ಮೂಡುಬಿದರೆ: ಪ್ರಸ್ತಾಪ, ಭರವಸೆಗಳಲ್ಲೇ ಅಗಲಗೊಳ್ಳುತ್ತಿರುವ ಹೆದ್ದಾರಿ. ಅಲ್ಲಲ್ಲಿ ಸಿಗುವ ತಿರುವುಗಳು. ಹೆಚ್ಚಿದ ವಾಹನ ದಟ್ಟನೆ, ಅದನ್ನು ತಡೆದುಕೊಳ್ಳಲು ಆಗದ ರಸ್ತೆಯ ರಚನೆ. ಎಚ್ಚರ ತಪ್ಪಿದರೆ, ಕಣ್ಣ ಮುಂದೆ ನಡೆಯುವ ಭೀಕರ ಘಟನೆ. ಸಾವು ನೋವುಗಳ ರಹದಾರಿಯಾಗಿ ಅಪಾಯದಿಂದ ಹೆದರಿಸುವ ರಾಷ್ಟ್ರೀಯ ಹೆದ್ದಾರಿ 169 ಇದು.
ಮಂಗಳೂರು-ಮೂಡುಬಿದರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ಹಲವಾರು ಕಾರಣಗಳಿಂದ ಇಂದು ಇದು ಅಪಘಾತವಲಯವಾಗಿ ಜನರನ್ನು ಕಾಡುತ್ತಿದೆ. ಮಂಗಳೂರಿನಿಂದ ಕಾರ್ಕಳದವರೆಗಿನ ಸುಮಾರು 55 ಕಿ.ಮೀ ಈ ಹೆದ್ದಾರಿಯಲ್ಲಿ ತಿಂಗಳಲ್ಲಿ ಹತ್ತಕ್ಕೂ ಅಧಿಕ ಅಪಘಾತಗಳ ಸಂಭವಿಸುತ್ತಿದ್ದು, ಕೆಲವು ಮಂದಿ ಪ್ರಾಣ ಕಳೆದುಕೊಂಡರೆ, ಹಲವರು ಗಂಭಿರವಾಗಿ ಗಾಯಗೊಳಗಾಗುತ್ತಿದ್ದಾರೆ. ಕಿರಿದಾದ ಹಾಗೂ ತಿರುವು ಇರುವ ಪ್ರದೇಶಗಳು ಅಪಘಾತಕ್ಕೆ ಪ್ರಮುಖ ಕಾರಣವಾಗಿದ್ದು, ಭಯದ ಜೊತೆ ಪ್ರಯಾಣ ಮಾಡುವ ಪರಿಸ್ಥಿತಿಯಿದೆ.
Accident zone (1)

Accident zone (3)

Accident zone (2)ಅಪಘಾತ ವಲಯ-ಅಪಾಯ:
ಹೆದ್ದಾರಿಯ ಕೆಲವೊಂದು ಪ್ರದೇಶಗಳಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಅಪಾಯಕಾರಿ ಅಪಘಾತ ವಲಯಗಳಾಗಿ ಪರಿವರ್ತನೆಗೊಂಡಿದ್ದೆ. ಬೆಳುವಾಯಿ ಸಮೀಪ, ಮೂಡುಬಿದರೆ-ಕಾರ್ಕಳಗಳನ್ನು ಸಂಪರ್ಕಿಸುವ ಕಾಂತಾವರ ಕ್ರಾಸ್ ಅಪಘಾತದಿಂದಲೇ ಕುಖ್ಯಾತಿ ಪಡೆದಿದೆ. ಇಲ್ಲಿ ವರ್ಷಕ್ಕೆ ಕನಿಷ್ಠ 2-3 ಭೀಕರ ಅಪಘಾತ ಸಂಭವಿಸುತ್ತಿದ್ದು, ರಾ.ಹೆ. ಪ್ರಮುಖ ಅಪಘಾತವಲಯಗಳಲ್ಲಿ ಒಂದಾಗಿದೆ. ಅಲ್ಲೇ ಪಕ್ಕ ಮಠದ ಕೆರೆ ಸಮೀಪದ ರಸ್ತೆಯಲ್ಲೂ ಕೂಡ ಅಪಘಾತಗಳು ಏರಿಕೆಯಾಗುತ್ತಿದ್ದು, ಅಪಾಯಕಾರಿ ಅಪಘಾತವಲಯವಾಗಿದೆ. ಕಳೆದ ವರ್ಷ ನಡೆದ ಬಸ್- ಆಟೋ ಅಪಾಘತಕ್ಕೆ ಒಂದೇ ಕುಟುಂಬದ ಮೂವರು ಪ್ರಾಣ ತೆತ್ತಿದ್ದರು. ಕಾಂತಾವರ ಕ್ರಾಸ್ ಬಳಿ ದಂಪತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಗಂಡ ಪ್ರಾಣ ಕಳೆದುಕೊಂಡಿದ್ದು, ಹೆಂಡತಿ ಗಂಭೀರವಾಗಿ ಗಾಯಗೊಂಡಿದ್ದರು. ಎರಡು ವರ್ಷಹಳ ಹಿಂದೆ ಕಾರ್ಕಳ ಅತ್ತೂರು ಜಾತ್ರೆಯಿಂದ ಬರುತ್ತಿದ್ದ ಭಕ್ತರ ಕಾರು ಹಾಗೂ ಬಸ್ಸ್ ಡಿಕ್ಕಿಯಿಂದ ಒಬ್ಬರು ಪ್ರಾಣ ಕಳೆಕೊಂಡಿದ್ದರು. ಮೂರು ತಿಂಗಳ ಹಿಂದೆ ಆಮ್ನಿ-ಬಸ್ಸ್ ಡಿಕ್ಕಿಯಾಗಿ ಸಾಮಾಜಿಕ ಮುಖಂಡರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಬನ್ನಡ್ಕ ಕ್ರಾಸ್ ಕೂಡ ಅಪಘಾತ ವಲಯವಾಗಿದ್ದು, ಎರಡು ತಿಂಗಳ ಹಿಂದೆ ಟೆಂಪೋ ಡಿಕ್ಕಿಯಾಗಿ ಇನ್ನೋವಾ ಕಾರಿನ ಚಾಲಕ ಸಾವಿಗೀಡಗಿದ್ದರು.
ಕಾರ್ಕಳ ಮಾರ್ಗವಾಗಿ ಹಾದುಹೋಗುವ ರಾ.ಹೆ. ಮೂಡುಬಿದರೆ ವಲಯದ ಅಮನಟ್ಟು ಕ್ರಾಸ್, ಕೆಸರಗದ್ದೆ ತಿರುವು ಕೂಡ ಅಪಘಾತವಲಯವಾಗಿದೆ. ಅಮನಬೆಟ್ಟು ಕ್ರಾಸ್‍ನಲ್ಲಿ ನಡೆದ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದ, ಖಂಡಿಗ ಕ್ರಾಸ್‍ನ ಅಪಘಾತವು ಕೂಡ ಒಬ್ಬರ ಪ್ರಾಣ ತೆಗೆದಿದೆ. ಕೆಸರಗದ್ದೆಯಲ್ಲಿ ಕಡಿದಾದ ತಿರುವಿರುವುದರಿಂದ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಬೀಳುವುದು ಸಾಮಾನ್ಯವಾಗಿದೆ.
ಡೆಡ್ಲಿ ಹಂಡೇಲು ಸುತ್ತು:
ಮೂಡುಬಿದರೆ-ಕಾರ್ಕಳಕ್ಕೆ ಹೋಗುವ ಹೆದ್ದಾರಿ ಈ ರೀತಿ ಅಪಾಯಕಾರಿಯಾದರೆ, ಮಂಗಳೂರು-ಮೂಡುಬಿದರೆಯಿಂದಾ ಹಾದುಹೋಗುವ ರಾ.ಹೆ.ಯಲ್ಲೂ ಹಲವಾರು ಸಾವು ನೋವುಗಳು ಸಂಭವಿಸುತ್ತಿದೆ. 5 ಅಪಾಯಕಾರಿ ತಿರುವುಗಳನ್ನು ಒಳಗೊಂಡಿರುವ
ಹಂಡೇಲುಸುತ್ತು ಅಪಾಯಕಾರಿ ಪ್ರದೇಶವಾಗಿದ್ದು, ಎರಡು ದಶಕಗಳಿಂದ ಇಲ್ಲಿ ಅಪಘಾತಗಳು ಸಂಭವಿಸುತ್ತಿದೆ. ತಿರುವಿನ ಜೊತೆ ಇಳಿಜಾರು ಪ್ರದೇಶವಿರುವ ಹಂಡೇಲುಸುತ್ತಿನಲ್ಲಿ ವಾಹನಗಳು ನಿಯಂತ್ರಣ ತಪ್ಪಿ ತೋಟ ಹಾಗೂ ಮನೆಗಳಿಗೆ ನುಗಿದ್ದ ನಿದರ್ಶನಗಳಿವೆ. ಈ ಹೆದ್ದಾರಿಯಲ್ಲಿ ವಿದ್ಯಾಗಿರಿ-ಮೂಡುಬಿದರೆ ಪೇಟೆಯನ್ನು ಸಂಪರ್ಕಿಸುವ ಸಮಗಾರ ಗುಂಡಿ ಪ್ರದೇಶ ಕೂಡ ಅಪಾಯಕಾರಿಯಾಗಿದೆ. ಈ ಮಾರ್ಗ ನೇರವಾಗಿರುವ ಕಾರಣ ವಾಹನಗಳು ಅತೀ ವೇಗವಾಗಿ ಬರುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸುವ ಅವಶ್ಯಕತೆಯಿದೆ.

By Suddi9

Leave a Reply

Your email address will not be published. Required fields are marked *