ಬಂಟ್ವಾಳ: ಪಕ್ಷ ವಿರೋಧಿ ಚಟುವಟಿಕೆಯ ನಡೆಸಿದ ಹಿನ್ನಲೆಯಲ್ಲಿ ಮೂವರು ವ್ಯಕ್ತಿಗಳನ್ನು ಪಕ್ಷದ ಜವಾಬ್ದಾರಿಮತ್ತು ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಟೈಲರ್ ಅವರ ಪ್ರಕಟಣೆ ತಿಳಿಸಿದೆ.

ಬಂಟ್ವಾಳ ಕ್ಷೇತ್ರ ಬಿಜೆಪಿ ಸಹಕಾರಿ ಪ್ರಕೋಷ್ಟದ ಸಂಚಾಲಕ ಪುರುಷೋತ್ತಮ ಸಾಲ್ಯಾನ್,ಕ್ಷೇತ್ರ ಸಮಿತಿ ಸದಸ್ಯ ಮಾಧವ ಕರ್ಬೆಟ್ಟು, ನರಿಕೊಂಬು ಬಿಜೆಪಿ ಸ್ಥಾನೀಯ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಕುಲಾಲ್ ಬೀಮಗದ್ದೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಜಾರಿ ಬರುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇವರು ಕಳೆದ ಕೆಲವುಸಮಯಗಳಿಂದ ಪಕ್ಷದ ಸಾಮೂಹಿಕ ನಿರ್ಧಾರಗಳಿಗೆ ವಿರುದ್ಧವಾಗಿ ಕಾರ್ಯಚರಿಸುತ್ತಾ, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಕಾರಣಕ್ಕಾಗಿ ಕ್ಷೇತ್ರದ ಸಂಚಾಲನ ಸಮಿತಿ ಸರ್ವಾನುಮತದ ನಿರ್ಣಯಕೈಗೊಂಡು ಜಿಲ್ಲಾಸಮಿತಿಗೆ ಶಿಫಾರಸ್ಸು ಮಾಡಿತ್ತು. ಇದೀಗ ಜಿಲ್ಲಾ ಸಮಿತಿ ನಿರ್ದೇ ಶನದಂತೆ ಈ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
