ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಇರಾ ಮತ್ತು ಮಾಣಿಲ ಗ್ರಾಮ ಪಂಚಾಯಿತಿ ಎರಡು ಸ್ಥಾನಗಳಿಗೆ ಕಳೆದ ಭಾನುವಾರ ನಡೆದ ಉಪಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ಭರ್ಜರಿ ಗೆಲುವು ಸಾಧಿಸಿಸುವ ಮೂಲಕ ಎರಡೂ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಇರಾ ಗ್ರಾಮ ಪಂಚಾಯಿತಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೆಫಿಯಾ ಮತ್ತು ಮಾಣಿಲ ಗ್ರಾಮ ಪಂಚಾಯಿತಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣಪ್ಪ ಪೂಜಾರಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ತಾಲ್ಲೂಕು ಕಛೇರಿಯಲ್ಲಿ ಚುನಾವಣಾಧಿಕಾರಿ ಪರಮೆಶ್ವರ ನಾಯ್ಕ್ ಅವರು ಬುಧವಾರ ಮತ ಎಣಿಕೆ ಪ್ರಕ್ರಿಯೆ ನಡೆಸಿ ಕೊಟ್ಟರು.
ಇರಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ತುಳಸಿ ಅವರು ಕಳೆದ ಮೇ ತಿಂಗಳಿನಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಇಲ್ಲಿನ 1ಮತ್ತು 6ನೇ ವಾರ್ಡ್ ಗಳಲ್ಲಿ ಸ್ಪರ್ಧಿಸಿ ಎರಡೂ ಕಡೆ ಜಯ ಗಳಿಸಿದ್ದರು. ಇದರಿಂದಾಗಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ 6ನೇ ವಾರ್ಡ್ಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪ ಚುನಾವಣೆ ಅನಿವಾರ್ಯವಾಗಿತ್ತು. ಈ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸೆಫಿಯಾ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಬಿ.ಫಾತಿಮ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ರುಕಿಯಾ ಸ್ಪರ್ಧಿಸಿದ್ದರು.
ಒಟ್ಟು 524 ಮತಗಳ ಪೈಕಿ ‘ಕೈ’ ಬೆಂಬಲಿತ ಅಭ್ಯರ್ಥಿ ಸೆಫಿಯಾ 282 ಮತಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಬಿ.ಫಾತಿಮ- 222 ಮತ್ತು ರುಕಿಯಾ ಇವರಿಗೆ ಕೇವಲ 14 ಮತಗಳು ದೊರೆತಿದೆ. ಉಳಿದಂತೆ 6 ಮತಗಳು ತಿರಸ್ಕೃತಗೊಂಡಿದೆ.
ಇನ್ನೊಂದೆಡೆ ಮಾಣಿಲ ಗ್ರಾಮ ಪಂಚಾಯಿತಿಯ 2ನೇ ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣಪ್ಪ ಪೂಜಾರಿ ಒಟ್ಟು ಒಟ್ಟು 762 ಮತಗಳ ಪೈಕಿ 458 ಮತಗಳಿಸಿ ಭರ್ಜರಿ ಗೆಲು ಸಾಧಿಸಿದ್ದಾರೆ. ಇಲ್ಲಿನ ಸದಸ್ಯ ರಾಜೇಶ್ ಬಾಳೆಕಲ್ಲು ಅವರು ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿ ಸಿ ಗೆದ್ದು ಬಳಿಕ 2ನೇ ವಾರ್ಡ್ ರಾಜೀನಾಮೆ ಸಲ್ಲಿಸಿದ ಪರಿಣಾಮ ಉಪಚುನಾವಣೆ ನಡೆದಿದೆ. ಇವರ ವಿರುದ್ಧ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮಕೃಷ್ಣ ಅಡ್ಯಂತಾಯ-305 ಮತಗಳಿಸಿದ್ದು, 7 ಮತಗಳು ತಿರಸ್ಕೃತಗೊಂಡಿದೆ.

