ಬಂಟ್ವಾಳ : ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕದ ಆಶ್ರಯದಲ್ಲಿ ಎ.3ರಂದು ಜರಗಿದ ಯುಗಾದಿ ಹಬ್ಬ ಕಾರ್ಯಕ್ರಮದಲ್ಲಿ ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿಸೋಜಾ, ರಂಗಭೂಮಿ ಕಲಾವಿದ, ನಾಟಕಕಾರ ಎಚ್ಕೆ ನಯನಾಡು ಮತ್ತು ಮೀನುಗಾರಿಕಾ ಸೂಕ್ಷ್ಮಾಣು ಜೀವಿಶಾಸ್ತ್ರ ಪಿ.ಎಚ್.ಡಿ.ಪದವೀಧರ ಡಾ|ಪ್ರವೀಣ್ ರೈ ಕುಡರ್ುಮೆ ಅವರನ್ನು ಸಮ್ಮಾನಿಸಲಾಯಿತು.

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು , ಎಂ.ತುಂಗಪ್ಪ ಬಂಗೇರ, ಪದ್ಮಮೂಲ್ಯ ಅನಿಲಡೆ, ಗೌರವಾಧ್ಯಕ್ಷ ಜೇಮ್ಸ್ ಸುನಿಲ್ ಅಂಚನ್, ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ ಮತ್ತಿತರರು ಉಪಸ್ಥಿತರಿದ್ದರು.

