ಮೂಡುಬಿದರೆ:ಜುಲೈ28: ಪೊಲೀಸ್ ಠಾಣೆಯಿಂದ ವಿವಿಧ ಕಡೆಗಳ ಠಾಣೆಗಳಿಗೆ ವಗರ್ಾವಣೆಗೊಂಡಿರುವ ಪೊಲೀಸರಿಗೆ ಮೂಡುಬಿದರೆ ಠಾಣೆಯಲ್ಲಿ ಭಾನುವಾರ ಬೀಳ್ಕೊಡುವ ಸಮಾರಂಭ ನಡೆಯಿತು.
ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಣ್ಣ (ಸಿಸಿಬಿ ಮಂಗಳೂರು), ಪಿ.ಸಿಗಳಾದ ಹರೀಶ್ಚಂದ್ರ ಗೌಡ ಮತ್ತು ವಿನಯ ಕುಮಾರ್(ಬಜ್ಪೆ), ರಾಜು, ಮುಹಮ್ಮದ್ ಹುಸೇನ್ (ಮೂಲ್ಕಿ), ಸಂತೋಷ್ ಡಿ.ಕೆ (ಸುರತ್ಕಲ್) ಹಾಗೂ ಶಿವಪ್ರಸಾದ್ (ಸುರತ್ಕಲ್ ಟ್ರಾಫಿಕ್)- 7 ಜನ ಪೊಲೀಸರನ್ನು ಗೌರವಿಸಿ ಬೀಳ್ಕೊಡಲಾಯಿತು.
ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯ ಕೊರಗಪ್ಪ ಮುಖ್ಯ ಅತಿಥಿಗಳಾಗಿದ್ದರು. ಸಿಬ್ಬಂದಿಗಳು ಹಾಜರಿದ್ದರು.
……
