ಬಂಟ್ವಾಳ : ವಕೀಲರ ಸಂಘದ ವತಿಯಿಂದ ಬಂಟ್ವಾಳ ನ್ಯಾಯಾಲಯದ ಎದುರುಗಡೆ ಕದ್ರಿ ಪೋಲೀಸ್ ಠಾಣಾ ವಿರೀಕ್ಷಕರಾದ ಟಿ.ಡಿ.ನಾಗರಾಜ್ ರವರು ಮಂಗಳೂರು ವಕೀಲರ ಸಂಘದ ಸದಸ್ಯರಾದ ನ್ಯಾಯವಾದಿ ಉತ್ತಮ್ ಕುಮಾರ್ ರೈ ಯವರ ಮೇಲೆ ನಡೆಸಿದ ಅಮಾನುಷ ಹಲ್ಲೆಯನ್ನು ಖಂಡಿಸಿ ಹಾಗೂ ಉರ್ವ ಪೋಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ392 ಮತ್ತು 307ಮತ್ತು ಇತರ ಕಲಂನಡಿ ಪ್ರಕರಣ ದಾ ಖಲಾಗಿದ್ದರೂ ಇಂದಿನ ತನಕ ಟಿ.ಡಿ.ನಾಗರಾಜ್ ರನ್ನು ಬಂಧಿಸದೇ ಇದ್ದುದಕ್ಕಾಗಿ ಹಾಗೂ ಶೀಘ್ರವಾಗಿ ಬಂಧಿಸುವಂತೆ ಪ್ರತಿಭಟನೆ ಜರಗಿತು.
KAR_6754
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಉಪಾಧ್ಯಕ್ಷ ರಿಚಾರ್ಡ್ ಡಿಕೋಸ್ತ , ಕಾರ್ಯದರ್ಶಿ ಪುಂಚಮೆ ಚಂದ್ರಶೇಖರ ರಾವ್, ವಕೀಲರಾದ ಅಶ್ವನಿ ಕುಮಾರ್ ರೈ, ಸತೀಶ್ ಬಿ., ಸುರೇಶ್ ಪೂಜಾರಿ , ಸುರೇಶ್ ಕುಮಾರ್ ನಾವೂರ, ಜಯರಾಮ್ ರೈ , ರಮಾನಾಥ ಕಾರಂದೂರು , ಗಣೇಶ್ ಪೈ, ಎ.ಕೆ.ರಾವ್, ಗಣೇಶಾನಂದ ಸೋಮಯಾಜಿ, ಉಮಾನಾರಾಯಣ ಸೋಮಯಾಜಿ , ಆಶಾಪ್ರಸಾದ್ ರೈ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *