ಬಂಟ್ವಾಳ : ಸಿಂಡಿಕೇಟ್ ಬ್ಯಾಂಕ್ ಬಂಟ್ವಾಳ ಶಾಖೆಯಲ್ಲಿ ಗ್ರಾಹಕರ ಸಮಾವೇಶವು ಪ್ರಸಿದ್ಧ ಸ್ವರ್ಣೋದ್ಯಮಿ ಬಿ.ಸುರೇಶ್ ಬಾಳಿಗಾರವರ ಅಧ್ಯಕ್ಷತೆಯಲ್ಲಿ ಜರಗಿತು. ಹಿರಿಯ ಶಾಖಾ ಪ್ರಬಂಧಕ ರವೀಂದ್ರ ಬಾಳಿಗಾ ಬ್ಯಾಂಕಿನ ಸಾಧನೆ ಮತ್ತು ಗ್ರಾಹಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾತನಾಡಿದರು.
KAR_6586
ಮಂಗಳೂರು ಕ್ಷೇತ್ರೀಯ ಕಾರ್ಯಾಲಯದ ಅಧಿಕಾರಿ ಸುಧೀರ್ ಶೆಟ್ಟಿ ಗ್ರಾಹಕರ ಸಲಹೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದರು. ಹಿರಿಯ ಗ್ರಾಹಕ ಬಿ.ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ಎಂ.ಪಾಂಡುರಂಗ ನಾಯಕ್ ಸ್ವಾಗತಿಸಿದರು. ಲಕ್ಷ್ಮೀಶ ಉಪಾಧ್ಯಾಯ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *