ಹಿಂದೂ ವಿರೋಧಿ ಕೃತ್ಯಗಳ ವಿರುದ್ಧ ಜಾಗೃತಿ ಮುಖ್ಯ;
ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ಹಿಂದೂಗಳ ಮೇಲಿನ ಆಕ್ರಮಣ, ಹಿಂದೂ ವಿರೋಧಿ ಕಾನೂನುಗಳು, ಸಾಧು ಸಂತರ ನಿಂದನೆ, ದೇವಸ್ಥಾನಗಳನ್ನು ಕೆಡಹುವುದು, ಮತಾಂತರ, ಲವ್ ಜಿಹಾದನಂತಹ ಹಿಂದೂ ಧರ್ಮದ ಅವನತಿಗೆ ಕಾರಣವಾಗಿರುವ ಇನ್ನೂ ಅನೇಕ ಪಿಡುಗುಗಳ ಬಗ್ಗೆ ಹಿಂದೂ ಬಾಂಧವರಲ್ಲಿ ಜಾಗೃತಿಯನ್ನು ಮೂಡಿಸಲು ಮತ್ತು ಎಲ್ಲಾ ಭೇದಭಾವವನ್ನು ತೊರೆದು ಪ್ರತಿಯೊಬ್ಬ ಹಿಂದುವೂ ತಾನೊಬ್ಬ ಹಿಂದೂ ಎಂದು ಸಂಘಟಿತರಾಗಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಷಾಢ ಕೃಷ್ಣ ದ್ವಿತಿಯಾದಂದು ಅಂದರೆ ದಿನಾಂಕ 02.08.2015 ರಂದು ಸಂಜೆ 5 ಗಂಟೆಗೆ ವಿದ್ಯಾರಣ್ಯಪುರದ ಶ್ರೀ ದ್ವಾರಕಾ ಕನ್ವೆನಶನ್ ಹಾಲ್‍ನಲ್ಲಿ ಹಿಂದೂ ಸಂಘಟನಾ ಮೇಳವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ. ಅಮೃತೇಶ ಎನ್.ಪಿ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಗುರುಪ್ರಸಾದ ಮತ್ತು ಸನಾತನ ಸಂಸ್ಥೆಯ ಸೌ. ಶೀಲಾ ನಾರಾಯಣ ಇವರು ಉಪಸ್ಥಿತರಿದ್ದರು.
ಹಿಂದೂ ಸಂಘಟನಾ ಮೇಳಕ್ಕೆ ಬೆಂಗಳೂರಿನ ಚಂದಾಪುರದಿಂದ ಸುಮಾರು 31 ಧರ್ಮಾಭಿಮಾನಿಗಳು ಚಂದಾಪುರದಿಂದ ವಿದ್ಯಾರಣ್ಯಪುರದ ವರೆಗೆ ಘೋಷಣೆಗಳನ್ನು ಕೂಗುತ್ತ ಅತ್ಯಂತ ವಿಜ್ರಂಭಣೆಯಿಂದ ಬಂದು ತಮ್ಮ ಧರ್ಮಪ್ರೇಮವನ್ನು ದರ್ಶಿಸಿದರು ಹಾಗೂ ಸಭೆಯಲ್ಲಿ 300 ಕ್ಕಿಂತಲೂ ಹೆಚ್ಚಿನ ಧರ್ಮಾಭಿಮಾನಿಗಳ ಉಪಸ್ಥಿತಿ ಇತ್ತು.ಸೌ. ಶೀಲಾ ನಾರಾಯಣ ಇವರು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರುಗಳಾದ ಪ.ಪೂ ಡಾ. ಆಠವಲೆಯವರ ಬಗ್ಗೆ ಸಭಿಕರಿಗೆ ತಿಳಿಸಿದರು ಹಾಗೂ ಸನಾತನ ಸಂಸ್ಥೆಯ ವತಿಯಿಂದ ಸಮಾಜಕ್ಕೆ ಆಧ್ಯಾತ್ಮದ ಬಗ್ಗೆ ಜ್ಞಾನವನ್ನು ತಲುಪಿಸಲು ನಡೆಸಲಾಗುವ ಧರ್ಮಶಿಕ್ಷಣ ವರ್ಗಗಳು, ವೇದಪಾಠಶಾಲೆ, ಎಸ್, ಎಸ್, ಆರ್. ಎಫ್ ಜಾಲತಾಣದ ಬಗ್ಗೆ ತಿಳಿಸಿದರು. ಅವರು ಆಧ್ಯಾತ್ಮ ವಿಶ್ವವಿದ್ಯಾಲಯವು ಸಂಕಲ್ಪನೆಯು ಅತ್ಯಂತ ವಿಶಿಷ್ಠವಾಗಿದೆ. ಪ್ರತಿಯೊಬ್ಬರಿಗೂ ಆಧ್ಯಾತ್ಮದ ಬಗೆಗಿನ ಜ್ಞಾನವನ್ನು ನೀಡಿ ಪುನಃ ಭಾರತವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನವು ನಡೆದಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ.ಅಮೃತೇಶ್ ಇವರು ಮಾತನಾಡುತ್ತ ಹಿಂದೂವಿಧಿಜ್ಞ ಪರಿಷತ್ ನಿಂದ ದೇವತೆಗಳ ವಿಡಂಬನೆಯನ್ನು ನಿಲ್ಲಿಸುತ್ತಿದ್ದೇವೆ, ಇದಕ್ಕೆ ತಮ್ಮೆಲ್ಲರ ಸಹಕಾರಬೇಕು. ನಾವು ಇದಕ್ಕಾಗಿ ಮಕ್ಕಳಿಗೆ ಬಾಲಸಂಸ್ಕಾರವನ್ನು ಕೊಡುತ್ತಿದ್ದೆವೆ, ಇತರೆ ಧರ್ಮದಲ್ಲಿ ತಮ್ಮ ಮಕ್ಕಳಿಗೆ ತಪ್ಪದೇ ಧರ್ಮಶಿಕ್ಷಣ ನೀಡುತ್ತಾರೆ, ಆದರೆ ನಮ್ಮ ಮಕ್ಕಳು ಮನೆಗೆ ಬಂದ ನಂತರ ಕಾರ್ಟೂನ್ ಅಥವಾ ಪೋಗೋ ನೋಡುತ್ತಾರೆ. ಈ ಎಲ್ಲಾ ಧರ್ಮಶಿಕ್ಷಣ ನಮಗೆ ಗುರುಪೂರ್ಣಿಮೆ ಮತ್ತು ಧರ್ಮಸಭೆಯ ಮಾಧ್ಯಮದಿಂದ ಸಿಗುತ್ತದೆ, ತಂದೆ ತಾಯಿ ಇವರು ಏನೂ ಮಾರ್ಗ ಹಾಕಿಕಟ್ಟಿರುತ್ತಾರೆ, ಹಾಗೇಯೇ ಮಕ್ಕಳು ನಡೆಯುತ್ತಾರೆ, ಅದಕ್ಕಾಗಿ ಮಕ್ಕಳಿಗೆ ಯೋಗ್ಯ ಧರ್ಮಶಿಕ್ಷಣವನ್ನು ನೀಡುವುದು ಅತ್ಯಂತ ಅವಶ್ಯಕವಾಗಿದೆ. ಅವರು ಧಾರ್ಮಿಕ ದತ್ತಿ ಇಲಾಕೆಗಳ ಬಗ್ಗ ಹೇಳುತ್ತ, ಕುಕ್ಕೆ ಸಬ್ರಮಣ್ಯ ದೇವಸ್ಥಾನದಲ್ಲಿ ಸುಪ್ರಭಾತವನ್ನು ಹಾಕಲು ನಿರ್ಬಂಧವನ್ನು ಹಾಕಲಾಯಿತು, ಅದರೆ ಅದರ ಜಾಡನ್ನು ಹುಡುಕುತ್ತ ಹೋದಾಗ ಅದು ಓರ್ವ ಸ್ವಾಮೀಜಿಯಿಂದ ಆಗಿದೆ ಎಂಬುದು ಗಮನಕ್ಕೆ ಬರುತ್ತದೆ, ಆದರೆ ಆ ಸ್ವಾಮೀಜಿಗೆ ಮುಸಲ್ಮಾನರ ಬೊಂಗಾಗಳ ಬಗ್ಗೆ ಯಾವುದೇ ತೊಂದರೆ ಇಲ್ಲ ಎನ್ನುವುದು ಆಶ್ಚರ್ಯಕರವಾಗಿದೆ. ನಾವೂ ಈ ಬಗ್ಗೆ ಏನೂ ಮಾಡದಿದ್ದರೆ ನಮ್ಮ ದೇವಸ್ಥಾನಗಳಲ್ಲಿ ಮಹಮ್ಮದ್ ಎಂಬ ಚೀಫ್ ಎಕ್ಸಿಕ್ಯೋಟಿವ್ ಬಂದರೆ ನಾವು ಯಾರಿಗೂ ಏನೂ ಕೇಳಲು ಆಗುವುದಿಲ್ಲ, ಕಾಲ ಮಿಂಚುವುದಕ್ಕಿಂತಲೂ ಮೊದಲು ನಾವು ಹೋರಾಡುವುದು ಅವಶ್ಯವಾಗಿದೆ. ಅದಕ್ಕಾಗಿ ಎಲ್ಲರೂ ಈ ವೇದಿಕೆಯ ಮುಖಾಂತರ ಜಾಗೃತರಾಗಬೇಕು. ಮತೀಯ ಭಾವನೆಗಳನ್ನು ಎತ್ತಿ ಹಿಡಿಯಲು ನಾನು ಬಂದಿಲ್ಲ ಕಾನೂನಿನ ಒಳಗೆ ಇದ್ದು ಹೋರಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ದೇವತೆಗಳನ್ನು ಜಾಹೀರಾತಿಗೆ ಬಳಸಿದರೆ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ ತೀರ್ಪನ್ನು ನೀಡಿದೆ. ಇದೆ ರೀತಿಯಲ್ಲಿ ಅನೇಕ ಮಾಧ್ಯಮದಿಂದ ದೇವತೆಗಳ ಅವಮಾನವಾಗುತ್ತಿದೆ, ಅದರ ಬಗ್ಗೆ ಯಾವುದೇ ಕಾನೂನು ಮಾರ್ಗ ಕೈಗೊಳ್ಳುತ್ತಿಲ್ಲ, ಇದೇ ಬೇರೆ ಧರ್ಮದ ದೇವರನ್ನು ಹಾಕಿ ಜಾಹೀರಾತಿನಲ್ಲಿ ಹಿಂದೂಗಳು ಮಾಡಿದರೆ ಏನೂ ಆಗಬಹುದು, ಅದಕ್ಕಾಗಿ ಇದೆಲ್ಲವನ್ನು ನಿಲ್ಲಸಲು ಹಿಂದೂವಿಧಿಜ್ಞ ಪರಿಷತ್ ಈ ಮಾಧ್ಯಮದಿಂದ ಹೋರಾಡುತ್ತಿದ್ದೆವೆ.




