ಬಂಟ್ವಾಳ, ಎ. 10: ದ.ಕ. ಈ ದೇಶವನ್ನು ಕಾಂಗ್ರೇಸ್ ಭಯೋತ್ಪಾದನೆಯ ತಾಣವಾಗಿ ಮಾರ್ಪಡಿಸಿದರೆ ಬಿ.ಜೆ.ಪಿ ಈ ಅಭಿವೃದ್ದಿಯಲ್ಲಿ ಪ್ರಥಮ ರಾಷ್ಟ್ರವಾಗಿ ಪ್ರವಾಸ ಕೆಂದ್ರವಾಗಿ ರೂಪಿಸುತ್ತೇವೆ ಎಂದು ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಎ. 10ರಂದು ಬಂಟ್ವಾಳ ವಿಧಾನ ಸಭಾಕ್ಷೇತ್ರದಲ್ಲಿ ಮತಯಾಚನೆ ಸಂಚಾರ ಸಂದರ್ಭ ಮಾತನಾಡುತ್ತಿದ್ದರು . ವೀರಪ್ಪ ಮೊಯಿಲಿ ಅವರ ರಾಜಕೀಯ ಭವಿಷ್ಯಕ್ಕಾಗಿ ಜಿಲ್ಲೆಯನ್ನು ಬರಾಡಗಿಸುವ ಎತ್ತಿನ ಹೊಳೆ ಯೋಜನೆ ಅನುಷ್ಠಾನಗೊಳಿಸಿದರು ಮತ್ತು ಮಂಗಳೂರನ್ನು ಭಯೋತ್ಪಾದನಾ ಕೇಂದ್ರವನ್ನಾಗಿ ರೂಪಿಸುವಲ್ಲಿ ಕಾಂಗ್ರೆಸ್ನ ಮಹತ್ವದ ಪಾತ್ರವಿದೆ ಜೊತೆಗೆ ಗೂಂಡಾ ವರ್ತನೆಯ ಪ್ರವ್ರತ್ತಿಯನ್ನು ಬೆಳೆಸಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
ಚಿತ್ರ ಕಿಶೋರ್ ಪೆರಾಜೆ.


ಮುಂದಿನ ಹಂತದಲ್ಲಿ ಬಿಜೆಪಿ ಟೂರಿಸಂ ಆಧಾರದಲ್ಲಿ ಅಭಿವೃದ್ದಿಪರ ಕೇಂದ್ರವಾಗಿ ಪರಿವರ್ತಿಸುವುದು.
ರಾಷ್ಟ್ರದ 60 ವರ್ಷಗಳ ಆಡಳಿತದಲ್ಲಿ ಸುದೀರ್ಘ ಆಡಳಿತದಲ್ಲಿ ಕಾಂಗ್ರೆಸ್ ಜನರನ್ನು ಬಡವರಾಗಿ, ದುರ್ಬರನ್ನಾಗಿ ಉಳಿಸಿಕೊಳ್ಳುವ ಕೆಲಸ ಮಾಡಿತ್ತು.
ಬಿಜೆಪಿ ಯುವಕರಿಗೆ ಉದ್ಯೋಗ, ಸ್ವಾವಲಂಬಿ ಬದುಕು, ನೆಮ್ಮದಿಯ ಜೀವನ, ಶಾಂತಿ ಸಾಮರಸ್ಯದ ಸಮಾಜವನ್ನು ನೀಡಲು ಬದ್ದವಾಗಿದೆ. ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಕೋಮು ಗಲಭೆ ಆಗಿಲ್ಲ.
ಕಾಂಗ್ರೆಸ್ ಆಡಳಿತ ಕೋಮುಗಲಭೆಗೆ ಪ್ರಚೋದನೆ ನೀಡುತ್ತದೆ. ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕೆಲವೇ ದಿನಗಳಲ್ಲಿ ಕ್ರಿಮಿನಲ್ ವ್ಯವಸ್ಥೆಗೆ ಬೀದಿಗೆ ಇಳಿದಿದೆ. ಜನರಲ್ಲಿ ಭೀತಿಯ ಸೃಷ್ಟಿ ಮಾಡುತ್ತಿದೆ ಎಂದರು.
ಕಾಲೇಜು ವಿದ್ಯಾರ್ಥಿನಿಯರ ಅತ್ಯಾಚಾರ ಕಾಂಗ್ರೆಸಿನ ಆಡಳಿತಕ್ಕೆ ಸಾಕ್ಷಿ. ಹಿಂದು ಯುವಕರ ಹತ್ಯೆ ಹಸಿರಾಗಿದೆ. ಭಯೋತ್ಪಾದನಾ ಶಕ್ತಿಗಳ ಜೊತೆಗೆ ಶಾಮೀಲಾದ ವ್ಯವಸ್ಥೆ ಬಹುಸಂಖ್ಯಾತರನ್ನು ಬೆದರಿಸಲು ಹೊರಟಿದೆ.
ಪ್ರಮುಖರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಮೋನಪ್ಪ ಭಂಡಾರಿ, ಪದ್ಮನಾಭ ಕೊಟ್ಟಾರಿ, ದಿನೇಶ್ ಭಂಡಾರಿ, ಜಿ.ಆನಂದ, ಪುರುಷ ಎನ್ ಸಾಲಿಯಾನ್, ಆನಂದ ಕುಲಾಲ್, ಉದಯ ಕುಮಾರ್ ಗೋವಿಂದಪ್ರಭು ಮತ್ತಿತರರು ಉಪಸ್ಥಿತರಿದ್ದರು



