ಸುದ್ದಿ9ಬಂಟ್ವಾಳ: ರುಕ್ಮಯ ಪೂಜಾರಿಯವರಿಗೆ ಇನ್ನೂ ಜ್ಞಾನ ಬಂದಿಲ್ಲ. ಅವರು ಬಿಜೆಪಿ ಹಾಗೂ ಸಂಘಪರಿವಾರದವರ ಒತ್ತಡಕ್ಕೆ ಮಣಿದು ಏನೇನೋ ಮಾತನಾಡುವುದು ಸರಿಯಲ್ಲ. ಮೊದಲು ಸತ್ಯವನ್ನು ಮಾತನಾಡಲು ಕಲಿಯಲಿ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಬಿ.ಜನಾರ್ದನ ಪೂಜಾರಿ ಬಿಜೆಪಿಯ ಚುನಾವಣಾ ಪ್ರಚಾರ ಮುಖ್ಯಸ್ಥ ರುಕ್ಮಯ ಪೂಜಾರಿಯವರ ಟೀಕೆಗೆ ತಿರುಗೇಟು ನೀಡಿದ್ದಾರೆ.

1 (4)

2 (3)

3 (2)

4 (2)

janardana poojary matha yachane
janardana poojary matha yachane

ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲಿ ಬುಧವಾರ ಬಂಟ್ವಾಳ ತಾಲೂಕಿನಾದ್ಯಂತ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಪೊಳಲಿಯಲ್ಲಿ ಆರಂಭಿಸಿದ ಜನಾರ್ಧನ ಪೂಜಾರಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮನುಷ್ಯ ಕಣ್ಣಿದ್ದು ಕರುಡನಾಗಿರುವುದು ಸರಿಯಲ್ಲ. ಬಿಲ್ಲವರಿಗೆ ಪೂಜಾರಿ ಏನು ಮಾಡಿದ್ದಾರೆ ಎಂದು ಕೇಳುವ ರುಕ್ಮಯ ಪೂಜಾರಿಯವರೇ ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರ ದೇವಸ್ಥಾನ ನಿಮರ್ಾಣ, ಮಂಗಳೂರು ದಸರ ಆಯೋಜನೆ, ಅಲ್ಲಲ್ಲಿ ಸಮಾಜ ಮಂದಿರಗಳ ನಿಮರ್ಾಣ, ಪ್ರತಿ ವರ್ಗದ ಬಡಜನರಿಗೆ ಸಾಲಮೇಳ ಯೋಜನೆ , ಬಂಗಾರಪ್ಪನವರನ್ನು ಮುಖ್ಯಮಂತ್ರಿ ಮಾಡಿ ಮೂತರ್ೆದಾರಿಕೆಗೆ ಶಕ್ತಿ ನೀಡಿದ್ದು ನೀವಾ? ಎಂದು ಪ್ರಶ್ನಿಸಿದರು. ರುಕ್ಮಯ ಪೂಜಾರಿ ಹಾಗೂ ಬಿಜೆಪಿಯವರು ಮಾಧ್ಯಮಗಳಿಗೂ ಮೋಸ ಮಾಡಿದ್ದಾರೆ. ಖಾಲಿ ರಸ್ತೆಯ ಪೊಟೋ ತೋರಿಸಿ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಜನಬಂದಿಲ್ಲ ಎಂದು ಟೀಕಿಸಿದ್ದಾರೆ. ಕೇವಲ ಓಟಿಗಾಗಿ ಏನೇನೋ ಮಾತನಾಡುವುದು ಸರಿಯಲ್ಲ. ಚುನಾವಣೆಯಲ್ಲಿ ನನಗೆ ಬೆಂಬಲ ನೀಡುವುದಾಗಿ ಹೇಳಿ ಈಗ ನೀವು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು. ಇದೇ ರೀತಿ ಮುಂದುವರಿದರೆ ಎಲ್ಲಾ ವಿಚಾರವನ್ನು ಮಾಧ್ಯಮ ಮುಂದೆ ಬಹಿರಂಗ ಪಡಿಸುವುದಾಗಿ ಎಚ್ಚರಿಸಿದ ಪೂಜಾರಿ ರುಕ್ಮಯ ಪೂಜಾರಿಯವರು ಬಿಜೆಪಿಗೆ ಕೆಲಸ ಮಾಡಲಿ ಆದರೆ ಸುಳ್ಳು ಹೇಳುವುದು ಬೇಡ ಎಂದು ಕಿವಿ ಮಾತು ನುಡಿದರು.
ಬಳಿಕ ಅವರು ಕರಿಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಮುಂಜೆ, ಮತ್ತಿತರ ಕಡೆಗಳಲ್ಲಿ ಮತಯಾಚನೆ ಮಾಡಿದರು. ಅರಣ್ಯ ಸಚಿವ ಬಿ.ರಮನಾಥ ರೈ, ಪಕ್ಷ ಪ್ರಮುಖರಾದ ಚಂದ್ರ ಪ್ರಕಾಶ್ ಶೆಟ್ಟಿ, ಅಬ್ಬಾಸ್ ಅಲಿ, ಪಿಯೂಸ್ ರೊಡ್ರಿಗಸ್, ಕೃಪಾ ಅಮರ್ ಆಳ್ವ, ಬೂಮಿ ರಾಮಚಂದ್ರ, ಮಧುಸೂದನ್ ಶೆಣೈ, ಬಿ.ಎಚ್ ಖಾದರ್, ಸಾಹುಲ್ ಹಮೀದ್ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *