ಮೂಡುಬಿದರೆ: ಟೌನ್ ಮಸೀದಿ ರಸ್ತೆಯಿಂದ ಇರುವೈಲ್ ಹೋಗುವ ರಸ್ತೆ ಹಾಗೂ ಅಮರಶ್ರೀ ಟಾಕೀಸ್ನಿಂದ ಹನುಮಂತ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಏಕಮುಖ ಸಂಚಾರವನ್ನು 15 ದಿನಗಳ ಕಾಲ ಪ್ರಾಯೋಗಿಕವಾಗಿ ಜಾರಿಗೊಳಿಸಿದರೆ ಉತ್ತಮ. ಇದರಿಂದ ಅಲ್ಲಿನ ಸಾಧಕ ಬಾಧಕಗಳು ಗೊತ್ತಾಗುತ್ತದೆ. ಬಳಿಕ ನಾಗರಿಕರಿಗೆ ಸೂಕ್ತ ವೆನಿಸಿದರೆ ಜಾರಿಗೆ ತರಬಹುದು. ಆಳ್ವಾಸ್ ಆಸ್ಪತ್ರೆ ರಸ್ತೆಯಲ್ಲಿ ಏಕಮುಖ ಸಂಚಾರವನ್ನು ನೇರವಾಗಿ ಜಾರಿಗೊಳಿಸಬಹುದು ಎಂದು ಮೂಡುಬಿದರೆ ಪೊಲೀಸ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಸಲಹೆ ನೀಡಿದ್ದಾರೆ.
ಮೂಡುಬಿದರೆ ಪುರಸಭಾಧ್ಯಕ್ಷೆ ರೂಪಾ.ಎಸ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಪೇಟೆಯಲ್ಲಿ ವಾಹನದಟ್ಟನೆ ಹೆಚ್ಚಾಗಿದ್ದು ನಾಗರಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಪೊಲೀಸ್ ಇಲಾಖೆಯೂ ಕೈಜೋಡಿಸಿ ಸೂಕ್ತ ಕ್ರಮ ಕೈಗೊಳ್ಳುಗೊಳ್ಳುತ್ತದೆ. ಆಟೋ ಪಾಕರ್್ಗಳನ್ನು ಪುರಸಭೆಯವರು ಗುರುತಿಸಿ, ಆಯಾ ಪಾಕರ್್ನ ಆಟೋಗಳಿಗೆ ಸಂಖ್ಯೆಯನ್ನು ನೀಡಿದರೆ, ನಗರ ಹಾಗೂ ಗ್ರಾಮಾಂತರ ಪಮರ್ಿಟ್ ಆಟೋಗಳ ಗೊಂದಲ ನಿವಾರಣೆಯಾಗುತ್ತದೆ. ನಿಯಮ ಉಲ್ಲಂಘಿಸುವ ಆಟೋಗಳ ವಿರುದ್ಧ ಪೊಲೀಸರೂ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಪೇಟೆಯಿಂದ ಆಳ್ವಾಸ್ ಆಸ್ಪತ್ರೆ ರಸ್ತೆಯಲ್ಲಿ ಮೆನೇಜಸ್ ಕಾಂಪ್ಲೆನ್ಸ್ನವರು ತಮ್ಮ ಕಟ್ಟಡದ ಪಾಕರ್ಿಂಗ್ಗೆ ಬೀಗ ಹಾಕಿರುವ ಕಾರಣ, ಅಲ್ಲಿನ ಗ್ರಾಹಕರು ರಸ್ತೆಯಲ್ಲೇ ವಾಹನ ಪಾಕರ್್ ಮಾಡುವಂತಾಗಿದೆ. ಇದರಿಂದ ವಾಹನ ಸವಾರರು, ಪದಾಚಾರಿಗಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಪುರಸಭೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುರಸಭಾ ಸದಸ್ಯ ನಾಗರಾಜ ಪೂಜಾರಿ ಒತ್ತಾಯಿಸಿದರು. ಮ್ಮ ಮುಂದೆ, ಪುರಸಭೆ ಜಾಗದಲ್ಲಿರುವ ಫುಟ್ಪಾತ್ನಲ್ಲೇ ಕಟ್ಟಡದವರು, ಹೊಟೇಲಿನವರು ಸರಪಳಿಗಳನ್ನು ಅಳವಡಿಸುತ್ತಿದ್ದಾರೆ. ಪುರಸಭೆ ಹಾಗೂ ಪೊಲೀಸರು ನಿದರ್ಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯೆ ರಮಣಿ ಆಗ್ರಹಿಸಿದರು. ಕೆಲವು ಕಡೆ ಸಕರ್ಾರಿ ಜಾಗದಲ್ಲಿ ಗುರುತಿಸಿದರೂ, ಇದಕ್ಕೆ ಪುರಕವಾದ ಕೆಲಸಗಳ ನಡೆಯುತ್ತಿಲ್ಲವೆಂದು ಮೂಡಾ ಅಧ್ಯಕ್ಷೆ ಸಭೆಯ ಗಮನಕ್ಕೆ ತಂದರು.
ಕೊಳಚೆ ಪ್ರದೇಶದ ಗೊಂದಲ:
ರಾಣಿಕೇರಿ ಪ್ರದೇಶ ಸಹಿತ ವಿವಿದೆಡೆ ಪ್ರದೇಶಗಳನ್ನು ಕೊಳಚೆ ಪ್ರದೇಶವೆಂದು ಪುರಸಭೆ ಘೋಷಿಸಿದೆ. ಮುಂದೆ ಅಲ್ಲಿ ಜನರಿಗೆ ಜಾಗ ಮಾರಾಟ ಮಾಡುವಾದ ಅಡಚಣೆಯಾಗಬಹುದು. ಈಗ ಅನುದಾನ ಸಿಗುತ್ತದೆ ಎಂದು ಘೋಷಣೆ ಮಾಡಿದರೆ ಇಲ್ಲಿ ನಿವಾಸಿಗಳು ತೊಂದರೆ ಅನುಭವಿಸಬಹುದು. ಕೊಳಚೆ ಪ್ರದೇಶದ ಬಗ್ಗೆ ಕಳೆದ ಸಭೆಯಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಚಚರ್ಿಸಲಾಯಿತೆಂದು ಎಂದು ನಮೂದಿಸಿದ್ದೀರಿ. ಆದರೆ ಚಚರ್ೆ ನಡೆದಿಲ್ಲ. ಈ ರೀತಿ ತಮಗೆ ತೋಚಿದಂತೆ ಬರೆಯಬಾರದು ಎಂದು ಪುರಸಭಾ ಅಧಿಕಾರಿಯನ್ನು ನಾಗರಾಜ್ ಪೂಜಾರಿ ತರಾಟೆಗೆ ತೆಗೆದುಕೊಂಡರು. ಕಳೆದ ಸಭೆಯಲ್ಲಿ ನಾನು ಅಧ್ಯಕ್ಷೆಯಾಗಿರುವಾಗ ಈ ಕುರಿತು ಚಚರ್ೆ ನಡೆದಿಲ್ಲ ಎಂದು ಮಾಜಿ ಅಧ್ಯಕ್ಷ ಸುಪ್ರಿಯಾ.ಡಿ.ಶೆಟ್ಟಿ ಹೇಳಿದಾಗ ಸಭೆಯಲ್ಲಿ ಇತರ ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸತೊಡಗಿದರು.
1994 ಗಜೆಟ್ನಲ್ಲೇ ಕೊಳಚೆ ಪ್ರದೇಶಗಳ ಘೋಷಣೆಯಾಗಿದ್ದು, ಕಡದಬೆಟ್ಟು, ನಾರಾಂಪಾಡಿ, ಅಲಂಗಾರು, ಲಾಡಿಯ ಕಾಲೋನಿಗಳನ್ನು ಕೊಳಚೆ ಎಂದು ಘೋಷಿಸಲಾಗಿದೆ. ಸಕರ್ಾರ ಇದಕ್ಕೆ ಅನುದಾನ ಬಿಡುಗಡೆ ಮಾಡುವ ಸಲುವಾಗಿ ಪುರಸಭೆಗೆ ಪ್ರಸ್ತಾಪ ಮತ್ತೆ ಬಂದಿದೆ ಎಂದು ಕಂದಾಯ ಅಧಿಕಾರಿ ಸ್ಪಷ್ಟೀಕರಣ ನೀಡಿದರು.
ಪುರಸಭೆ ಗಮನಕ್ಕೆ ತನ್ನಿ:
ಪುರಸಭಾ ಸದಸ್ಯರ ಗಮನಕ್ಕೆ ಬಾರದೆ ಶಹರಿ ರೋಜಾಗಾರ್ ಯೋಜನೆಯ ಮೂಲಕ ಫಲಾನುಭವಿಗಳಿಗೆ ಸಿಗುವ ಸವಲತ್ತುಗಳ ನೀಡಲಾಗುತ್ತಿದೆ. ಬ್ರೋಕರ್ ಮೂಲಕ ಫಲಾನುಭವಿಗಳನ್ನು ನೀಡುತ್ತೀದ್ದೀರಾ? ಪುರಸಭೆ ಆಡಳಿತವೆಂದರೆ ಯಾಕೆ ಅಷ್ಟು ನಿರ್ಲಕ್ಷ್ಯ ಎಂದು ಯೋಜನೆಯ ಅಧಿಕಾರಿಯನ್ನು ರತ್ನಾಕರ ದೇವಾಡಿಗ ತರಾಟೆಗೆ ತೆಗೆದುಕೊಂಡರು.
ಪುರಸಭೆಯಲ್ಲಿ ರೋಜ್ಗಾರಿ ಸಭೆ ನಡೆದರೂ ಪುರಸಭಾ ಅಧಿಕಾರಿ, ಅಧ್ಯಕ್ಷರ ಗಮನಕ್ಕೆ ತರುವುದಿಲ್ಲ. ಪುರಸಭೆಯಲ್ಲೇ ಇದ್ದು, ಆಡಳಿತಕ್ಕೆ ಮಾಹಿತಿ ನೀಡುವುದಿಲ್ಲ ಎಂದರೆ ಇದರ ಅರ್ಥವೇನು? ಎಂದು ಸದಸ್ಯರಾದ ಕೊರಗಪ್ಪ, ಸುರೇಶ್ ಕೋಟ್ಯಾನ್, ಪಿ.ಕೆ ಥೋಮಸ್ ಪ್ರಶ್ನಿಸಿದರು. ಮುಂದೆ ಪುರಸಭೆಯ ಗಮನಕ್ಕೆ ತಂದೇ ಮುನ್ನಡೆಯುತ್ತೇವೆ ಎಂದು ಯೋಜನೆಯ ಅಧಿಕಾರಿ ಮುರಳೀಧರ ಹೇಳಿದರು.
ಕಳಪೆ ಕಾಮಗಾರಿ:
ಪುರಸಭೆಯ ವಿವಿಧ ವಾಡರ್್ಗಳಲ್ಲಿ ಕಳಪೆಕಾಮಗಾರಿ ನಡೆಯುತ್ತಿದೆ ಎಂದು ಸದಸ್ಯರು ಆರೋಪಿಸಿದರು. ಕಳಪೆಕಾಮಗಾರಿ ಮಾಡುವ ಗುತ್ತಿಗೆದಾರನ್ನು ಬ್ಲ್ಯಾಕ್ಲೀಸ್ಟ್ಗೆ ಹಾಕಿದ ಬಳಿಕ ಮತ್ತೆ ಅವರಿಂದ ಯಾಕೆ ಕೆಲಸ ಮಾಡಿಸುವುದು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ದೊಡ್ಮನೆ ರಸ್ತೆಯಲ್ಲಿ ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲೇ ನೀರು ಹರಿದಾಡುವಂತಾಗಿದೆ. ನನ್ನ ವಾಡರ್್ಗೆ ಸಮರ್ಪಕ ರೀತಿಯಲ್ಲಿ ಅನುದಾನ ಮೀಸಲಿರಿಸುತ್ತಿಲ್ಲ. ನನ್ನ ಗಮನಕ್ಕೆ ಬಾರದೆ ಕೆಲವೊಂದು ನಿರ್ಣಯವನ್ನು ನನ್ನ ವಾಡರ್್ನ ಬಗ್ಗೆ ಕೈಗೊಳ್ಳುತ್ತೀರಿ. ವಾಡರ್್ನ ಕುರಿತು ತಾರತಮ್ಯ ನಿಲ್ಲಿಸಿ ಎಂದು ಸದಸ್ಯೆ ಪ್ರೇಮಾ ಸಾಲ್ಯಾನ್ ತರಾಟೆಗೆ ಪುರಸಭಾ ಅಧ್ಯಕ್ಷೆ ಹಾಗೂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಪಿಲಿಕುಳ ಮಾದರಿ ಕಲಕೆರೆ ಅಭಿವೃದ್ಧಿ:
ಜ್ಯೋತಿನಗರದ ಗಾಂಧಿಪಾಕರ್್ಗೆ ಲಕ್ಷ,ಲಕ್ಷ ಖಚರ್ಾಗುತ್ತಿದೆ ಎಂದು ಹೇಳುತ್ತೀರಿ. ಅಲ್ಲಿ ಹೋಗಿ ಪರಿಶೀಲಿಸಿದರೆ ನೀವು ವ್ಯಯಿಸಿದಕ್ಕಿಂತ ಕಡಿಮೆ ಖಚರ್ಾಗಿರುವುದು ಗಮನಕ್ಕೆ ಬರುತ್ತದೆ. ಎಷ್ಟು ಲಕ್ಷ ಅಥವಾ ಕೋಟಿ ಖಚರ್ಾಗಿದೆ ಎನ್ನುವ ಮಾಹಿತಿಯನ್ನು ಸದಸ್ಯರಿಗೆ ನೀಡಿ ಎಂದು ನಾಗರಾಜ ಪೂಜಾರಿ ಕೇಳಿದರು. ಅಲ್ಲಲ್ಲಿ ಸಣ್ಣಪುಟ್ಟ ಉದ್ಯಾನವನ ಮಾಡಿ ಹಣ ವ್ಯಯ ಮಾಡುವುದಕ್ಕಿಂತ ಮೂಡುಬಿದರೆ ದೊಡ್ಡ ಮಟ್ಟಿನ ಸುಂದರ ಉದ್ಯಾನವನ ಮಾಡಬಹುದು. ಪಿಲಿಕುಳ ಮಾದರಿಯಲ್ಲಿ ಕಡಲಕೆರೆಯನ್ನು ಅಭಿವೃದ್ಧಿಪಡಿಸಬಹುದು. ಇದು 10 ವರ್ಷ ಬಳಿಕ ಪೂರ್ಣಗೊಂಡರೂ, ದೊಡ್ಡ ಯೋಜನೆಗೆ ಈಗಲೇ ಮುನ್ನುಡಿ ಬರೆಯಬಹುದೆಂದು ಸದಸ್ಯ ಬಾಹುಬಲಿ ಪ್ರಸಾದ್ ಸಲಹೆ ನೀಡಿದರು.
ಅಲ್ವಿನ್ ಮಿನೇಜಸ್, ಅಬ್ದುಲ್ ಬಶೀರ್, ಹನೀಫ್ ಅಲಂಗಾರು, ಪ್ರಸಾದ್, ಮನೋಜ್ ಶೆಟ್ಟಿ ಮೊದಲಾದ ಸದಸ್ಯರು ಚಚರ್ೆಯಲ್ಲಿ ಪಾಲ್ಗೊಂಡರು.
………….
ಎಂಬಿಡಿ_ಜುಲೈ29_2
ಅಭಿವೃದ್ಧಿ ಕುರಿತು ಪುರಸಭೆಯಲ್ಲಿ ಚಚರ್ೆ ನಡೆಯಿತು.

