ಮೂಡುಬಿದರೆ: ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಹಂಡೇಲು ಕಾಪಿಕಾಡು ಎಂಬಲ್ಲಿ ಮಂಗಳವಾರ ಲಾರಿಯೊಂದ ನಿಯಂತ್ರಣ ತಪ್ಪಿ ಮನೆಯಂಗಳಕ್ಕೆ ಬಿದ್ದಿದೆ.

mbd_aug4_4 (1)

mbd_aug4_4 (2)ಹಂಡೇಲು ಕಾಪಿಕಾಡಿನ ಮನೆಯೊಂದಕ್ಕೆ ಮಂಗಳವಾರ ಮಧ್ಯಾಹ್ನ ಸುಮಾರು 12.45ರ ವೇಳೆಗೆ ಕೆಂಪುಕಲ್ಲುಗಳ ಲೋಡ್ ಇದ್ದ ಲಾರಿಯು 5 ಸೆಂಟ್ಸ್ ಬಳಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಎದುರಿಗಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಲಾರಿಯನ್ನು ಹಿಮ್ಮುಖವಾಗಿ ಚಲಾಯಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಕೃಷ್ಣ ಪೂಜಾರಿ ಅವರ ಮನೆಯಂಗಳಕ್ಕೆ ಬಿದ್ದಿದೆ. ಮಳೆಯಿಂದಾಗಿ ರಸ್ತೆ ಅಂಚಿನ ಮಣ್ಣು ಮೆತ್ತಗಿದ್ದ ಕಾರಣ ನಿಯಂತ್ರಣ ತಪ್ಪಿದ್ದು, ಅಂಗಳ ಬೀಳುವ ಮೊದಲು ಆವರಣ ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೃಷ್ಣ ಪೂಜಾರಿ, ಅವರ ಪತ್ನಿ ಹಾಗೂ ಸಂಬಂಧಿಕ ಯುವತಿಯೊಬ್ಬಳು ಅಂಗಳದಲ್ಲೇ ಇದ್ದು ಲಾರಿ ಪಲ್ಟಿಯಾಗುವ ಸಂದರ್ಭ ಮನೆಯೊಳಗೆ ತಕ್ಷಣ ಹೋದ ಕಾರಣ ಪ್ರಾಣಾಪಾಯ ಉಂಟಾಗುವುದು ತಪ್ಪಿದೆ.  ಮಧ್ಯಾಹ್ನ ವೇಳೆ ಘಟನೆ ಸಂಭವಿಸಿದ್ದರೂ ಕ್ರೇನ್ ಮುಖಾಂತರ ಲಾರಿಯನ್ನು ಮೇಲಕ್ಕೆತ್ತಲು ಅಸಾಧ್ಯವಾಗಿದೆ ಎಂದು ಮನೆಯವರು ಪತ್ರಿಕೆಗೆ ತಿಳಿಸಿದ್ದಾರೆ.

 

By Suddi9

Leave a Reply

Your email address will not be published. Required fields are marked *