪೂಜಾರಿ, ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ತಾ.ಪಂ. ಉಪಾಧ್ಯಕ್ಷ ಆನಂದ ಶಂಭೂರು, ಸದಸಯ ದಿನೇಶ್ ಅಮ್ಟೂರು, ಪುರುಷ ಎನ್ ಸಾಲ್ಯಾನ್, ಪುಷ್ಪರಾಜ ಶೆಟ್ಟಿ, ಆನಂದ ಕುಲಾಲ್ ಮೊದಲಾದವರಿದ್ದರು
